ಗುರುವಾರ , ಮಾರ್ಚ್ 4, 2021
19 °C

ಪ್ರಕಾಶಮಾನ ಪಾಕಶಾಸ್ತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕಾಶಮಾನ ಪಾಕಶಾಸ್ತ್ರ!

‘ಒಗ್ಗರಣೆಗೆ ಬಳಸುವ ಪ್ರತಿ ಪದಾರ್ಥದಲ್ಲಿಯೂ ಒಂದೊಂದು ಗುಣವಿದೆ. ಆ ಎಲ್ಲಾ ಗುಣಗಳನ್ನೂ ಪಾತ್ರಗಳಲ್ಲಿಯೂ ಹೊರಹೊಮ್ಮಿಸಬಲ್ಲ ನಟ ಪ್ರಕಾಶ್ ರೈ’ ಎಂದರು ರವಿಚಂದ್ರನ್‌. ದೀರ್ಘಕಾಲದ ಗೆಳೆಯ ಪ್ರಕಾಶ್‌ ರೈ ತಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಬೇಕೆಂದು ನೀಡಿದ ಆಹ್ವಾನವನ್ನು ಮನ್ನಿಸಿದ್ದ ರವಿಚಂದ್ರನ್‌, ಸ್ನೇಹಿತನಿಗಾಗಿ ಅಂದಿನ ಮುಂಬೈ ಪ್ರವಾಸವನ್ನು ಕೈಬಿಟ್ಟಿದ್ದರು.‘ಒಗ್ಗರಣೆ’ ಚಿತ್ರದಲ್ಲಿ ನಟಿ ಸ್ನೇಹಾ, ‘ಪೊರ್ಕಿ’ ಎಂದು ಬೈಯುವ ಸನ್ನಿವೇಶವಿದೆ. ಪ್ರಕಾಶ್‌ ರೈ ಅವರನ್ನು ನೋಡಿದಾಗ ಮೊದಲು ಪೊರ್ಕಿ ಎಂದೇ ಅನಿಸುವುದು. ನಟನಿಗೆ ಸೂಕ್ತ ಕಾಲಕ್ಕೆ ಗೌರವ ಸಿಗಬೇಕು. ಇಲ್ಲದಿದ್ದರೆ ಮುಂದೆ ಅದು ದೊರೆತಾಗ ಅಹಂಕಾರ, ದುರಂಹಕಾರವಾಗಿ ಬೆಳೆಯುತ್ತದೆ. ಆದರೆ ಅದರೊಳಗೆ ಒಬ್ಬ ಕಲಾವಿದ ಅಡಗಿದ್ದಾನೆ ಎಂದು ಪ್ರಕಾಶ್‌ ರೈ ವ್ಯಕ್ತಿತ್ವ ಮತ್ತು ವೃತ್ತಿಬದುಕಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು. ಪ್ರಕಾಶ್‌ರೈನಂಥ ಮತ್ತೊಬ್ಬ ನಟನನ್ನು ನೋಡಿಲ್ಲ. ಯಾವ ಪಾತ್ರವನ್ನಾದರೂ ಸಲೀಸಾಗಿ ಮಾಡಬಲ್ಲ ವಿಶಿಷ್ಟ ಪ್ರತಿಭೆ ಅವರದು. ಪಾತ್ರಕ್ಕಾಗಿ ಗಲೀಜು ಇರುವ ಮೋರಿಯಲ್ಲಿ ಬೀಳಬೇಕು ಎಂದರೂ ಮುಜುಗರ ಪಡದೆ ಬೀಳುವಂಥ ಬದ್ಧತೆಯುಳ್ಳ  ಕಲಾವಿದ ಎಂದರು.‘ರಾಮಾಚಾರಿ’ ಚಿತ್ರದಿಂದ ಪ್ರಾರಂಭವಾದ ತಮ್ಮಿಬ್ಬರ ನಂಟಿನ ನಡುವೆ ಒಮ್ಮೆಯೂ ಜಗಳ ಬಂದಿಲ್ಲ. ಇಬ್ಬರ ನಡುವೆ ಯಾವ ಔಪಚಾರಿಕತೆಯೂ ಇಲ್ಲ ಎಂದರು ರವಿಚಂದ್ರನ್‌.ಚಿತ್ರದ ಹಂಚಿಕೆಯ ಹೊಣೆಯನ್ನು ವಹಿಸಿಕೊಂಡಿರುವ ದಿನಕರ್‌ ತೂಗುದೀಪ, ‘ಒಗ್ಗರಣೆ’ಯ ಕನ್ನಡ ಅವತರಣಿಕೆಯನ್ನು ಸುಮಾರು 70 ಚಿತ್ರಮಂದಿರಗಳಲ್ಲಿ ತೆರೆಗೆ ತರಲಿದ್ದಾರೆ. ‘ಸಿನಿಮಾವನ್ನು ಯಾವಾಗ ತೆರೆಗೆ ತರಬೇಕು ಎಂದು ಈ ಮೊದಲು ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರು ನಿರ್ಧರಿಸುತ್ತಿದ್ದರು. ಆದರೆ ಇಂದು ಅದನ್ನು ಚಿತ್ರಮಂದಿರದವರು ನಿರ್ಧರಿಸುತ್ತಿದ್ದಾರೆ’ ಎಂದು ಪರಿಸ್ಥಿತಿ ಬದಲಾದುದನ್ನು ಬೇಸರದಿಂದ ಹೇಳಿಕೊಂಡರು.ಜೂನ್‌ 6ರಂದು ಸಿನಿಮಾವನ್ನು ತೆರೆಗೆ ತರುತ್ತಿರುವ ಪ್ರಕಾಶ್‌ ರೈ ಅವರಲ್ಲಿ ಜನರ ಪ್ರತಿಕ್ರಿಯೆ ಬಗ್ಗೆ ಕುತೂಹಲವಿದೆ. ರವಿಚಂದ್ರನ್ ತಮ್ಮ ಪಾಲಿಗೆ ದ್ರೋಣಚಾರ್ಯರಿದ್ದಂತೆ ಎಂದರು ಪ್ರಕಾಶ್‌ ರೈ. ನಿರ್ದೇಶಕ ಬಿ. ಸುರೇಶ್‌ ಹಾಜರಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.