ಶನಿವಾರ, ಜೂನ್ 12, 2021
28 °C

ಪೇಟೆಯಲ್ಲಿ ಮತ್ತೆ ಅಸ್ಥಿರತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವದೆಹಲಿ(ಪಿಟಿಐ): ಲೋಕಸಭಾ ಚುನಾವಣೆಗೆ ಸಂಬಂ­ಧಿಸಿದ ಬೆಳವಣಿಗೆ­ಗಳು, ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಮತ್ತು ಆರ್ಥಿಕ ಉತ್ತೇಜನ ಕೊಡುಗೆಗಳ ಕಡಿತಕ್ಕೆ ಸಂಬಂಧಿ­ಸಿದಂತೆ ಅಮೆರಿಕದ ‘ಫೆಡರಲ್‌ ರಿಸರ್ವ್‌’ ಅನುಸರಿಸುತ್ತಿ ರುವ ಕ್ರಮಗಳು ಈ ವಾರ ಷೇರುಪೇಟೆ ವಹಿ­ವಾಟಿನ ಮೇಲೆ ನಕಾರಾತ್ಮಕ ಪರಿ ಣಾಮ ಬೀರುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.



‘ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ 2015ರ ಮಧ್ಯಂತರದಿಂದ ಆರ್ಥಿಕ ಉತ್ತೇ­ಜನ ಕೊಡುಗೆಗಳನ್ನು ಕಡಿತ­ಗೊ ಳಿಸಿ ಬಡ್ಡಿ ದರ ಏರಿಕೆ ಮಾಡಲು ನಿರ್ಧ ರಿಸಿದೆ. ಇದರಿಂದ ಕಳೆದ ವಾರಾಂತ್ಯದಲ್ಲಿ ದೇಶೀಯ ಹಣಕಾಸು ಮಾರುಕಟ್ಟೆ­ಯಲ್ಲಿ ಮತ್ತೆ ಅಸ್ಥಿರತೆ ಮೂಡಿದೆ. ಡಾಲರ್‌ ವಿರುದ್ಧ ಚೇತರಿಕೆ ಕಂಡಿದ್ದ ರೂಪಾಯಿ ಮೌಲ್ಯ ಮತ್ತೆ ಕುಸಿದಿದೆ. ಈ ಎಲ್ಲ ಅಂಶಗಳು ಈ ವಾರ ಮತ್ತೆ ನಕಾರಾ ತ್ಮಕ ಪರಿಣಾಮ ಬೀರುವ ಸಾಧ್ಯತೆ­ಗಳಿವೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಮುಖ್ಯಸ್ಥ ಜಯಂತ್‌ ಮಂಗ್ಲಿಕ್‌ ಅಭಿಪ್ರಾಯ­ಪಟ್ಟಿದ್ದಾರೆ.



ಬ್ಯಾಂಕಿಂಗ್‌, ಎಫ್‌ಎಂಸಿಜಿ, ಐಟಿ ಸೇರಿ ದಂತೆ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕಂಪೆನಿಗಳಿಗೆ ಗಳಿಕೆಗೆ ಅವಕಾಶ ಇದೆ. ಆದರೆ, ಏ. 1ಕ್ಕೆ ‘ಆರ್‌ಬಿಐ’ ಹಣ­ಕಾಸು ನೀತಿ ಇರುವು­ದರಿಂದ  ಹೂಡಿಕೆ­ದಾ­ರರು ಖರೀದಿಗಿಂತ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ’ ಎಂದು ಬೊನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆ ಉಪಾಧ್ಯಕ್ಷ ರಾಕೇಶ್‌ ಗೋಯಲ್‌ ಹೇಳಿದ್ದಾರೆ.



ಕಳೆದ ವಾರದಲ್ಲಿ ಮುಂಬೈ ಷೇರು ಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಒಟ್ಟು 54 ಅಂಶಗಳಷ್ಟು ಏರಿಕೆ ಕಂಡು 21,755 ಅಂಶಗಳಿಗೆ ವಹಿವಾಟು ಕೊನೆಗೊ­ಳಿಸಿದೆ. ರಾಷ್ಟ್ರೀ­ಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಸೂಚ್ಯಂಕ ‘ನಿಫ್ಟಿ’ 6,494 ಅಂಶ­ಗಳಲ್ಲಿ ವಹಿವಾ­ಟು ಕೊನೆ­ಗೊಳಿಸಿದೆ. ಈ ವಾರ ‘ನಿಫ್ಟಿ’ 6,500 ಅಂಶಗಳನ್ನು ದಾಟುವ ಸಾಧ್ಯತೆ ಇಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು (ಎಫ್‌ಐಐ) ಪ್ರಸಕ್ತ ಹಣ­ಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಫಲಿ ತಾಂಶಗಳಿ­ಗಾಗಿ ಕಾಯು­ತ್ತಿದ್ದಾರೆ. ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕಚ್ಚಾತೈಲದ ಬೆಲೆ ಆಧರಿಸಿ ‘ಎಫ್‌ಐಐ’ ವಹಿವಾಟು ಇರು ತ್ತದೆ ಎಂದು ಷೇರು ದಲ್ಲಾಳಿ ಸಂಸ್ಥೆ ಷೇರ್‌ಖಾನ್‌ ಹೇಳಿದೆ.



‘ಫೆಡರಲ್‌ ರಿಸರ್ವ್‌ ಆರ್ಥಿಕ ಉತ್ತೇ ಜನ ಕೊಡುಗೆಯ ಭಾಗವಾಗಿ ನಡೆಸುತ್ತಿ­ರುವ ಸಾಲಪತ್ರಗಳ ಖರೀದಿ­ಯನ್ನು 5500 ಕೋಟಿ ಡಾಲರ್‌ನಿಂದ (ರೂ.3.35 ಲಕ್ಷ ಕೋಟಿ) 1000 ಕೋಟಿ ಡಾಲರ್‌ ಗಳಿಗೆ (ರೂ.61000 ಕೋಟಿ) ತಗ್ಗಿಸಲು ಕಳೆದ ವಾರದ ಸಭೆಯಲ್ಲಿ ನಿರ್ಧರಿಸಿದೆ. ಇದು ಖಂಡಿತ ಈ ವಾರ ಜಾಗತಿಕ ಷೇರು ಪೇಟೆಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ವೆರಾಸಿಟಿ ಬ್ರೋಕಿಂಗ್‌ ಸಂಸ್ಥೆಯ ಮುಖ್ಯಸ್ಥ ಜಗ್ನೇಶ್‌ ಚೌಧರಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.