ಇಸ್ತಾಂಬುಲ್: ಪಟ್ಟಣಗಳು ಮತ್ತು ಜಿಲ್ಲೆಗಳು ಮುತ್ತಿಗೆಗೊಳಗಾಗಿವೆ. ತಡೆ ಬೇಲಿಗಳು ಮತ್ತು ಕಂದಕಗಳಿಂದ ಮುಚ್ಚಲಾಗಿರುವ ಕಿರಿದಾದ ಹಾದಿಗಳಲ್ಲಿ ಟ್ಯಾಂಕುಗಳು ನುಗ್ಗುತ್ತಿವೆ. ಕರ್ಫ್ಯೂನಿಂದಾಗಿ ಜನರು ವಾರಗಟ್ಟಲೆ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಹೊರಗೆ ಬರಲು ಧೈರ್ಯ ತೋರಿದವರು ಕಮಾಂಡೊಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ಯಾರಾದರೂ ಬಂದು ಎತ್ತಿಕೊಂಡು ಹೋಗುವವರೆಗೆ, ಅವರ ದೇಹಗಳು ಹಲವು ದಿನಗಳ ಕಾಲ ಬೀದಿಯಲ್ಲಿ ಬಿದ್ದಿರುತ್ತವೆ. ಗುಂಡುಗಳು ಕಿಟಕಿಗಳನ್ನು ಹಾದು ನುಗ್ಗುತ್ತಿವೆ ಮತ್ತು ಕಟ್ಟಡಗಳು ಕುಸಿದು ಮನೆಯೊಳಗೆ ಆಶ್ರಯ ಪಡೆದವರನ್ನು ಕೊಲ್ಲುತ್ತಿವೆ.
ಇದು ಸಿರಿಯಾ ಅಲ್ಲ. ಐರೋಪ್ಯ ಒಕ್ಕೂಟ ಸೇರುವ ಆಕಾಂಕ್ಷೆ ಹೊಂದಿರುವ ಟರ್ಕಿ. ಒಂದು ಕಾಲದಲ್ಲಿ ಟರ್ಕಿಯನ್ನು ಅರಬ್ ಪ್ರಜಾತಂತ್ರದ ಉದಯದ ಕೇಂದ್ರ ಎಂದು ಶ್ಲಾಘಿಸಲಾಗುತ್ತಿತ್ತು. ಕಳೆದ ಬೇಸಿಗೆಯಲ್ಲಿ ಟರ್ಕಿ ಸರ್ಕಾರ ಮತ್ತು ಕುರ್ದಿಷ್ ವರ್ಕರ್ಸ್ ಪಾರ್ಟಿ (ಪಿ.ಕೆ.ಕೆ) ನಡುವಣ ಮಾತುಕತೆ ಮುರಿದು ಬಿದ್ದ ನಂತರ ಇಲ್ಲಿ ಸಂಘರ್ಷ ಆರಂಭವಾಗಿದೆ. ಅದೀಗ ಕುರ್ದಿಷ್ ಪಟ್ಟಣಗಳು ಮತ್ತು ನಗರಗಳಲ್ಲಿ ವಿನಾಶಕಾರಿ ಯುದ್ಧಕ್ಕೆ ಕಾರಣವಾಗಿದೆ.

ದಿಯರ್ಬಾಕಿರ್ ನಗರದ ಸೂರ್ ಜಿಲ್ಲೆ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದು, 2004ರಿಂದ 2014ರವರೆಗೆ ನಾನು ಇಲ್ಲಿನ ಮೇಯರ್ ಆಗಿದ್ದೆ. ಡಿಸೆಂಬರ್ ಆರಂಭದಿಂದಲೇ ಸೂರ್ ರಾತ್ರಿ-ಹಗಲು ಕರ್ಫ್ಯೂನಿಂದ ನಲುಗಿ ಹೋಗಿದೆ. ಈ ಪ್ರದೇಶದ ಹೊರವಲಯಗಳೆಲ್ಲವೂ ನಾಶಗೊಂಡಿವೆ. ಇಲ್ಲಿನ ಚಾರಿತ್ರಿಕ ಕಟ್ಟಡಗಳಿಗೆ ಹಾನಿಯಾಗಿವೆ. ಒಂದು ಕಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಅಂಗಡಿಗಳು ಬಾಗಿಲು ಮುಚ್ಚಿವೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇದೆ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಹತ್ತಾರು ಸಾವಿರ ಜನರು ಇಲ್ಲಿಂದ ಪಲಾಯನ ಮಾಡಿದ್ದಾರೆ.

ಸೂರ್ನ ಒಳಗೆ ಇರುವ ಪ್ರಾಚೀನ ನಗರದಲ್ಲಿ ಶತಮಾನಗಳಿಂದ ಜನರು ನೆಲೆಸಿದ್ದಾರೆ. ಇಲ್ಲಿನ ಕಿರಿದಾದ ಬೀದಿಗಳು, ವಿಶಾಲ ಹಜಾರಗಳು ಮತ್ತು ಭವ್ಯವಾದ ಶಿಲಾ ಕಟ್ಟಡಗಳು ಶ್ರೀಮಂತ ಬಹು ಸಂಸ್ಕೃತಿಯೊಂದರ ಪರಂಪರೆಯನ್ನು ನೆನಪಿಸುತ್ತವೆ. ಶತಮಾನ ಕಾಲ ಸಂಘರ್ಷಕ್ಕೆ ತುತ್ತಾಗಿ, ಬಡ ದೇಶ ಎನಿಸಿಕೊಂಡಿದ್ದರೂ ಈ ಪರಂಪರೆ ನಾಶವಾಗದೆ ಉಳಿದಿದೆ. ಆರ್ಮೇನಿಯನ್ನರು, ಅಸೀರಿಯನ್ನರು, ಕಾಲ್ಡೇನರು, ಯಾಜಿದಿಗಳು ಮತ್ತು ಇತರ ಹಲವು ಅಲ್ಪಸಂಖ್ಯಾತ ಸಮುದಾಯಗಳು, ಇಸ್ಲಾಂನ ವೈವಿಧ್ಯಮಯ ವ್ಯಾಖ್ಯೆಗಳಿಗೆ ಬದ್ಧರಾಗಿ ಬದುಕುತ್ತಿದ್ದ ಹಲವು ಇತರ ಅಲ್ಪಸಂಖ್ಯಾತ ಸಮುದಾಯಗಳ ಜತೆ ಸಹಬಾಳ್ವೆ ನಡೆಸುತ್ತಿದ್ದವು. ಇವೆಲ್ಲ ಸಣ್ಣವಾಗಿದ್ದರೂ ಗಮನಾರ್ಹವಾಗಿದ್ದ ಸಮುದಾಯಗಳಾಗಿದ್ದವು. ಆದರೆ ಈಗ ಈ ಪ್ರದೇಶ ಸುನ್ನಿ ಕುರ್ದಿಷ್ ಪ್ರಾಬಲ್ಯದ ಪಟ್ಟಣವಾಗಿ ಪರಿವರ್ತನೆಯಾಗಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಈ ಪರಂಪರೆಯನ್ನು ಪುನಶ್ಚೇತನಗೊಳಿಸಿ ಸಂರಕ್ಷಿಸಲು ನಮ್ಮ ನಗರಪಾಲಿಕೆ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಮಸೀದಿಗಳು ಮತ್ತು ಚರ್ಚುಗಳು ಸೇರಿದಂತೆ ಹಲವು ಚಾರಿತ್ರಿಕ ಕಟ್ಟಡಗಳನ್ನು ನಾವು ನವೀಕರಿಸಿದ್ದೇವೆ. ಸುಮಾರು ಒಂದು ಶತಮಾನ ಕಾಲ ಮುರಿದು ಬಿದ್ದಿದ್ದ ಸುರ್ಪ್ ಗಿರಗೋಸ್ ಆರ್ಮೇನಿಯನ್ನರ ಚರ್ಚನ್ನು ನವೀಕರಿಸಿ ಮತ್ತೆ ತೆರೆಯಲಾಯಿತು. ಇದು ಈಗ ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅತ್ಯಂತ ದೊಡ್ಡ ಆರ್ಮೇನಿಯನ್ನರ ಚರ್ಚ್ ಎನಿಸಿಕೊಂಡಿದೆ. 1915ರಲ್ಲಿ ಟರ್ಕಿಯಲ್ಲಿ ನಡೆದ ಆರ್ಮೇನಿಯನ್ನರ ಹತ್ಯಾಕಾಂಡದ ನಂತರ ‘ಅಡಗಿಕೊಂಡಿದ್ದ’ ಅಳಿದುಳಿದ ಆರ್ಮೇನಿಯನ್ನರು ತಮ್ಮ ಪರಂಪರೆಯನ್ನು ಮರುಶೋಧಿಸಲು ಮತ್ತು ಅದನ್ನು ಮುನ್ನಡೆಸಲು ಮುಂದೆ ಬರುತ್ತಿದ್ದಾರೆ. ಕಳೆದ ಬೇಸಿಗೆಯಲ್ಲಿ ಹಿಂಸೆ ಸ್ಫೋಟಗೊಳ್ಳುವುದಕ್ಕೆ ಮೊದಲು, ಒಂದು ಕಾಲದಲ್ಲಿ ಸೂರ್ನಲ್ಲಿ ಅತ್ಯಂತ ಚೈತನ್ಯಶೀಲವಾಗಿದ್ದ ಯಹೂದಿ ಸಮುದಾಯದ ಸ್ಮರಣೆಗೆ ಅವರ ಹಳೆಯ ಪ್ರಾರ್ಥನಾ ಮಂದಿರವನ್ನು ನವೀಕರಿಸುವ ಕೆಲಸ ಆರಂಭವಾಗಿತ್ತು.

2012ರಲ್ಲಿ ಸೂರ್ನ ಸಮುದಾಯ ಮುಖಂಡರು ಒಟ್ಟಾಗಿ ಅಂತರ್ ಧರ್ಮೀಯ ಸಂವಾದ ಗುಂಪೊಂದನ್ನು ಸ್ಥಾಪಿಸಿದರು. ಪ್ರದೇಶದ ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ನಾಗರಿಕರ ಗುಂಪುಗಳ ಪ್ರತಿನಿಧಿಗಳನ್ನು ಜತೆ ಸೇರಿಸಿ ‘ಕೌನ್ಸಿಲ್ ಆಫ್ ಫಾರ್ಟಿ’ (Council of Forty)ಎಂಬ ಹೆಸರಿನ ಈ ಸಂವಾದ ಗುಂಪು ಆರಂಭಗೊಂಡಿತು. ಜನಾಂಗೀಯ ಹಿಂಸೆ ನಮ್ಮ ನಗರದೊಳಕ್ಕೆ ಕಾಲಿಡದಂತೆ ತಡೆಯುವಲ್ಲಿ ಈ ಗುಂಪು ಬಹಳ ಮಹತ್ವದ ಪಾತ್ರ ವಹಿಸಿತು. ಇಡೀ ಪ್ರದೇಶ ಅಸಹಿಷ್ಣುತೆಯಿಂದ ನಲುಗಿ ಹೋಗಿದ್ದರೆ, ಸೂರ್ ಮಾತ್ರ ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿ ಕಾಣಿಸಿಕೊಂಡಿತು. ‘ಕೌನ್ಸಿಲ್ ಆಫ್ ಫಾರ್ಟಿ ’ ನಡೆಸಿದ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಫಲ ನೀಡಿದವು.

ಈಗ ಸೂರ್ನಲ್ಲಿರುವ ಕಟ್ಟಡಗಳ ಜತೆಗೆ ಅಲ್ಲಿನ ಬಹುತ್ವವೂ ಕುಸಿದು ಬೀಳುತ್ತಿರುವುದನ್ನು ನೋಡಿದರೆ ನನಗೆ ಅಪಾರ ವೇದನೆಯಾಗುತ್ತಿದೆ. ನಮ್ಮ ಕಣ್ಣ ಮುಂದೆಯೇ ಜನಾಂಗೀಯವಾದ ಸಿರಿಯಾವನ್ನು ನಾಶಗೊಳಿಸುತ್ತಿದೆ. ಟರ್ಕಿಯ ವಿಧಿಯೂ ಅದೇ ಆಗಬಾರದು ಎಂಬ ಕಾಳಜಿಯಿಂದ ‘ಕೌನ್ಸಿಲ್ ಆಫ್ ಫಾರ್ಟಿ’ ಪ್ರಯತ್ನ ನಡೆಸುತ್ತಿದೆ. ಕರ್ಫ್ಯೂ ಸಡಿಲಿಸುವಂತೆ ಸಮಿತಿಯು ಸರ್ಕಾರವನ್ನು ಕೋರಿದೆ. ಎಲ್ಲ ಗುಂಪುಗಳು ದ್ವೇಷವನ್ನು ಬಿಟ್ಟು ಸಂಸದೀಯ ಪ್ರಜಾಸತ್ತೆಯ ಚೌಕಟ್ಟಿನೊಳಗೆ ಶಾಂತಿ ಮಾತುಕತೆ ನಡೆಸುವಂತೆ ಸಮಿತಿ ಕರೆ ನೀಡಿದೆ.

ಉಗ್ರರನ್ನು ಸಂಪೂರ್ಣವಾಗಿ ದಮನ ಮಾಡುವವರೆಗೆ ಮುತ್ತಿಗೆಗೊಳಗಾಗಿರುವ ಕುರ್ದಿಷ್ ಪಟ್ಟಣಗಳಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ‘ನೀವು ಸೇರಿಕೊಂಡಿರುವ ಮನೆಗಳು, ಕಟ್ಟಡಗಳು ಮತ್ತು ಬಿಲಗಳೊಳಗೆಯೇ ನಿಮ್ಮನ್ನು ನಿರ್ಮೂಲನ ಮಾಡಲಾಗುವುದು’ ಎಂದು ಅಧ್ಯಕ್ಷ ಎರ್ಡೋಗನ್ ಎಚ್ಚರಿಕೆ ನೀಡಿದ್ದಾರೆ. ಆದರೆ ವಿನಾಶದ ಮೂಲಕ ಯಾವ ರೀತಿಯ ಶಾಂತಿ ಸಾಧ್ಯ? ದಶಕಗಳಿಂದ ಸೇನಾ ನೀತಿಯು ಕುರ್ದ್ ಸಮುದಾಯದ ವಿರುದ್ಧ ಇದೆ. ಹಿಂಸೆಯು ಇನ್ನೂ ಹೆಚ್ಚು ಹಿಂಸೆಗೆ ಮಾತ್ರ ಕಾರಣವಾಗುತ್ತದೆ ಎಂಬುದನ್ನಷ್ಟೇ ಅದು ನಮಗೆ ತೋರಿಸಿಕೊಟ್ಟಿದೆ.

ಈ ಪಟ್ಟಣಗಳಲ್ಲಿ ನೆಲೆಸಿರುವ ಹೆಚ್ಚಿನವರು ಬಡ ಕುಟುಂಬಗಳಿಗೆ ಸೇರಿದವರು. 1990ರ ದಶಕದಲ್ಲಿ ಟರ್ಕಿ ಸರ್ಕಾರ ಮತ್ತು ಕುರ್ದ್ ಗುಂಪುಗಳ ನಡುವಣ ಸಂಘರ್ಷ ತೀವ್ರವಾಗಿದ್ದಾಗ ಈ ಕುಟುಂಬಗಳು ಹಳ್ಳಿಗಳೆಡೆಗೆ ಪಲಾಯನ ಮಾಡಿವೆ. ಟರ್ಕಿಯ ಆಗ್ನೇಯ ಭಾಗದಲ್ಲಿನ ನಗರಗಳು ಮತ್ತು ಪಟ್ಟಣಗಳಲ್ಲಿ ಕಂದಕಗಳನ್ನು ಕೊರೆದು ‘ಸ್ವಯಂ ಆಡಳಿತ’ ಘೋಷಿಸಿಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ಕುರ್ದ್ ಸಮುದಾಯಕ್ಕೆ ಸೇರಿದ ಯುವಕರು. ಇವರಲ್ಲಿ ಹೆಚ್ಚಿನವರು ಹದಿ ಹರೆಯದವರು ಅಥವಾ 20ರ ಆಸುಪಾಸಿನಲ್ಲಿರುವವರು. ಇವರೆಲ್ಲರೂ ಹಿಂದಿನ ಹಿಂಸಾತ್ಮಕ ಯುಗದಲ್ಲಿ ಜನಿಸಿದವರು. ಬಡತನ ಮತ್ತು ಸ್ಥಳಾಂತರದ ನೋವು ಅನುಭವಿಸಿ ಜನಾಂಗದ ಕೇರಿಗಳಲ್ಲಿ ಮೂಲಭೂತವಾದಿಗಳಾಗಿ ಬೆಳೆದವರು.

ಈಗ ಇನ್ನೊಂದು ಹೊಸ ತಲೆಮಾರು ಹತ್ಯೆಗಳು, ವಿನಾಶ ಮತ್ತು ಬಲವಂತದ ವಲಸೆಯ ನೋವಿನೊಂದಿಗೆ ಬೆಳೆಯಲಿದೆ. ಅವರು ಎಲ್ಲಿ ಹೋಗಬೇಕು? ಮುಂದೆ ಅವರು ಏನಾಗುತ್ತಾರೆ? ಆಕ್ರೋಶವನ್ನಷ್ಟೇ ಮೈಗೂಡಿಸಿಕೊಂಡಿರುವ ಕುರ್ದ್ ಮತ್ತು ಟರ್ಕಿ ತಲೆಮಾರುಗಳ ನಡುವೆ ಮಾತುಕತೆ ಸಾಧ್ಯವಾಗುವ ಸಮಾನ ಅಂಶಗಳು ಇರುವುದಕ್ಕೆ ಸಾಧ್ಯವೇ? ಸತ್ಯ ಏನೆಂದರೆ, ಸಂವಾದದ ಮೂಲಕ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಸಾಧ್ಯವಿರುವ ಕೊನೆಯ ತಲೆಮಾರಿಗೆ ನಾನು ಸೇರಿದ್ದೇನೆ.

ಅಧಿಕಾರದಲ್ಲಿ ಇರುವವರು ಬಯಸಿದರೆ ಮಾತ್ರ ಸಂವಾದ ಸಾಧ್ಯವಾಗುತ್ತದೆ. ಎರಡೂವರೆ ವರ್ಷಗಳ ನಿರಂತರ ಸಂಧಾನದ ಪರಿಣಾಮವಾಗಿ ಕಳೆದ ವಸಂತದಲ್ಲಿ ಎರಡೂ ಗುಂಪುಗಳು ಒಂದು ಪರಿಹಾರದ ಸನಿಹಕ್ಕೆ ಬಂದಿದ್ದವು. ವಾಸ್ತವಿಕ ಮತ್ತು ನ್ಯಾಯಯುತ ಆಯ್ಕೆಯನ್ನು ಮುಂದಿಟ್ಟಾಗ ಕುರ್ದ್ ಸಮುದಾಯ ಮತ್ತೆ ಮತ್ತೆ ಹಿಂಸೆಯ ಬದಲಿಗೆ ರಾಜಕೀಯ ಪರಿಹಾರವನ್ನೇ ಆಯ್ಕೆ ಮಾಡಿಕೊಂಡಿದೆ. ತಮ್ಮ ಹಕ್ಕುಗಳು ಮತ್ತು ಅಸ್ತಿತ್ವಕ್ಕೆ ಮನ್ನಣೆ ಕೊಡುವ ವ್ಯವಸ್ಥೆ ಇರುವುದಾದರೆ, ಪ್ರತ್ಯೇಕತೆಗೆ ಬದಲಾಗಿ ಕುರ್ದ್ ಸಮುದಾಯ ಪ್ರಜಾಸತ್ತಾತ್ಮಕ ಸಹಬಾಳ್ವೆಯನ್ನೇ ಬಯಸುತ್ತದೆ. ಆದರೆ ವಿನಾಶ ಮುಂದುವರಿಯುತ್ತಾ ಹೋದಂತೆ ರಾಜಕೀಯ ಪರಿಹಾರದಲ್ಲಿ ಇರುವ ವಿಶ್ವಾಸವನ್ನು ಅವರು ಕಳೆದುಕೊಳ್ಳುತ್ತಾರೆ.

2007ರಲ್ಲಿ ಸ್ಥಳೀಯ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವ ಟರ್ಕಿಯ ಮೊದಲ ನಗರಪಾಲಿಕೆ ಎಂಬ ಹೆಗ್ಗಳಿಕೆಗೆ ಸೂರ್ ಪಾತ್ರವಾಯಿತು. ಅಧಿಕೃತ ಟರ್ಕಿ ಭಾಷೆಯ ಜತೆಗೆ, ಕುರ್ದ್, ಆರ್ಮೇನಿಯಾ ಮತ್ತು ಅಸ್ಸೀರಿಯನ್ ಭಾಷೆಗಳಲ್ಲಿಯೂ ಸೇವೆಗಳನ್ನು ಒದಗಿಸಲು ಆರಂಭಿಸಲಾಯಿತು. ಆದರೆ ಈ ಕ್ರಮ ಅಂಕಾರದಲ್ಲಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಹಿಡಿಸಲಿಲ್ಲ. ಆ ಕಾರಣಕ್ಕಾಗಿ ಅವರು ನನ್ನನ್ನು ಮೇಯರ್ ಹುದ್ದೆಯಿಂದ ವಜಾ ಮಾಡಿದರು. 2009ರಲ್ಲಿ ಮೂರನೇ ಎರಡು ಬಹುಮತದೊಂದಿಗೆ ನಾನು ಮತ್ತೆ ಆಯ್ಕೆಯಾದೆ. ಈ ಬಾರಿ ಅವರು ನನ್ನನ್ನು ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಿರುವ ಆರೋಪದಲ್ಲಿ ಬಂಧಿಸಿದರು (ಐದು ತಿಂಗಳ ನಂತರ ಅನಾರೋಗ್ಯದ ಕಾರಣಕ್ಕೆ ನನ್ನನ್ನು ಬಿಡುಗಡೆ ಮಾಡಲಾಯಿತು. ಬಂಧನದಲ್ಲಿದ್ದ ಅವಧಿಯಲ್ಲಿಯೂ ನಾನು ಮೇಯರ್ ಹುದ್ದೆಯನ್ನು ಬಿಟ್ಟುಕೊಟ್ಟಿರಲಿಲ್ಲ).

ನಾನು ನೂರಾರು ಕುರ್ದಿಷ್ ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ನಿರಂತರ ಸಂವಾದ ನಡೆಸುತ್ತಿರುವಾಗ ನನ್ನ ಹದಿಹರೆಯದ ಮಗ ಪಿ.ಕೆ.ಕೆ. ಸೇರುವುದಕ್ಕಾಗಿ ಮನೆ ಬಿಟ್ಟು ಹೋದ. ‘ರಾಜಕೀಯ ಮತ್ತು ಸಂವಾದದ ಮೂಲಕ ನೀವು ಸಮಯ ವ್ಯರ್ಥ ಮಾಡುತ್ತಿದ್ದೀರಿ’ ಎಂದು ಆತ ನನಗೆ ಹೇಳಿದ. ಆತನ ಅಭಿಪ್ರಾಯ ತಪ್ಪು ಎಂಬುದನ್ನು ಸಾಬೀತುಮಾಡುವುದಕ್ಕಾಗಿ ಮತ್ತು ಶಾಂತಿಯಿಂದ ಮತ್ತೆ ಮನೆಗೆ ಮರಳುವಂತೆ ಮಾಡುವುದಕ್ಕಾಗಿ ನಾನು ನನ್ನ ಬದುಕನ್ನು ಮುಡಿಪಾಗಿರಿಸಿದ್ದೇನೆ. ಹಿಂದೆಯೂ ನನ್ನನ್ನು ನಿರುತ್ಸಾಹಗೊಳಿಸಲಾಗಿದೆ. ಆದರೆ ನಾನು ಭರವಸೆ ಕಳೆದುಕೊಂಡಿಲ್ಲ. ಇಂದು ನಾನು ಆ ಭರವಸೆಯನ್ನು ಜೀವಂತವಾಗಿ ಇರಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿದ್ದೇನೆ.

* ಲೇಖಕ ದಿಯಾರ್ಬಾಕಿರ್ನ ಸೂರ್ ಜಿಲ್ಲೆಯ ಮಾಜಿ ಮೇಯರ್ ಮತ್ತು ಕೌನ್ಸಿಲ್ ಆಫ್ ಫಾರ್ಟಿ ಸಂಘಟನೆಯ ಸ್ಥಾಪಕ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.