ಗದಗ:ಪೋಸ್ಕೊ ಕಂಪೆನಿ ವಿರುದ್ಧ ನಡೆದ ಹೋರಾಟದ ಕುರಿತು ತಿಳಿದುಕೊಳ್ಳಲು ಗುರುವಾರ ಸುಮಾರು 12 ಜನ ವಿದೇಶಿಯರ ತಂಡ ಗದುಗಿಗೆ ಆಗಮಿಸಿತ್ತು.ಗದುಗಿನ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ತಂಡ, ಪೋಸ್ಕೊ ಕಂಪೆನಿ ವಿರುದ್ಧ ಸತತ 14 ದಿನಗಳ ಹೋರಾಟ ಮಾಡಿದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿತು.

ಗದಗ ಭಾಗದ ರೈತರ ಸ್ಥಿತಿ-ಗತಿ, ಉಕ್ಕಿನ ಕಾರ್ಖಾನೆಯ ಸ್ಥಾಪನೆ ವಿರುದ್ಧವಾಗಿ ನಡೆದ ಜನಪರ ಹೋರಾಟ, ಸರ್ಕಾರದ ಧೋರಣೆಯನ್ನು ಸ್ವಾಮೀಜಿ ಸವಿಸ್ತಾರವಾಗಿ ಈ ತಂಡಕ್ಕೆ ತಿಳಿಸಿದರು.

ನಂತರ ಮಠದ ಗ್ರಂಥಾಲಯಕ್ಕೆ ಭೇಟಿ ನೀಡಿದ ತಂಡ, ಅಲ್ಲಿ ಪೋಸ್ಕೊ ಹೋರಾಟದ ಸಮಯದಲ್ಲಿ ವಿವಿಧ ಇಂಗ್ಲಿಷ್ ಹಾಗೂ ಕನ್ನಡ ಪತ್ರಿಕೆಯಲ್ಲಿ ಬಂದಿದ್ದ ವರದಿ ಮತ್ತು ಛಾಯಾಚಿತ್ರಗಳನ್ನು ಕುತೂಹಲದಿಂದ ವೀಕ್ಷಿಸಿತು.
ತಂಡದಲ್ಲಿ ಲಾವೋಸ್ನ ಕಾಮ್ಸಾ ಹೋಮ್ಸಾಬಾತ, ಪಿತ್ಸೆಮೆಬೊಲಿಬೂನೆ, ಕಾಂಬೋಡಿಯಾದ ನೆ ಫಲಿ, ಹೆಮ್ ಸೋಪಾರಕ್, ಮೇ ಸೋಫಾನಿ, ಇಂಡೊನೇಷ್ಯಾದ ಬ್ರಾಸ್ ರುಮ್ಕಬೂ ಪ್ಹಾ. ಲೇಲಾ ತಮ್ಬೊನೆ ಪ್ಹಾ, ಇಂಗ್ಲೆಂಡಿನ ರೆಕಲ್ಡೆನೆ, ಬಾಂಗ್ಲಾದೇಶದ ಸುಬ್ರನಾ ಪೊಲಿ ಡ್ರುಂಗಾ, ಬಿಪ್ಲೋಬ್ ರಂಗ್ಸಾ, ಅಮೆರಿಕದ ಮ್ಯಾಕ್ಸ್ ಎಡ್ಗರ್ ವಿದೇಶಿಯರಾದರೇ ಮಾಯಸಂದ್ರದ ಶ್ರೀಪ್ರಕಾಶ್ ತಂಡದ ಜೊತೆಯಲ್ಲಿದ್ದರು.ಕೊಪ್ಪಳ `ವಿಸ್ತಾರ~ ಸ್ವಯಂ ಸೇವಾ ಸಂಸ್ಥೆಯ ಸಂಚಾಲಕ ಪಿ.ಎಸ್.ನಾಸೀರ್ ಈ ತಂಡವನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ.

ಬೆಂಗಳೂರಿನ ಸ್ಕೂಲ್ ಆಫ್ ಪೀಸ್ನಲ್ಲಿ ವ್ಯಾಸಂಗಕ್ಕಾಗಿ ಆಗಮಿಸಿರುವ ವಿದೇಶಿಯರು `ಅಭಿವೃದ್ಧಿ ಹಿಂಸಾಚಾರ~ ವಿಷಯವಾಗಿ ಅಧ್ಯಯನ ಮಾಡಲು ಉತ್ತರ ಕರ್ನಾಟಕಕ್ಕೆ ನಾಲ್ಕು ದಿನಗಳ ಭೇಟಿ ಕೊಟ್ಟಿದ್ದಾರೆ.
ಕೊಪ್ಪಳದಿಂದ ನೇರವಾಗಿ ಹಳ್ಳಿಗುಡಿಗೆ ಹೋಗಿ ಅಲ್ಲಿ ಕೆಲ ರೈತರನ್ನು ಮಾತನಾಡಿಸಿದ ತಂಡ ಅಲ್ಲಿಂದ ತೋಂಟದಾರ್ಯ ಮಠಕ್ಕೆ ಬಂತು.

ನಮ್ಮ ದೇಶದಲ್ಲೂ ರೈತರ ಹಾಗೂ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತದೆ. ಬತ್ತ ಬೆಳೆಯುವ ಸಮೃದ್ಧ ಭೂಮಿಯನ್ನು ಕೈಗಾರಿಕೆ ಹೆಸರಿನಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತದೆ. ಈ ವಿಷಯವಾಗಿ ರೈತರ ಅಭಿಪ್ರಾಯವನ್ನು ಕೇಳುವುದಿಲ್ಲ.

ನಮ್ಮಲ್ಲಿ ಸರ್ಕಾರದ ಪರಮಾಧಿಕಾರದ ಮುಂದೆ ಬೇರೆ ಯಾವುದು ಶಕ್ತಿಯುತವಾಗಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡಿದರೂ ಏನು ಪ್ರಯೋಜನವಿಲ್ಲ ಎಂದು ಕಾಂಬೋಡಿಯಾದ ನೆ ಫಲಿ ತಮ್ಮ ದೇಶದ ರೈತರ ಸ್ಥಿತಿ ವಿವರಿಸಿದರು.

`ಎರಡು ಸಾವಿರ ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗಲೂ ಸರ್ಕಾರ ಯಾರನ್ನೂ ಕೇಳಲಿಲ್ಲ. ಸರ್ಕಾರವೇ ಭೂಮಿಯ ದರ ನಿಗದಿ ಪಡಿಸಿ, ತಾನೇ ಮಾರಾಟ ಮಾಡಿ, ಹಣವನ್ನು ರೈತರಿಗೆ ಕೊಡುತ್ತದೆ. ಆದರೆ ಭಾರತದಲ್ಲಿ ಪ್ರತಿರೋಧ ವ್ಯಕ್ತವಾದರೆ ಸರ್ಕಾರಗಳು ಯೋಜನೆಗಳನ್ನು ವಾಪಸ್ಸಾದರೂ ತೆಗೆದುಕೊಳ್ಳುತ್ತವೆ. ನಮಲ್ಲಿ ಅಂತಹ ವಾತಾವರಣವೇ ಇಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.