ನವಲಗುಂದ (ಹುಬ್ಬಳ್ಳಿ): ಪೊಲೀಸರ ಲಾಠಿ ಪ್ರಹಾರದಿಂದ ನಲುಗಿದ್ದ ನವಲಗುಂದದಲ್ಲಿ ಗುರುವಾರ ಪೊಲೀಸ್ ಸರ್ಪಕಾವಲಿನಲ್ಲಿ ರೈತ ಸಮಾವೇಶ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತ ಮುಖಂಡರು ಸಮಾವೇಶಕ್ಕೆ ಸಾಕ್ಷಿಯಾದರು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೂ ರೈತರು ಸರ್ಕಾರ ಮತ್ತು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ಮುಖ್ಯರಸ್ತೆಗಳು, ಪ್ರತಿಭಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೆರವಣಿಗೆ, ಭಾಷಣ ಎಲ್ಲವನ್ನೂ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಪಟ್ಟಣದ ಮೇಲೆ ಡ್ರೋಣ್ ಕಣ್ಗಾವಲಿತ್ತು. ಮಫ್ತಿಲ್ಲಿಯೂ ಪೊಲೀಸರು ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಮಾರುಕಟ್ಟೆ, ಅಂಗಡಿ–ಮುಂಗಟ್ಟುಗಳು ತೆರೆದಿದ್ದವು. ಹುಬ್ಬಳ್ಳಿ–ಧಾರವಾಡ ಅಲ್ಲದೆ, ಚಿತ್ರದುರ್ಗ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ರಾಮನಗರ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಹೋರಾಟಗಾರರನ್ನು ಬಂಧಿಸಿರುವ ಕಾರಣ, ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವರಿಷ್ಠ ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ‘ಸರ್ಕಾರಕ್ಕೆ ಬುದ್ಧಿ ಹೇಳುವ ಉದ್ದೇಶದಿಂದಲೇ ಈ ಸಮಾವೇಶ ಆಯೋಜಿಸಲಾಗಿದೆ. ಅನ್ನದಾತರ ಮೇಲೆ ಸರ್ಕಾರ ಕೈ ಮಾಡುತ್ತದೆ ಎಂದರೆ ಆ ದೇಶ ಸತ್ತಿದೆ ಎಂದೇ ಅರ್ಥ. ಹೆಣ್ಣು ಮಕ್ಕಳಿಗೆ ಏಟು ಬಿದ್ದರೆ ಭಾರತ ಮಾತೆಗೆ ಏಟು ಬಿದ್ದಂತೆ’ ಎಂದರು.

‘ಕ್ಯಾಲಿಫೋರ್ನಿಯಾದಲ್ಲಿ ಕುಡಿಯುವ ನೀರನ್ನು ನಾಲ್ಕು ರಾಜ್ಯಗಳಿಂದ ತಂದು ಕೊಡುತ್ತಾರೆ. ಅದು ಸರ್ಕಾರದ ಕರ್ತವ್ಯ. ಆದರೆ, ನಮ್ಮ ರಾಜ್ಯದಲ್ಲಿಯೇ ಹುಟ್ಟಿ ಹರಿಯುವ ನದಿಯ ನೀರನ್ನು ನಮಗೆ ಕೊಡಲು ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ’ ಎಂದು ದೂರಿದರು.

ದೆಹಲಿಗೆ ನಿಯೋಗ: ಇದೇ 7ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಪ್ರಧಾನಮಂತ್ರಿ ಮಧ್ಯಪ್ರವೇಶಿಸಲು ಒತ್ತಾಯಿಸಬೇಕು ಎಂದು ಅವರಿಗೆ ಆಗ್ರಹಿಸುತ್ತೇನೆ ಎಂದು ಪುಟ್ಟಣ್ಣಯ್ಯ ಹೇಳಿದರು.

‘ಸುಪ್ರೀಂಕೋರ್ಟ್ ವಕೀಲರಾದ ಶಾಂತಿಭೂಷಣ್ ಹಾಗೂ ಪ್ರಶಾಂತ ಭೂಷಣ್ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ನಡೆಸಬೇಕು ಎಂಬ ಬಗ್ಗೆ ಅವರಿಂದ ಸಲಹೆ ಪಡೆಯಲಾಗುವುದು’ ಎಂದು ಅವರು ತಿಳಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ‘ಕಾದ ಕಬ್ಬಿಣವನ್ನು ಬಗ್ಗಿಸಬೇಕಾದರೆ ತಣ್ಣಗಿನ ಸುತ್ತಿಗೆಯಿಂದ ಹೊಡೆಯಬೇಕು. ಸುತ್ತಿಗೆಯೂ ಕಾದುಬಿಟ್ಟರೆ ಪ್ರಯೋಜನವಾಗುವುದಿಲ್ಲ. ಅದರಂತೆ, ರೈತರು ಹಿಂಸೆಗಿಳಿಯುವ ಬದಲು, ಅಹಿಂಸಾತ್ಮಕ ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಪತ್ರ
ಬೆಂಗಳೂರು: ಮಹಾದಾಯಿ ನದಿ ನೀರನ್ನು ಮಲಪ್ರಭಾ ಅಣೆಕಟ್ಟಿಗೆ ತಿರುಗಿಸುವುದೊಂದೇ ಕರ್ನಾಟಕ ಮತ್ತು ಗೋವಾ ನಡುವಿನ ಜಲ ವಿವಾದ ಇತ್ಯರ್ಥಕ್ಕಿರುವ ಏಕೈಕ ಪರಿಹಾರ ಮಾರ್ಗ ಎಂದು ಹೇಳಿರುವ ರಾಜ್ಯ ಸರ್ಕಾರ, ಕೂಡಲೇ ಅಂತರ್ ರಾಜ್ಯಗಳ ಸಭೆ ಕರೆಯುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಗೋವಾ ಮುಖ್ಯಮಂತ್ರಿ ನಮ್ಮ ಸಲಹೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನುವುದನ್ನು ಈಗಾಗಲೇ ನಿಮ್ಮ ಗಮನಕ್ಕೆ ತಂದಿದ್ದೇನೆ. ನೀವು ಕೂಡಲೇ ಮಧ್ಯ ಪ್ರವೇಶಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂಬ ಅಚಲ ವಿಶ್ವಾಸ ನಮಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಮಹಾದಾಯಿ ಜಲ ವಿವಾದ 2011 ರಿಂದಲೂ ನ್ಯಾಯಮಂಡಳಿಯಲ್ಲಿದೆ. ನ್ಯಾಯ ಸಿಗುವುದು ತುಂಬಾ ವಿಳಂಬವಾಗಬಹುದು ಎಂಬ ಕಳವಳ ಮಲಪ್ರಭಾ ಯೋಜನೆ ಪ್ರದೇಶದ ರೈತರಗಿದೆ’ ಎಂದು ವಿವರಿಸಿದ್ದಾರೆ.

ಧಾರವಾಡ, ಬೆಳಗಾವಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಈ ವರ್ಷ ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತಲೂ ಕಡಿಮೆ ಆಗಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ಬರ ತೀವ್ರವಾಗಿ ಕಾಡಿದ್ದು, ರೈತರು ಕಂಗೆಟ್ಟಿದ್ದಾರೆ. ಬರದ ತೀವ್ರತೆ ಜತೆಗೆ ನೀರಿಗಾಗಿ ರೈತರ ಹೋರಾಟ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಈ ನಾಲ್ಕು ಜಿಲ್ಲೆಗಳ ರೈತರ ಕೃಷಿಯ ಜೀವನಾಡಿ ಎನಿಸಿರುವ ಮಲಪ್ರಭಾ ಅಣೆಕಟ್ಟಿಗೆ ನೀರಿನ ಹರಿವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂದು ಪ್ರಧಾನಿಯವರ ಗಮನ ಸೆಳೆದಿದ್ದಾರೆ.

‘ಏಪ್ರಿಲ್ 26 ರಂದು ಬರೆದ ಪತ್ರದಲ್ಲಿ ನಿಮ್ಮ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದು ಮಾತ್ರವಲ್ಲದೆ, ವಿವಾದ ಇತ್ಯರ್ಥಗೊಳಿಸಲು ಅಂತರ್ ರಾಜ್ಯಗಳ ಸಭೆ ಕರೆಯುವಂತೆ ಮನವಿ ಮಾಡಿದ್ದೆ. ನಿಮ್ಮ ಮಧ್ಯಸ್ಥಿಕೆಯಲ್ಲೇ ವಿವಾದವನ್ನು ಬಗೆಹರಿಸಲು ಕರ್ನಾಟಕ ವಿಧಾನಮಂಡಲ ಮಾರ್ಚ್ 30 ರಂದು ಒಮ್ಮತದ ನಿರ್ಣಯವನ್ನೂ ಕೈಗೊಂಡಿತ್ತು’ ಎಂದು ನೆನಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.