ಬಾಗಲಕೋಟೆ: ಸ್ವಾಭಿಮಾನ ಚಳವಳಿಯ ಮೂಲಕ ದೇಶದಲ್ಲಿ ಮೌಢ್ಯತೆ ಮತ್ತು ಧಾರ್ಮಿಕ ಕಂದಾಚಾರಗಳ ವಿರುದ್ಧ ಜನಜಾಗೃತಿ ಮೂಡಿಸಿದ ಪೆರಿಯಾರ್ ರಾಮಸ್ವಾಮಿ ಅವರ ತತ್ವ ಚಿಂತನೆಯ ಪ್ರಸ್ತುತತೆ ಕುರಿತು ಇದೇ 25ರಂದು ಬೆಳಿಗ್ಗೆ 11.30ಕ್ಕೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸರ್ವಜನ ಸಮಾಜ ವೇದಿಕೆ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಹಾರಾಜನವರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುವ ವಿಚಾರ ಸಂಕಿರಣವನ್ನು ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ. ಗೋಪಾಲ್ ಉದ್ಘಾಟಿಸುವರು ಎಂದು ಹೇಳಿದರು.

ವಿಚಾರವಾದಿ ಕೆ.ಎಸ್. ಭಗವಾನ್ ಮುಖ್ಯ ಭಾಷಣ ಮಾಡಲಿದ್ದಾರೆ. ಶಾಸಕ ಸತೀಶ್ ಜಾರಕಿಹೋಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಎಸ್ಎಸ್ವಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸೈಯ್ಯದ್ ರೋಷನ್ ಮುಲ್ಲಾ, ಡಾ. ದೇವರಾಜ ಪಾಟೀಲ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಕಾಂಗ್ರೆಸ್ ಮುಖಂಡ ಶ್ರಿಶೈಲ ದಳವಾಯಿ, ಡಿಡಿಪಿಐ ಎಸ್.ಆರ್.ಮನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವಾರಜ ಹೂಗಾರ, ಎಚ್.ಬಿ. ಧರ್ಮನ್ನವರ, ಲಾಲಹುಸೇನ ಕಂದಗಲ್, ಜಿ.ಎಂ. ಸಿಂಧೂರ, ಶಂಕರಗೌಡ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮನೋಹರ ಕದಂ, ಪ್ರೇಮನಾಥ ಗರಸಂಗಿ, ವಿವೇಕಾನಂದ ಚಂದರಗಿ,ಲಕ್ಷ್ಮಣ ಮರಡಿತೋಟ, ಭೀಮನಗೌಡರ ಭಜನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.