ಬೀದರ್: ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭವಾದಂತೆ ಕಾಣ ಬರುವ ಸಂಕಷ್ಟದ ಚಿತ್ರ ಇದು. ಪುಸ್ತಕಗಳ ಮಣಭಾರದ ಚೀಲ ಹೊತ್ತು ತೆರಳುವ ಬಹುತೇಕ ಮಕ್ಕಳಿಗೆ ಆಟೋ ಪ್ರಯಾಣ ಎಂಬ ನರಕದ ನಿತ್ಯ ದರ್ಶನ. ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೋ, ಲಘು ವಾಹನಗಳು ನಿಯಮಗಳನ್ನು ಮೀರಿ ಅಧಿಕ ಸಾಮರ್ಥ್ಯದಲ್ಲಿ ಮಕ್ಕಳನ್ನು ಒಯ್ಯುತ್ತಿದ್ದರೂ ಸಂಚಾರ ವಿಭಾಗದ ಪೊಲೀಸರಿಗೆ, ಈ ಪ್ರಯಾಣದಲ್ಲಿ ಮಕ್ಕಳು ಅನುಭವಿಸುವ ಪಾಡು ಕಾಣುತ್ತಿಲ್ಲ.

ವಾಹನದ ಎರಡೂ ಬದಿಯಲ್ಲಿ ಜೋತು ಬಿದ್ದಂತಿರುವ ಪುಸ್ತಕಗಳ ಬ್ಯಾಗುಗಳು, ಪ್ರಯಾಣಿಕರ ಸ್ಥಳದ ಫುಟ್ಬೋರ್ಡ್ನಲ್ಲಿ ಕುಳಿತುಕೊಳ್ಳುವುದರ ಜೊತೆಗೆ, ಚಾಲಕನ ಎರಡೂ ಬದಿಯಲ್ಲಿ ಕಾಲನ್ನು ಅರ್ಧ ಹೊರ ಚಾಚಿ ಕುಳಿತು ಕೊಳ್ಳುವ ಮಕ್ಕಳು ಈ ಸಂಕಷ್ಟದಲ್ಲಿಯೇ ಶಾಲೆಗೆ ತೆರಳುತ್ತಾರೆ.
ಮೊದಲೇ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಆಗದ ಈ ನಗರದಲ್ಲಿ ಯಾವುದೇ ಹಂತದಲ್ಲಿ ಸ್ವಲ್ಪ ಏರು ಪೇರಾದರೂ ಅದರ ನೇರ ಪರಿಣಾಮ ಅನುಭವಿಸಬೇಕಾದವರು ವಿದ್ಯಾರ್ಥಿಗಳು. ಬಾಲಕರು, ಬಾಲಕಿಯರು ಎಂಬ ಭೇದವಿಲ್ಲ.

ಬೀದರ್ನಲ್ಲಿ ಇಂಥ ಸಮಸ್ಯೆ ಕೇವಲ ಆಟೋಗಳಿಗೆ, ಲಘು ವಾಹನಗಳಿಗೆ ಮಾತ್ರವೇ ಸೀಮಿತವಲ್ಲ. ಉತ್ತಮ ಶಿಕ್ಷಣ, ಉತ್ತಮ ಫಲಿತಾಂಶ ಎಂದೆಲ್ಲಾ ಹೇಳಿ ಕೊಳ್ಳುವ ಪ್ರಮುಖ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ವಾಹನಗಳು ಕೂಡಾ ಇಂಥ ಸಮಸ್ಯೆಯಿಂದ ಹೊರತಲ್ಲ. ಈ ವಾಹನಗಳಲ್ಲಿ ಚಾಲಕರ ಪಕ್ಕ ಕುಳಿತು ಕೊಳ್ಳುವ ಸ್ಥಿತಿ ಇಲ್ಲದಿದ್ದರೂ, ಮಕ್ಕಳು ಸರಾಗವಾಗಿ ನಿಂತು ಪ್ರಯಾಣಿಸಲು ಆಗದಷ್ಟು ಮಕ್ಕಳನ್ನು ತುಂಬಿರುವ ಚಿತ್ರಣವು ನಗರದಲ್ಲಿ ಕಾಣುತ್ತದೆ.

ಬೆಂಗಳೂರಿನಲ್ಲಿ ಇಂಥ ಆಟೋಗಳ ಮೇಲೆ ಹೇರಿದ ನಿರ್ಬಂಧ ಚರ್ಚೆಗೆ ಗ್ರಾಸವಾದ ಹಿಂದೆಯೇ ನಗರದಲ್ಲಿಯೂ ಪೊಲೀಸರು ಎಚ್ಚೆತ್ತುಕೊಂಡಿದ್ದು, ನಿಯಮ ಮೀರಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು, ಚಾಲಕರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಸಂಚಾರ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಕುಲಕರ್ಣಿ ಅವರ ಪ್ರಕಾರ, ಈಗಾಗಲೇ ಇಂಥ ವಾಹನಗಳ ವಿರುದ್ಧ ಸುಮಾರು 10 ಪ್ರಕರಣ ದಾಖಲಾಗಿದೆ. ಅಲ್ಲದೆ, ಶಾಲಾ ವಿದ್ಯಾರ್ಥಿಗಳನ್ನು ನಿಯಮಾನುಸಾರವೇ ವಾಹನದ ಸಾಮರ್ಥ್ಯಕ್ಕೆ ಅನುಗುಣವಾಗಿ ಕರೆದೊಯ್ಯಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎನ್ನುತ್ತಾರೆ.

ನಿಯಮದ ಪ್ರಕಾರ, ಆರು ಮಕ್ಕಳನ್ನು ಕರೆದೊಯ್ಯಬಹುದು. ಆದರೆ, ಈಗ 8-10 ಮಕ್ಕಳು, ಪ್ರತಿ ಮಕ್ಕಳ ಎರಡೆರಡು ಬ್ಯಾಗು ಸೇರಿ ಸಾಮರ್ಥ್ಯ ಮೀರಿ ಒಯ್ಯಲಾಗುತ್ತಿದೆ. ಸ್ವಲ್ಪ ವ್ಯತ್ಯಾಸವಾದರೂ ಪರಿಣಾಮ ಗಂಭೀರವಾಗಿರುತ್ತದೆ ಎಂಬುದಂತೂ ಸತ್ಯ. ಇದೇ ಕಾರಣಕ್ಕಾಗಿ ಎಚ್ಚರಿಕೆ ನೀಡಿದ್ದು, ಕ್ರಮವನ್ನು ಜರುಗಿಸಲಾಗುತ್ತಿದೆ ಎನ್ನುತ್ತಾರೆ.

ಸಂಚಾರ ವಿಭಾಗದ ಪೊಲೀಸರ ಜೊತೆಗೇ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ ಕೂಡ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಮಕ್ಕಳ ಹಿತದೃಷ್ಟಿಯಿಂದ ಚಿಂತನೆ ನಡೆಸಿದರೆ ಇಂಥದೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಮುಂದಾಗುವ ಅಪಾಯವನ್ನು ತಪ್ಪಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.