ಬುಧವಾರ, ಜನವರಿ 29, 2020
23 °C

ಪುರುಷ– ಸ್ತ್ರೀಯರ ನರತಂತು ಜೋಡಣೆ ಭಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಮಹಿಳೆಯರಿಗೆ ನೆನಪಿನ ಶಕ್ತಿ ಹೆಚ್ಚು, ಪುರುಷರು ಏಕ­ಕಾಲಕ್ಕೆ ಹಲವು ಕಾರ್ಯಗಳನ್ನು ನಿಭಾ­ಯಿಸಲಾರರು–  ಇಬ್ಬರ ಮಿದುಳಿನ ನರತಂತುಗಳು ಭಿನ್ನ ರೀತಿಯಲ್ಲಿ ಬೆಸೆದು­ಕೊಂಡಿರುವುದೇ ಇದಕ್ಕೆ ಕಾರಣ ಎಂದು ಅಧ್ಯಯನವೊಂದು ಹೇಳಿದೆ.ಭಾರತೀಯ ಮೂಲದ ವಿಜ್ಞಾನಿ­ಯೊಬ್ಬರು ಈ ಕುರಿತು ಸಂಶೋಧನೆ ನಡೆಸಿದ್ದು, ಮಿದುಳಿನ ನರತಂತುಗಳ ಜೋಡಣೆಯಲ್ಲಿನ ವ್ಯತ್ಯಾಸವನ್ನು ಪತ್ತೆಹಚ್ಚಿದ್ದಾರೆ. ಕೆಲವು ಕೆಲಸಗಳನ್ನು ನಿರ್ವಹಿಸುವುದ­ರಲ್ಲಿ ಪುರುಷರು ನಿಸ್ಸೀಮ­ರಾಗುವುದಕ್ಕೆ ಹಾಗೂ ಇನ್ನು ಕೆಲವು ಕಾರ್ಯಗಳನ್ನು ನಿಭಾಯಿಸುವುದರಲ್ಲಿ ಮಹಿಳೆಯರದು ಎತ್ತಿದ ಕೈ ಆಗಿರುವುದಕ್ಕೆ ಈ ನರತಂತು ಜೋಡಣೆಯ ವ್ಯತ್ಯಾಸವೇ ಕಾರಣ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲ­ಯದ ರೇಡಿಯಾಲಜಿ ತಜ್ಞೆ ಪ್ರೊ.­ರಾಗಿಣಿ ವರ್ಮಾ ಪ್ರತಿಪಾದಿಸಿದ್ದಾರೆ.ಪುರುಷರ ಮಿದುಳಿನಲ್ಲಿನ ನರತಂತು­ಗಳು ವಿಷಯ ಗ್ರಹಣ ಹಾಗೂ ಸಂಯೋಜಿತ ಕ್ರಿಯೆಗೆ ಪೂರಕ­ವಾಗು­ವಂತೆ ಜೋಡಣೆಯಾಗಿದ್ದರೆ, ಮಹಿಳೆ­ಯರ ಮಿದುಳಿನ ನರತಂತುಗಳು ವಿಶ್ಲೇಷ­ಣಾತ್ಮಕ ಸಾಮರ್ಥ್ಯ ಹಾಗೂ ಅಂತಃಪ್ರಜ್ಞೆಯ ನಡುವಿನ ಸಂವಹನಕ್ಕೆ ಪೂರಕವಾಗುವಂತೆ ಬೆಸೆದುಕೊಂಡಿವೆ ಎಂಬುದು ಅವರ ವಿವರಣೆ.

ಪ್ರತಿಕ್ರಿಯಿಸಿ (+)