ಗುರುವಾರ , ಜೂಲೈ 9, 2020
23 °C

ಪೂರ್ಣದಲ್ಲಿ ಮಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ಣದಲ್ಲಿ ಮಾಲಾ

ಬನ್ಯಾನ್ ಟ್ರಿ ಇವೆಂಟ್ಸ್: ‘ಪೂರ್ಣ’ ಸಂಗೀತ ಸುಧೆಯ ಅಂಗವಾಗಿ ಶುಕ್ರವಾರ ಮಾಲಾ ರಾಮದೊರೈ ಅವರಿಂದ ಖ್ಯಾಲ್, ಠುಮ್ರಿ ಮತ್ತು ಭಜನ್

‘ಪೂರ್ಣ’ ಬನ್ಯಾನ್ ಟ್ರಿ ಇವೆಂಟ್ಸ್‌ನ ವಿಶೇಷ ಕಾರ್ಯಕ್ರಮ. ಬೇರೆ, ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಸ್ಪರ್ಧಾತ್ಮಕ ಜಗತ್ತಿನ ಅತಿ ಒತ್ತಡದ ಮಧ್ಯೆಯೂ ಸಂಗೀತ, ನೃತ್ಯದ ಬಗ್ಗೆ ತಮಗಿರುವ ಆಸಕ್ತಿ ಕಾಯ್ದುಕೊಂಡು ಬರುವ ವಿಶಿಷ್ಟ ವ್ಯಕ್ತಿಗಳು, ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಆಯೋಜಿಸಲಾದ ಕಾರ್ಯಕ್ರಮ.ವೃತ್ತಿಯಿಂದ ಶಿಕ್ಷಣ ತಜ್ಞರಾಗಿರುವ ಮಾಲಾ ರಾಮದೊರೈ ಅವರು, ಟಾಟಾ ಎಲೆಕ್ಸಿ ಅಧ್ಯಕ್ಷ ಮತ್ತು ಟಿಸಿಎಸ್ ಉಪಾಧ್ಯಕ್ಷರೂ ಆದ ಎಸ್. ರಾಮದೊರೈ ಅವರ ಪತ್ನಿ.  ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ ಹಿಡಿತ ಸಾಧಿಸಿದವರು.  ಟಿಸಿಎಸ್‌ನ ಸಾಮಾಜಿಕ ಹೊಣೆಗಾರಿಕೆ ಕೆಲಸಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮುಂಬೈನ ಎಸ್‌ಎನ್‌ಡಿಟಿ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್‌ ಪದವಿ ಪಡೆದಿದ್ದಾರೆ. ಡಾ. ಪ್ರಭಾ ಅತ್ರೆ, ಯಶವಂತ್ ಬುವಾ ಜೋಶಿ ಅವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಪ್ರಸ್ತುತ ಸತ್ಯಶೀಲ ದೇಶಪಾಂಡೆ ಅವರ ಬಳಿ ರಿಯಾಜ್ ಮುಂದುವರಿಸಿದ್ದಾರೆ. ಕರ್ನಾಟಕ ಸಂಗೀತದ ದಿಗ್ಗಜರಾದ ಲಾಲ್ಗುಡಿ ಜಯರಾಮನ್ ಬಳಿ ಕರ್ನಾಟಕ ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾರೆ.

ಸ್ಥಳ: ಅಲಯನ್ಸ್ ಫ್ರಾನ್ಸೆ, ವಸಂತ ನಗರ. ಸಂಜೆ 7. ಪ್ರವೇಶ ಉಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.