ಬುಧವಾರ, ಮೇ 12, 2021
24 °C

ಪುರವಂಕರ `ಪ್ರೇಮಾಂಜಲಿ ಸಂಗೀತೋತ್ಸವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರವಂಕರ `ಪ್ರೇಮಾಂಜಲಿ ಸಂಗೀತೋತ್ಸವ'

ಬೆಂಗಳೂರು ನಗರಿಗರಿಗೆ ಸಂಗೀತದ ರಸದೌತಣ ಉಣಬಡಿಸಲು ಪುರವಂಕರ ಸಂಸ್ಥೆ ತನ್ನ ಎಂಟನೇ ಆವೃತ್ತಿಯ ಪ್ರೇಮಾಂಜಲಿ ಉತ್ಸವ 2013 `ಡಿವೈನ್ ರಿಸೊನೆನ್ಸ್' ಆಯೋಜಿಸಿದೆ.ಇಪ್ಪತೈದು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಸಂಸ್ಥೆ ನಗರದಲ್ಲಿ ಸಂಗೀತದ ಹೊಳೆ ಹರಿಸಲು ಸಜ್ಜುಗೊಂಡಿದೆ. ಶನಿವಾರ ನಡೆಯಲಿರುವ `ಪ್ರೇಮಾಂಜಲಿ ಸಂಗೀತೋತ್ಸವ'ದಲ್ಲಿ ಐದು ಜನ ಸಂಗೀತ ದಿಗ್ಗಜರು ಪಾಲ್ಗೊಂಡು ಕಲಾ ರಸಿಕರಿಗೆ ರಸದೌತಣ ಉಣಬಡಿಸಲಿದ್ದಾರೆ.ಶಹನಾಯಿ ಮಾಂತ್ರಿಕ ಪಂಡಿತ್ ರಾಜೇಂದ್ರ ಪ್ರಸನ್ನ, ಸಾರಂಗಿ ಪ್ರವೀಣ ಉಸ್ತಾದ್ ಸರ್ವಾರ್ ಹುಸೇನ್, ಸಿತಾರ್ ವಾದಕ ಉಸ್ತಾದ್ ಶಾಹಿದ್ ಪರ್ವೆಜ್ ಖಾನ್, ಮ್ಯಾಂಡೊಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಒಂದೇ ವೇದಿಕೆಯಲ್ಲಿ ಕಲಾಪ್ರೇಮಿಗಳನ್ನು ಸಂಗೀತ ಸುಧೆಯಲ್ಲಿ ತೇಲಿಸಲು ಅಣಿಯಾಗಿದ್ದಾರೆ. ಈ ಐದು ಜನ ಖ್ಯಾತ ಕಲಾವಿದರ ಸಂಗೀತವನ್ನು ಕಣ್ತುಂಬಿಕೊಳ್ಳುವ ಅವಕಾಶ ಈಗ ನಗರಿಗರದ್ದು. ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವ ಕಲಾವಿದರ ಜುಗಲ್‌ಬಂಧಿ ಕಲಾಪ್ರೇಮಿಗಳನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲಿದೆ. ಅಂದಹಾಗೆ, ಈ ಸಂಗೀತೋತ್ಸವದ ಹೆಸರು `ದಿ ಡಿವೈನ್ ರೆಸನಸ್ಸ್'.ಸ್ಥಳ: ಕ್ರೈಸ್ಟ್ ಯುನಿವರ್ಸಿಟಿ ಆಡಿಟೋರಿಯಂ. ಸಂಜೆ 5.30. ಟಿಕೆಟ್ ಬೆಲೆ: ರೂ 2000,ರೂ1000, ರೂ500 ಮತ್ತು ರೂ250.

ಟಿಕೆಟ್‌ಗಳಿಗಾಗಿ 9243777970

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.