ಮುತ್ತುಗಳನ್ನು ಜೋಡಿಸಿ ಮಾಲೆಯಾಗಿ ಪೋಣಿಸಿದಂತೆ ಕಾಣುವ ಈ ಚಿತ್ರಗಳನ್ನು ನೋಡಿದಾಗ, ಇದು ಪ್ರಕೃತಿಯೇ ಸೃಷ್ಟಿಸಿದ ನೈಜ ಸೊಬಗೇ? ಕಲಾವಿದನ ಕುಂಚದ ಕೈಚಳಕದಲ್ಲಿ ಜನ್ಮ ಪಡೆದುಕೊಂಡ ದೃಶ್ಯ ವೈಭವವೇ... ಎಂಬ ಪ್ರಶ್ನೆ ತಮ್ಮೊಳಗೂ ಹೆಪ್ಪುಗಟ್ಟಬಹುದು. ಮುತ್ತಿನ ಸರದಂತೆ ಕಾಣುವ ಈ ಆಕರ್ಷಕ ದೃಶ್ಯ, ಕಲಾವಿದನ ಸೃಷ್ಟಿಯಲ್ಲ. ಅಪ್ಪಟ ಮಲೆನಾಡಿನಲ್ಲಿ ಚಳಿಗಾಲದ ಸಮಯದಲ್ಲಿ ಕಾಣುವ ಪ್ರಕೃತಿಯ ನೈಜ ಸೊಬಗಿದು. ಪ್ರಕೃತಿ ಹೊಸೆದ ಮುತ್ತಿನ ಹಾರಗಳಿವು.

ಮಲೆನಾಡಿನಲ್ಲೀಗ ವಿಪರೀತ ಚಳಿ. ಕೊರೆವ ಈ ಚಳಿಯಲ್ಲಿಯೂ ಪ್ರಕೃತಿಯು ವೈವಿಧ್ಯಮಯ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಮದುವಣಗಿತ್ತಿ ಸಿಂಗಾರಗೊಂಡಂತೆ ನಿಸರ್ಗವು ಸಹ ಬೆಡಗು ಬಿನ್ನಾಣದಿಂದ ಸಿದ್ಧಗೊಂಡಿರುತ್ತದೆ. ಆ ಸೊಬಗನ್ನು ಪ್ರತ್ಯಕ್ಷವಾಗಿ ಸವಿಯಲು ಕಂಬಳಿ ಹೊದ್ದು ಮಲಗಿದರೆ ಸಾಧ್ಯವಿಲ್ಲ. ಮುಂಜಾನೆಯ ಹೊಂಬಿಸಿಲು ಧರೆಗಿಳಿಯುವ ಮುನ್ನವೇ, ಹಳ್ಳಿಯ ಪರಿಸರದಲ್ಲಿ ಸೂಕ್ಷ್ಮವಾಗಿ ನೋಡುತ್ತಾ ಪಾದಯಾತ್ರೆ ಮಾಡಬೇಕು.

ಈ ಮಂಜಿನ ಮಾಲೆಯನ್ನು ನೋಡುವುದಕ್ಕೆ ಸ್ವಲ್ಪ ತಾಳ್ಮೆಯೂ ಬೇಕು. ಅವಸರದಲ್ಲಿ ವಾಕಿಂಗ್ಗೆ ಹೊರಟವರಂತೆಯೋ, ನೆಂಟರ ಮನೆಗೆ ಬೇಗ ಬೇಗ ಹೆಜ್ಜೆ ಹಾಕುವಂತೆಯೋ ನಡೆದರೆ ಆಗದು. ಸೂಕ್ಷ್ಮ ಹುಡುಕಾಟ ನಮ್ಮಲ್ಲಿರಬೇಕು. ಪ್ರತಿ ಚಳಿಗಾಲದ ಸಮಯದಲ್ಲಿ ನಸುಕಿನಲ್ಲಿಯೇ ಮಲೆನಾಡಿನ ಹಳ್ಳಿಯ ಪರಿಸರದ ಗುಡ್ಡ-ಬೆಟ್ಟ, ಹಳ್ಳ-ಕೊಳ್ಳ, ಗದ್ದೆ-ತೋಟಗಳನ್ನು ಸುತ್ತಿದರೆ ಮಂಜಿನಿಂದ ಆಕಾರ ಪಡೆದುಕೊಂಡ ಬಗೆ ಬಗೆ ಮುತ್ತಿನ ಸರಗಳು ತಮಗೂ ಕಂಡೀತು. ಇಂಥ ಅಪರೂಪದ ದೃಶ್ಯ ವೈಭವವನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡರೆ ಇನ್ನೂ ಚೆನ್ನ. ಅಂಥ ಪುಟ್ಟ ಸಾಹಸವನ್ನು ಮಾಡಿದ್ದಾರೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಉಮಚ್ಗಿ ಸನಿಹದ ಗಣಪತಿ ಬಾಳೆಗದ್ದೆ.

ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡುತ್ತಿದ್ದಾರೆ. ‘ಫೋಟೊಗ್ರಫಿ’ ಎನ್ನುವುದು ಗಣಪತಿಯವರ ಮೆಚ್ಚಿನ ಹವ್ಯಾಸ. ಪ್ರಕೃತಿಯ ನೈಜ ಸೌಂದರ್ಯ, ಪಕ್ಷಿಗಳ ಆಕರ್ಷಕ ಭಂಗಿ, ಕೀಟಗಳ ಸೊಬಗು... ಹೀಗೆ ಥರಥರದ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಸೂಕ್ಷ್ಮ, ನಾಜೂಕಿನ ಕಲೆಯಲ್ಲಿ ಗಣಪತಿ ಬಾಳೆಗದ್ದೆ ಅವರದ್ದು ಎತ್ತಿದ ಕೈ.

ಒಂದು ವಸ್ತುವನ್ನು ವಿಭಿನ್ನ ಕೋನದಲ್ಲಿ, ಬೇರೆ ಬೇರೆ ಸಮಯ, ಸಂದರ್ಭದಲ್ಲಿ ಸೆರೆಹಿಡಿಯುವುದೇ ಅವರ ಕ್ಯಾಮೆರಾ ಕೃಷಿಯ ಒಳಗುಟ್ಟು. ವೈವಿಧ್ಯಮಯ ಚಿತ್ರಗಳನ್ನು ತೆಗೆಯುವುದಕ್ಕೆ ಸಹನೆ, ತಾಳ್ಮೆ, ಛಲದೊಂದಿಗೆ ಕಠಿಣ ಪರಿಶ್ರಮವೂ ಬೇಕು. ಗಣಪತಿ ಬಾಳೆಗದ್ದೆ ಅವರು ಕೆಲವೊಮ್ಮೆ ಒಂದೇ ದೃಶ್ಯಕ್ಕಾಗಿ ವಾರಗಳ ಕಾಲ ಕಾದು ಕ್ಲಿಕ್ಕಿಸಿದ್ದೂ ಉಂಟು. ಈ ಮುತ್ತುಗಳ ಸರದ ಚಿತ್ರವನ್ನು ತೆಗೆಯಲು ಅವರಿಗೆ ಹಲವಾರು ದಿನಗಳೇ ಬೇಕಾಗಿದೆ. ಅಲ್ಲದೇ, ಮಂಜಿನ ವೈವಿಧ್ಯದ ಚಿತ್ರವನ್ನು ಕ್ಯಾಮೆರಾದಲ್ಲಿ ಬಂಧಿಸಬೇಕು ಎಂದು ಸಂಕಲ್ಪಿಸಿಕೊಂಡು ಹೊರಟವರಿಗೆ ಇಬ್ಬನಿಯಲ್ಲಿ ಅರಳುತ್ತಿರುವ ಹೂವು, ಗೂಡಿನಿಂದ ಹೊರಬರುವ ಪಕ್ಷಿ, ಮಕರಂದ ಹೀರುತ್ತಿರುವ ಪಾತರಗಿತ್ತಿಯರೂ ಸೆರೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.