ಮಂಗಳವಾರ, ಮೇ 11, 2021
25 °C
ಅಮೆರಿಕ ಸೆನೆಟ್ ಬೆಂಬಲ

ಪೌರತ್ವ ಮಸೂದೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ, ಐಎಎನ್‌ಎಸ್): ಸುಮಾರು 2.60 ಲಕ್ಷ ಭಾರತೀಯರು ಸೇರಿದಂತೆ 1.1 ಕೋಟಿಗೂ ಅಧಿಕ ವಿದೇಶಿಯರಿಗೆ ಅಮೆರಿಕದ ಪೌರತ್ವ ಒದಗಿಸುವ ಐತಿಹಾಸಿಕ ವಲಸೆ ಮಸೂದೆ ಮೇಲಿನ ಚರ್ಚೆಗೆ ಸೆನೆಟ್ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದೆ.ಈ ಮಸೂದೆಯನ್ನು ಕಾನೂನು ಆಗಿ ಪರಿವರ್ತಿಸುವ ಸಂಬಂಧ ಪೂರ್ವಭಾವಿ ಚರ್ಚೆ ನಡೆಸಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಂಪೂರ್ಣ ಸಹಕಾರ ಘೋಷಿಸಿದ್ದಾರೆ. ಶ್ವೇತಭವನದಲ್ಲಿ ವಲಸೆ ಸುಧಾರಣಾ ಬೆಂಬಲಿಗರನ್ನುದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು.`ನಮ್ಮ ಎಲ್ಲ ನಾಗರಿಕರಿಗೂ ಉದ್ಯೋಗ ಮತ್ತು ಅಭಿವೃದ್ಧಿಯನ್ನು ಸೃಷ್ಟಿಸುವ ಆರ್ಥಿಕತೆಗೆ ಈ ಮಸೂದೆ ಚಾಲನಾ ಶಕ್ತಿಯಾಗಿದೆ' ಎಂದರು.`ಇತ್ತೀಚಿನ ವರ್ಷಗಳಲ್ಲಿ ವಲಸಿಗರ ಪ್ರಭಾವ ಹೆಚ್ಚಿದ್ದು, ಅಮೆರಿಕನ್ನರು ನಿರ್ಗತಿಕರಾಗುತ್ತಿದ್ದಾರೆ' ಎಂದೂ ಒಬಾಮ ಆತಂಕ ವ್ಯಕ್ತಪಡಿಸಿದರು.ಸಭೆಯಲ್ಲಿ  84-15 ಮತಗಳ ಅಂತರದಿಂದ ವಲಸೆ ಸುಧಾರಣಾ ಮಸೂದೆ ಮೇಲಿನ ಚರ್ಚೆಗೆ ಸೆನೆಟ್ ಬೆಂಬಲ ನೀಡಿತು.ಈ ಮಹತ್ವದ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲು ಸೆನೆಟ್ ನ್ಯಾಯಾಂಗ ಸಮಿತಿ ಅಧ್ಯಕ್ಷ ಪ್ಯಾಟ್ರಿಕ್ ಲೇಹಿ ಸೂಚಿಸಿದರು.ಮಸೂದೆಯನ್ನು ಕಾನೂನಾಗಿ ಪರಿವರ್ತಿಸಲು ಮುಂದಿನ ಮೂರು ವಾರಗಳಲ್ಲಿ ಜನಪ್ರತಿನಿಧಿಗಳು ಹಲವಾರು ಸಲಹೆಗಳನ್ನು ನೀಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.