ಪುರಸಭೆ ದುಂದುವೆಚ್ಚ: ಆಕ್ರೋಶ

7

ಪುರಸಭೆ ದುಂದುವೆಚ್ಚ: ಆಕ್ರೋಶ

Published:
Updated:
ಪುರಸಭೆ ದುಂದುವೆಚ್ಚ: ಆಕ್ರೋಶ

ಕಡೂರು: ಪುರಸಭೆಗೆ ನಿರಂತರ ಹಣ ಹರಿದು ಬರುತ್ತಿದ್ದು, ಯಾವುದೇ ಯೋಜನೆಗಳನ್ನು ನಿರ್ಮಿಸದೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಮುಖ್ಯಾಧಿಕಾರಿ ಮಂಜುನಾಥ್ ವೆಚ್ಚ ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಆನಂದ್ ಆರೋಪಿಸಿದರು.ಪುರಸಭೆಯ ಸಭಾಂಗಣದಲ್ಲಿ ಸೋಮ ವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಗಮನ ಸೆಳೆದು ಅವರು ಮಾತನಾಡಿದರು. ಪುರಸಭೆಯಲ್ಲಿ ತಿಂಡಿ- ಊಟ, ಸಭೆಗೆ 20 ಸಾವಿರ ವೆಚ್ಚ ಮಾಡುತ್ತಿದ್ದಾರೆ. ಕಾಫಿಗೆ 200 ರೂ, ಊಟಕ್ಕೆ 500 ರೂಗಳನ್ನು ವೆಚ್ಚ ವಾಗಿದೆ ಎಂದು ಸದಸ್ಯರು ದೂರಿದರು. ಅಧ್ಯಕ್ಷೆ ರುಕ್ಸಾನ ಫರ‌್ವೀನ್ ಮತ್ತು ಮುಖ್ಯಾ ಧಿಕಾರಿ ಹಾರಿಕೆ ಉತ್ತರ ನೀಡಿ ಲೆಕ್ಕವನ್ನು ಮುಂದಿನ ಸಭೆಯಲ್ಲಿ ನೀಡುವುದಾಗಿ ತಿಳಿಸಿದರು.ಪುರಸಭೆಗೆ ಸಂಬಂಧಿಸಿದ ವ್ಯಾಜ್ಯಗಳಿಗಾಗಿ ವಕೀಲರಿಗೆ ನೀಡಿರುವ ವೆಚ್ಚವನ್ನು ಕೇಳಿದ ಸದಸ್ಯರಿಗೆ ಉತ್ತರಿಸದೆ ತಬ್ಬಿಬ್ಬಾದ ಅಧ್ಯಕ್ಷರು ಮೌನಕ್ಕೆ ಶರಣಾದರು. ಸದಸ್ಯರ ಗಲಾಟೆ ಹೆಚ್ಚಿದಂತೆ ಅಧ್ಯಕ್ಷರು ಮುಂದಿನ ಸಭೆಯಲ್ಲಿ ಯಾವ್ಯಾವ ವಕೀಲರಿಗೆ ಎಷ್ಟೆಷ್ಟು ಹಣ ನೀಡಿರುವ ವಿವರಣೆ ಕೊಡುವುದಾಗಿ ಸಭೆಗೆ ತಿಳಿಸಿದ ನಂತರ ಸಭೆಯಲ್ಲಿ ಗದ್ದಲದ ವಾತಾವರಣ ತಿಳಿಯಾಯಿತು.ಬರಗಾಲದ ಛಾಯೆಯಿಂದ  ಪಟ್ಟಣದಲ್ಲಿ ಕುಡಿಯುವ ನೀರಿಗೆ ಕೆಲವು ಬಡಾವಣೆಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ. 24 ಬೋರ್‌ಗಳಿಂದ ನೀರು ದೊರೆಯುತ್ತಿದ್ದು, ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೆ ಸಮಸ್ಯೆ ತಲೆದೋರುತ್ತಿದ್ದು ಸದಸ್ಯರೆಲ್ಲ ಜನರೇಟರ್ ಸಹಾಯದಿಂದ ಯಾವುದೇ ವಾರ್ಡ್‌ಗಳಿಗೆ ತೊಂದರೆಯಾಗದಂತೆ ನೀರನ್ನು ಪೂರೈಸ ಬೇಕೆಂದು ಸಲಹೆ ನೀಡಿದರು. ತೀವ್ರ ಸಮಸ್ಯೆ ತಲೆದೋರಿದರೆ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ವುದಾಗಿ ಭರವಸೆಯನ್ನು ನೀಡಿದರು. ನಿಯಮ 1964/63 ರಂತೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಸ್ಥಾನಗಳಿಗೆ ಚುನಾವಣೆ ಬಗ್ಗೆ  ಕೆ.ಜಿ.ಲೋಕೇಶ್, ಆನಂದ್,ಕೆ.ಸಿ.ರಮೇಶ್,ಬಷೀರ್ ಸಾಬ್, ರೇಣುಕಾರಾಧ್ಯ, ಸರಸ್ಪತಿ ಕೃಷ್ಣಮೂರ್ತಿ, ಜಯಮ್ಮ, ಕೆ.ಆರ್.ಮಹೇಶ್ ಆಕ್ಷೇಪ ವ್ಯಕ್ತಪಡಿಸಿದರು.  23 ನೇ ವಾರ್ಡ್‌ನಲ್ಲಿ ನಾಯಿ ಹಿಡಿದಿಲ್ಲ ಎಂದು ಸದಸ್ಯೆ ಜಯಮ್ಮ ಆಕ್ಷೇಪವ್ಯಕ್ತ ಪಡಿಸಿದರು.ಸಭೆಯಲ್ಲಿ ಸದಸ್ಯರಾದ ಕೆ.ಜಿ.ಲೋಕೇಶ್,ರೇಣುಕಾರಾಧ್ಯ,ಬಷೀರ್ ಸಾಬ್, ಸರಸ್ಪತಿ, ಜಯಮ್ಮ, ಮಹೇಶ್, ಆನಂದ್, ರಾಜುಗೋಪಾಲ್,ಮಂಜುನಾಥ್ ಭಂಡಾರಿ ಶ್ರೀನಿವಾಸ್, ಸುರೇಶ್, ಕೃಷ್ಣಕುಮಾರ್,ಲೋಕೇಶ್, ಸೋಮೆಶ್, ರುದ್ರಾಂಬಿಕ ವರದರಾಜು, ಜಿ.ಸೋಮಯ್ಯ, ಕೆ.ವಿ.ವಾಸು, ಲಕ್ಕಣ್ಣ ಇದ್ದರು. 

     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry