ಪೆಸಿಟ್ ಪದವಿ ಸಂಭ್ರಮ

ಭಾನುವಾರ, ಮೇ 19, 2019
34 °C

ಪೆಸಿಟ್ ಪದವಿ ಸಂಭ್ರಮ

Published:
Updated:

ನಾಡಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  (ಪೆಸಿಟ್) ಸ್ವಾಯತ್ತಗೊಂಡ ನಂತರ ಮೊದಲ ಬಾರಿಗೆ ಪದವಿ ದಿನವನ್ನು ಆಚರಿಸಿತು.ಸಂಸ್ಥೆಯ 2007-2011 ಸಾಲಿನ 800ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಇದೊಂದು ವಿಶೇಷ ಮತ್ತು ಹೆಮ್ಮೆಯ ದಿನವಾಗಿತ್ತು. ಭಾರೀ ಉತ್ಸಾಹ ಮತ್ತು ಉಲ್ಲಾಸಗಳ ನಡುವೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ಮಹೇಶಪ್ಪ, ಪಿಇಎಸ್ ಸಂಸ್ಥೆಗಳ ಸ್ಥಾಪಕ ಡಾ.ಎಂ.ಆರ್.ದೊರೆಸ್ವಾಮಿ, ಅಧ್ಯಕ್ಷ ಡಾ.ಕೆ. ಪಾಪಾರಾವ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೊ.ಡಿ.ಜವಾಹರ್‌ಪ್ರಾಚಾರ್ಯ ಕೆ.ಎನ್. ಬಾಲಸುಬ್ರಹ್ಮಣ್ಯ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.`ಇಂದು ನಮ್ಮ ಮುಂದಿರುವುದು ಸ್ಪರ್ಧಾತ್ಮಕ ಜಗತ್ತು. ನಿಮ್ಮ ವೃತ್ತಿ ಹಾಗೂ ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಹೋರಾಡಬೇಕಾಗುತ್ತದೆ. ಮುನ್ನಡೆವ ಹಾದಿಯ ಬಗ್ಗೆ ಸ್ಪಷ್ಟವಾದ ಕಲ್ಪನೆ ನಿಮಗಿರಲಿ. ಗುರಿಯಿಂದ ದೂರವಾಗದಿರಿ.  ಎಲ್ಲಾ ಅಡಚಣೆಗಳನ್ನೂ ಮೀರಿ ನಿಮ್ಮ ಕನಸುಗಳನ್ನು ನನಸಾಗಿಸಿ ಸಂತಸದ ಜೀವನ ನಡೆಸಿ~ ಎಂದು ಅತಿಥಿಯಾಗಿದ್ದ ಅಮೆರಿಕದ ಇಲಿನಾಯ್ಸ ವಿವಿ ಅಧ್ಯಾಪಕ ಡಾ.ಪಿ.ಆರ್.ಕುಮಾರ್ ಕಿವಿಮಾತು ಹೇಳಿದರು.1972ರಲ್ಲಿ ಕೇವಲ 40 ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿನ ಬಾಡಿಗೆ ವ್ಯಾಯಾಮ ಶಾಲೆ ಒಂದರಲ್ಲಿ ಆರಂಭವಾದ ಪಿಇಎಸ್ ಸಮೂಹ ಇಂದು ದೇಶದಲ್ಲೇ ಅತ್ಯಂತ ಹೆಸರುವಾಸಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಆಂಧ್ರ ಮತ್ತು ಕರ್ನಾಟಕದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಮ್ಯೋನೇಜ್‌ಮೆಂಟ್ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ 45ಕ್ಕೂ ಮೇಲ್ಪಟ್ಟ ಶೈಕ್ಷಣಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ. ಇದರ ಶಿಕ್ಷಣ ಸಂಸ್ಥೆಯಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry