ಪ್ರಚಂಡ ಗೆಲುವಿನತ್ತ ಎಐಎಡಿಎಂಕೆ

7

ಪ್ರಚಂಡ ಗೆಲುವಿನತ್ತ ಎಐಎಡಿಎಂಕೆ

Published:
Updated:

ಚೆನ್ನೈ:  ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಪ್ರಚಂಡ ಗೆಲುವಿನತ್ತ ಸಾಗಿದ್ದು ಚೆನ್ನೈ ಸೇರಿದಂತೆ ಎಲ್ಲಾ ಹತ್ತು ಮಹಾನಗರಪಾಲಿಕೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹಂತದಲ್ಲಿದೆ.ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಪಂಚಾಯತ್ ಯೂನಿಯನ್ ಕೌನ್ಸಿಲ್ ಚುನಾವಣೆಗಳಲ್ಲಿ ಕೂಡ ತನ್ನ ರಾಜಕೀಯ ಕಡು ವೈರಿ ಡಿಎಂಕೆಗಿಂತ ಪಕ್ಷ ಮುಂದಿದೆ.ಡಿಎಂಕೆ ಎರಡನೇ ಸ್ಥಾನದಲ್ಲಿದ್ದರೆ, ವಿಜಯಕಾಂತ್ ಪಕ್ಷ, ಕಾಂಗ್ರೆಸ್ ಮತ್ತು ಪಿಎಂಕೆ ನೆಲಕಚ್ಚಿವೆ. ಒಟ್ಟು 10 ಮಹಾನಗರಪಾಲಿಕೆಗಳ ಪೈಕಿ ಎಐಎಡಿಎಂಕೆಯ ಮೇಯರ್ ಸ್ಥಾನದ ಅಭ್ಯರ್ಥಿಗಳು 5 ಕಡೆ ವಿಜೇತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry