ಭಾನುವಾರ, ಏಪ್ರಿಲ್ 11, 2021
22 °C

ಪೈಲಟ್ ಪರವಾನಗಿ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಕಲಿ ದಾಖಲೆ ನೀಡಿ ಪೈಲಟ್ ಪರವಾನಗಿ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಹಿಂದೆ ನೀಡಿರುವ ಎಲ್ಲ ಪರವಾನಗಿಗಳ ತನಿಖೆಗೆ ಸರ್ಕಾರ ಆದೇಶಿಸಿದೆ. ಅಲ್ಲದೆ ಪ್ರಸಕ್ತ ಪರವಾನಗಿ ಪರೀಕ್ಷಾ ವ್ಯವಸ್ಥೆ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಿದೆ.ಹಿಂದೆ ನೀಡಿದ್ದ ಎಲ್ಲ ಪರವಾನಗಿಗಳ ಸಂಪೂರ್ಣ ಪರಿಶೀಲನೆ ಮತ್ತು ಇನ್ನು ಮುಂದೆ ಪರವಾನಗಿಗಳನ್ನು ನೀಡುವಾಗ ವಿವರವಾದ ಪರಿಶೀಲನೆ ನಡೆಸಲು ಅನುವಾಗುವಂತಹ ವಿಧಾನಗಳನ್ನು ರೂಪಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ತಾವು ಸೂಚಿಸಿರುವುದಾಗಿ ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ರಾಜ್ಯಸಭೆಗೆ ತಿಳಿಸಿದ್ದಾರೆ. ಇಂಡಿಗೊ ಏರ್‌ಲೈನ್ಸ್‌ನ ಕ್ಯಾಪ್ಟನ್ ಪರ್ಮಿಂದರ್ ಕೌರ್ ಗುಲಟಿ ಬಂಧನ ಮತ್ತು ಇದೇ ಬಗೆಯ ಇನ್ನೂ ಮೂರು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.