ಗುರುವಾರ , ಏಪ್ರಿಲ್ 15, 2021
22 °C

ಪುರಾತನ ದೇವಾಲಯ ಪುನರುಜ್ಜೀವನಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: 800 ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎನ್ನಲಾಗಿರುವ ನಂಜಾಪುರ ಬಳಿಯ ಕಾಲಭೈರವೇಶ್ವರ ದೇವಾಲಯಕ್ಕೆ ಈಗ ಭಕ್ತರ ನೆರವಿನಿಂದ ಕಾಯಕಲ್ಪಕ್ಕೆ ಸಿದ್ಧತೆ ಅರಂಭಿಸಲಾಗಿದೆ.ದೇವಾಲಯದ ಪುನರುಜ್ಜೀ ವನಕ್ಕಾಗಿ ಮತಿಘಟ್ಟ ಸುತ್ತಮುತ್ತಲಿನ ಭಾಗದ 5 ಹಳ್ಳಿ ಗ್ರಾಮಸ್ಥರು ಹಾಗೂ ದೂರದ ನಗರಗಳ ಭಕ್ತರು ಭಾನು ವಾರ ಸಭೆ ಸೇರಿ ಮುಂದಿನ ಕಾರ್ಯ ಕಲಾಪಗಳ ಬಗ್ಗೆ ಚರ್ಚೆ ನಡೆಸಿದರು.ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿರುವ ದೇವಾಲಯವನ್ನು ಮಣ್ಣು ಗುಡ್ಡೆ ಆವರಿಸಿದ್ದು ಗಿಡಕಂಟಿಗಳಿಂದ ಮುಚ್ಚಿಹೋಗಿತ್ತು. ಸ್ಥಳಿಯರು ಒಗ್ಗೂಡಿ ಗಿಡಗಳನ್ನು ತೆರವುಗೊಳಿಸಿ ದ್ವಾರಕ್ಕೆ ಅಡ್ಡಲಾಗಿದ್ದ ಮಣ್ಣನ್ನು ಹೊರಹಾಕಿದ್ದೇವೆ. ದೇವಾಲಯ ಶಿಥಿಲವಾಗಿದ್ದು, ಕಾಡು ಪ್ರಾಣಿಗಳು ವಾಸಿಸುವ ಗುಹೆಯಂತಾಗಿದೆ.ದೇವಾಲಯಕ್ಕೆ ಉಂಬುಳಿ ಬಿಟ್ಟಿದ್ದ ಜಮೀನು ಹತ್ತಾರು ವರ್ಷಗಳ ಹಿಂದೆ ಅಂದಿನ ಅರ್ಚಕರು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. 5 ಹಳ್ಳಿ ಮಾತ್ರವಲ್ಲದೆ ದೂರದ ನಗರ ಪ್ರದೇಶಗಳ ಭಕ್ತರನ್ನು ದೇವಾಲಯ ಹೊಂದಿರುವುದರಿಂದ ಜೀರ್ಣೋ ದ್ಧಾರಕ್ಕೆ ಕೈಹಾಕಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು.ಎಂಜಿನಿಯರ್ ಮರುಳೀಧರ್, ಬ್ರಾಹ್ಮಣ ಸಮಾಜದ ಮುಖಂಡರಾದ ಮತಿಘಟ್ಟ ನರಸಿಂಹಮೂರ್ತಿ, ವಿಶ್ವೇಶ್ವರಯ್ಯ, ಘಟ್ಟದಹಳ್ಳಿ ಸುಬ್ಬರಾವ್, ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಲ್.ಬಿ.ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಗುರುಸ್ವಾಮಿ, ಮಾಜಿ ಸದಸ್ಯ ನೀಲಕಂಠೇಗೌಡ, ಕೃಷಿ ಪತ್ತಿನಬ್ಯಾಂಕ್ ಅಧ್ಯಕ್ಷ ಎಲ್.ಆರ್.ಬಸವರಾಜು, ಬಿದರು ಸಹಕಾರ ಸಂಘದ ಕಾರ್ಯದರ್ಶಿ ಮಹೇಶ್, ಮುಖಂಡರಾದ ವೀರಪ್ಪಣ್ಣ, ಶಿವಣ್ಣ, ಪುಟ್ಟಸ್ವಾಮಿ, ಮಂಜುನಾಥ್ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.