ಶನಿವಾರ, ಮೇ 15, 2021
26 °C

ಪ್ರಜಾವಾಣಿ ವಿಶೇಷ ಸಂಚಿಕೆ: ಓದುಗರ ಪ್ರತಿಕ್ರಿಯೆ -3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತಃಕರಣದ ನುಡಿ

`ಪ್ರಜಾವಾಣಿ~ ತನ್ನ ಸಾಮಾಜಿಕ ಕಳಕಳಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಯಾವ ಪತ್ರಿಕೆಗೂ ಇಲ್ಲದ ದಲಿತ ಪರ ಧೋರಣೆಯನ್ನು ಆಗಾಗ ಪ್ರಕಟಿಸುತ್ತಲೇ ಬಂದಿದೆ. ಪ್ರಜ್ಞಾಪೂರ್ವಕವಾಗಿ ಈ ಬಗೆಯ ವಿಶೇಷ ಸಂಚಿಕೆ ಹೊರತಂದಿರುವುದು ಮೆಚ್ಚುವಂತಹದ್ದು.  

 ಡಾ.ಸಿ.ಜಿ. ಲಕ್ಷ್ಮೀಪತಿ 

 ಸಮಾಜ ಶಾಸ್ತ್ರಜ್ಞರು, ಬೆಂಗಳೂರುಪ್ರಯೋಗಶೀಲತೆ...

`ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಪತ್ರಿಕೆಯು ಇಂತಹ ಪ್ರಯೋಗಶೀಲತೆಯನ್ನು ಮುಂದುವರಿಸಿಕೊಂಡು ಹೋಗಲಿ~.

 ಎ.ಆರ್.ಇನ್ಫಂಟ್ 

 ರಾಜ್ಯ ಪೊಲೀಸ್‌ಮಹಾ ನಿರ್ದೇಶಕರುಹೃದಯ ತಂಪಾಗಿಸಿತು..

ಕನ್ನಡ ಪತ್ರಿಕೋದ್ಯಮದಲ್ಲಿಸಾಂಸ್ಕೃತಿಕ ಅಗತ್ಯಗಳನ್ನು ಹೆಚ್ಚಾಗಿ ಗ್ರಹಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ `ಪ್ರಜಾವಾಣಿ~.  ಬೆಳ್ಳಂಬೆಳಗ್ಗೆ ಕೈಗೆ ಸಿಕ್ಕ ಸಂಚಿಕೆ ಹೃದಯವನ್ನು ತೇವಗೊಳಿಸಿ, ತಂಪಾಗಿಸಿತು. ಪತ್ರಿಕೆಯ ಈ ಕಾಳಜಿ ಮತ್ತು ಪ್ರಯತ್ನಕ್ಕೆ ನಮ್ಮ ಹೃದಯದಲ್ಲೊಂದು ಧನ್ಯತಾ ಭಾವ ಹುಟ್ಟಿಕೊಂಡಿದೆ.

 ಕೆ.ಗಿರೀಶ್

 ಬರಹಗಾರ, ಬೆಂಗಳೂರು`ಪ್ರಜಾವಾಣಿ~ಯೇ ಸಾಟಿ

ಕಳೆದ 20 ವರ್ಷಗಳಿಂದ ನಿರಂತರವಾಗಿ `ಪ್ರಜಾವಾಣಿ~ ಓದುತ್ತಿದ್ದೇನೆ. ದಲಿತರ ಬಗ್ಗೆ ವಿಶೇಷ ಸಂಚಿಕೆ ಪ್ರಕಟಿಸುವ ಮೂಲಕ ನಿಜಕ್ಕೂ ಶೋಷಿತರ ಕಣ್ಣು ತೆರೆಸಿದೆ. `ಪ್ರಜಾವಾಣಿ~ಗೆ `ಪ್ರಜಾವಾಣಿ~ಯೇ ಸಾಟಿ. 

 ಡಾ.ರವಿಕುಮಾರ್, ಬಸವನಗುಡಿಅಂತರಾಳ ತಟ್ಟಿತು


`ಪ್ರಜಾವಾಣಿ~ ಇತಿಹಾಸದಲ್ಲಿ ನೆನಪಿಡಬೇಕಾದಂತಹ ಸಂಚಿಕೆ. ನಾಡಿನ ಚಿಂತಕರು ದಲಿತರ ಸಮಸ್ಯೆಗಳು ಕುರಿತು ಬರೆದ ಲೇಖನಗಳು ಅಂತರಾಳವನ್ನು ತಟ್ಟಿತ್ತು. ಈ ಪ್ರಯತ್ನ ಂದುವರೆಯಲಿ.

 ಎನ್.ಎಂ. ಮಂಜುನಾಥ್‌ ಜರಗನಹಳ್ಳಿಗಂಭೀರ ನಿರ್ವಚನ...

ದಿನ ನಿತ್ಯದ `ಪ್ರಜಾವಾಣಿ~ ಇಂದು ವಿಶೇಷ ಸಂಚಿಕೆ ಆಗಿತ್ತು. ಎಂದಿನಿಂತೆ ತಿರುವಿ ಹಾಕುವ ಪತ್ರಿಕೆ ಆಗಿರಲಿಲ್ಲ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹತ್ತು ಹಲವು ಚಿಂತನೆಗಳನ್ನು ಗಂಭೀರವಾಗಿ ಕುಳಿತು ನಿರ್ವಚಿಸುವ ರೀತಿಯಲ್ಲಿ ಇತ್ತು.

ಸಮಗ್ರ ಜನತೆಯ ಏಳಿಗೆ ಬಯಸುವ `ಪ್ರಜಾವಾಣಿ~ ಮತ್ತು ಸಂಪಾದಕರು ದಿನದ ಸಂಚಿಕೆಯನ್ನು ವಿಶೇಷ ಸಂಚಿಕೆಯಾಗಿ ರೂಪಿಸಿ ಅಭಿನಂದನೆಗೆ ಪಾತ್ರವಾಗಿದ್ದಾರೆ.

 -ಡಾ.ಎಂ.ಜಿ. ಈಶ್ವರಪ್ಪ 

 ನಿವೃತ್ತ ಪ್ರಾಂಶುಪಾಲರು,ಜಾನಪದ ತಜ್ಞರುರೈತರ ಸಂಚಿಕೆ ಬರಲಿ...

ಅತ್ಯುತ್ತಮ ಸ್ತುತ್ಯರ್ಹ ಹಾಗೂ ಪತ್ರಿಕಾ ರಂಗದಲ್ಲಿ ಅದ್ಭುತವಾದ ಒಂದು ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಪತ್ರಿಕೆ ಮೇಲಿನ ಓದುಗರ ಪ್ರೀತಿ ಇಮ್ಮಡಿಸಿದೆ. `ಪ್ರಜಾವಾಣಿ~ ನಿತ್ಯವೂ ಮಾಧ್ಯಮ ಕ್ಷೇತ್ರದಲ್ಲಿ ಅನುಕರಣೀಯವಾಗಿದ್ದು, ನನ್ನಂತಹ ಲಕ್ಷಾಂತರ ಜನರಲ್ಲಿ  ವೈಚಾರಿಕ ಹಾಗೂ ಜಾತ್ಯತೀತ ಮನೋಭಾವ ಬೆಳೆಸುವಂತಾಗಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗೆ ಕನ್ನಡಿ ಹಿಡಿಯಲಿ. 

 ಎಲ್.ಎಚ್. ಅರುಣ್‌ಕುಮಾರ್ಸರಳ ಸುಂದರ


ಅಪರೂಪದ ವಿಚಾರವಂತರಾದ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಬಂದಿರುವ `ಪ್ರಜಾವಾಣಿ~ ಸಂಚಿಕೆ ಸರಳ ಮತ್ತು ಸುಂದರ. ಸಾಮಾಜಿಕ ಸಮಾನತೆಯ ಆಶಯವನ್ನು ಇಷ್ಟು ಆಳವಾದ, ತೀವ್ರವಾದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಕಟಿಸುವುದು `ಪ್ರಜಾವಾಣಿ~ಯಿಂದ ಮಾತ್ರ ಸಾಧ್ಯ ಎಂದು ಮತ್ತೆ ಮತ್ತೆ ಅನಿಸುವುದು ಇದೇ ಕಾರಣಕ್ಕೆ.

 ಡಾ.ಬಿ.ಸಿ. ದಾದಾಪೀರ್‌ ದಾವಣಗೆರೆಅತ್ಯುತ್ತಮ ಪ್ರಯತ್ನ

ಪತ್ರಿಕೆ ಬಗ್ಗೆ ಕಾಲೇಜಿನಲ್ಲಿ ಚರ್ಚೆ ಮಾಡಿದೆವು. ಇದು ಬಹಳ ಅತ್ಯುತ್ತಮವಾದ ಪ್ರಯತ್ನ. ತಳಸಮುದಾಯಗಳ ಬಗ್ಗೆ ಪತ್ರಿಕೆಯ ಬದ್ಧತೆ, ಕಾಳಜಿಯನ್ನು ತೋರಿಸುತ್ತದೆ. ಇದು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲ ದಲಿತಪರ ಚಿಂತಕರು ಶಾಶ್ವತವಾಗಿ  ಇಟ್ಟುಕೊಳ್ಳಬೇಕಾದ ಸಂಗ್ರಹಯೋಗ್ಯ ಸಂಚಿಕೆ. 

 ಡಾ.ಮಲ್ಲಿಕಾರ್ಜುನಕಲಮರಹಳ್ಳಿ, ದಾವಣಗೆರೆಹೊಸ ಮೈಲಿಗಲ್ಲು


ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿ ಬಂದಿದೆ. `ಪ್ರಜಾವಾಣಿ~ ಮೈಲಿಗಲ್ಲು ಸ್ಥಾಪಿಸಿದೆ. 

 ಚಂದ್ರಶೇಖರ್ ತಾಳ್ಯ, ಸಾಹಿತಿನೋವು ತೆರೆದಿಟ್ಟಿದ್ದಾರೆ


ಸಂಚಿಕೆ ತುಂಬಾ ಚೆನ್ನಾಗಿ ಬಂದಿದೆ. ಶೋಷಿತ ವರ್ಗ ಶತಮಾನಗಳಿಂದ ಅನುಭವಿಸುವ ನೋವುಗಳನ್ನು ದೇವನೂರು ಮಹಾದೇವ ಅವರು ತೆರೆದಿಟ್ಟಿದ್ದಾರೆ. 

 ಪ್ರೊ.ಬಿ.ಪಿ. ವೀರಭದ್ರಪ್ಪ   ಶಿವಗಂಗೋತ್ರಿಚರಿತ್ರೆ ಬರೆದ ಪತ್ರಿಕೆ

ಶನಿವಾರದ `ಪ್ರಜಾವಾಣಿ~ ಕೇವಲ ಸಂಚಿಕೆಯಲ್ಲ. ದಲಿತರ ನೋವು-ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಮೂಲಕ ಚರಿತ್ರೆ ಸೃಷ್ಟಿಸಿದೆ.

 ಆಲೂರು ನಿಂಗರಾಜ್ 

 ದಸಂಸ ರಾಜ್ಯ ಸಂಘಟನಾಸಂಚಾಲಕಸೂಕ್ತ ಸಂಚಿಕೆ 

 `ಪ್ರಜಾವಾಣಿ~ `ದಲಿತ ಸಂಚಿಕೆ~ ಹೊರತಂದಿರುವುದು ಉತ್ತಮ ಪ್ರಯೋಗವಾಗಿದೆ. `ಪ್ರಜಾವಾಣಿ~ಗೆ ಅತಿಥಿ ಸಂಪಾದಕರಾಗುವುದಕ್ಕೆ ಚಿಂತಕ ದೇವನೂರ ಮಹಾದೇವ ಅವರು ಸೂಕ್ತ ವ್ಯಕ್ತಿ. ಸಂಗ್ರಹ ಯೋಗ್ಯವಾಗಿದೆ.

 ಟಿ. ಗಿರಿಜಾ, ಲೇಖಕಿ, ದಾವಣಗೆರೆಕಾಳಜಿಗಳ ಮರುಶೋಧ


ಸೌರಮಾನ ಯುಗಾದಿ, ಅಂಬೇಡ್ಕರ್ ಜಯಂತಿಗಳ ಜತೆಗೆ`ಪ್ರಜಾವಾಣಿ~ ಹೊಸತನ ನೀಡಿದೆ.ನಿಜವಾದ ಅರ್ಥದಲ್ಲಿ ಪತ್ರಿಕೆ ಇಂದು ಕಾಳಜಿಗಳ ಮರುಶೋಧಮಾಡಿಬಿಟ್ಟಿದೆ.

`ಪ್ರಜಾವಾಣಿ~ಯ ಪುಟ ಪುಟಗಳಲ್ಲಿ ಹಾಗೂ ಪುರವಣಿಯಲ್ಲಿ ಮಿಂಚಿನ ಸೆಳೆತ ಇತ್ತು. ಇಂತಹ ಪ್ರಯೋಗ ಮುಂದುವರಿಯಲಿ.

 ವಾಮನ ನಂದಾವರ ಜಾನಪದ ವಿದ್ವಾಂಸಸಂಗ್ರಹಯೋಗ್ಯ ಸಂಚಿಕೆ


ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಡಿ  ಹೊರಬಂದಿರುವ  ಶನಿವಾರದ `ಪ್ರಜಾವಾಣಿ~ ಸಂಚಿಕೆ ಉತ್ತಮವಾಗಿದ್ದು, ಸಂಗ್ರಹಯೋಗ್ಯವಾಗಿದೆ. ನಾಡಿನ ಎಲ್ಲಾ ರೀತಿಯ ಶೋಷಿತ ವರ್ಗದ ಜನತೆಯನ್ನು ಸ್ಮರಿಸಿ, ಪರಿಹಾರ ಸೂಚಿಸುವ ಸಂಚಿಕೆಯಾಗಿ ಹೊರಬಂದಿದೆ. ಮಹಾನ್ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಹೇಗೆ ಸ್ಮರಿಸಬಹುದೆಂಬುದನ್ನು ತೋರಿಸಿದ್ದಾರೆ.

 -ಸಚಿವ ಎಸ್.ಸುರೇಶ್ ಕುಮಾರ್ ಚಿಕ್ಕಮಗಳೂರಿನಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ...ಹೊಸ ಚಿಂತನೆಗೆ ದಾರಿ

ದೇವನೂರ ಮಹಾದೇವ ಅವರನ್ನು ಅತಿಥಿ ಸಂಪಾದಕರನ್ನಾಗಿಸುವ ಮೂಲಕ ಈ ನಾಡಿನ ನತದೃಷ್ಟ ಜನಾಂಗದ ಆತ್ಮಬಲವನ್ನು ಹೆಚ್ಚಿಸುವಲ್ಲಿ `ಪ್ರಜಾವಾಣಿ~ ಪ್ರಜ್ಞೆ ನಿಜಕ್ಕೂ ಮೆಚ್ಚುಗೆ ಆಗಿದೆ.

 ಜಯನ್ ಮಲ್ಪೆ

  ದಲಿತ ಸಂಘರ್ಷ ಸಮಿತಿ, ಉಡುಪಿಪ್ರಯತ್ನ ಶ್ಲಾಘನೀಯ

 ದೇವನೂರ ನಿಜಕ್ಕೂ ಸಂಪಾದಕರಾಗುವ ಅರ್ಹತೆ ಹೊಂದಿರುವವರು. ಅವರನ್ನು ಅತಿಥಿ ಸಂಪಾದಕರನ್ನಾಗಿಸಿ `ಪ್ರಜಾವಾಣಿ~ ಹೊರತಂದ ಸಂಚಿಕೆ ಉತ್ತಮವಾಗಿತ್ತು.

ಆದರೆ ಅಂಬೇಡ್ಕರ್ ಜನ್ಮದಿನದಂದೇ ದೇವನೂರರನ್ನು ಸಂಪಾದಕರನ್ನಾಗಿಸಿದ್ದು ಮತ್ತೆ ದಲಿತರಿಗೆ, ಅಂಬೇಡ್ಕರರಿಗೆ ಕೇವಲ ಈ ದಿನ ಮಾತ್ರ ಬೇಕಿತ್ತಾ ಎಂಬ ಸಂದೇಹ ನನ್ನಲ್ಲಿ ಉಳಿಯಿತು

 ದಿನಕರ ಬೆಂಗ್ರೆತಿಂಗಳಿಗೆ ಒಂದು ಪುಟ


ರಾಜಕಾರಣಿಗಳಲ್ಲಿ ಕೇವಲ ಮತ ಬ್ಯಾಂಕ್ ಹಿನ್ನೆಲೆಯ ದಲಿತರ ಕಾಳಜಿ ಇರುವ ಇಂದಿನ ದಿನದಲ್ಲಿ ಪತ್ರಿಕೆಯೊಂದು ದಲಿತರ ಬಗ್ಗೆ ಅಂಬೇಡ್ಕರ್ ಜನ್ಮದಿನಾಚರಣೆ ಸಂದರ್ಭ ಕಾಳಜಿ ವಹಿಸಿರುವುದು ಸ್ತುತ್ಯರ್ಹ.  `ಪ್ರಜಾವಾಣಿ~ಯ ಇಂದಿನ ಪ್ರಯೋಗ ಉತ್ತಮ ಬೆಳವಣಿಗೆ. ಅಸಮಾನತೆಯಿಂದ ಕಾಣುವ ಜನಾಂಗದ ಕುರಿತು ತಿಂಗಳಿಗೆ ಒಂದು ಬಾರಿಯಾದರೂ ಒಂದು ಪುಟವನ್ನು ಮೀಸಲಿರಿಸಿದರೆ ಉತ್ತಮ.

 ಎಂ.ಎ.ಖಾದರ್ ಪುತ್ತೂರು

  ವರ್ತಕರ ಸಂಘದ ಮಾಜಿಕಾರ್ಯದರ್ಶಿಸಕಾಲದ ಸಂಚಿಕೆ

ಸಕಾಲಕ್ಕೆ ವಿಶೇಷ ಸಂಚಿಕೆ ಮೂಡಿ ಬಂದಿದೆ. ದೇವನೂರು ಮಹಾದೇವ ಅವರ ಎತ್ತಿರುವ ಪ್ರಶ್ನೆಗಳು ಪ್ರಸ್ತುತವಾಗಿವೆ. 

 -ತಾರಿಣಿ ಶುಭದಾಯಿನಿಇತಿಹಾಸದಲ್ಲಿ ದಾಖಲಾರ್ಹ 

`ಪ್ರಜಾವಾಣಿ~ ದಿನಪತ್ರಿಕೆಯು ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ದಾಖಲಾರ್ಹವಾದಂತಹ, ಶ್ಲಾಘನೀಯವಾದ ಕಾರ್ಯವನ್ನು ನಿರ್ವಹಿಸಿದೆ.

  ಈ ಮೂಲಕ ಕಟ್ಟಕಡೆಯ ಮನುಷ್ಯನಿಗೂ ತಲುಪುವ ಪತ್ರಿಕೆ `ಪ್ರಜಾವಾಣಿ~ ಎಂಬುದನ್ನು ಈ ಸಂಚಿಕೆಯ ಮೂಲಕ ಸಾಬೀತು ಮಾಡಿದ್ದೀರಿ.

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಶಂಕರಘಟ್ಟಜಾಗೃತಿಗೆ ಪೂರಕ

`ಸಂಚಿಕೆ ಬಹಳ ಚೆನ್ನಾಗಿತ್ತು. ಈ ಸಂಚಿಕೆ ರೂಪಿಸಿದ್ದಕ್ಕೆ ಪತ್ರಿಕೆಗೆ ವಿಶೇಷ ಗೌರವ ವ್ಯಕ್ತಪಡಿಸುತ್ತೇನೆ. ದಲಿತರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಲು ಈ ಸಂಚಿಕೆ ಪೂರಕ ಆಗಲಿದೆ~. 

 ಕೋಡಿಹಳ್ಳಿ ಚಂದ್ರಶೇಖರ್ 

 ರಾಜ್ಯ ರೈತ ಸಂಘದ ಅಧ್ಯಕ್ಷಬಸವ ಜಯಂತಿಗೂ ಬರಲಿ

ಡಾ.ಅಂಬೇಡ್ಕರ್ ರವರ 121 ನೇ ಜಯಂತಿ ಅಂಗವಾಗಿ ದೇವನೂರ ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರಬಂದ `ಪ್ರಜಾವಾಣಿ~ ದಿನಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದೆ. ಇದಕ್ಕಾಗಿ ಸಂಪಾದಕ ಕೆ.ಎನ್. ಶಾಂತಕುಮಾರ್ ಅವರಿಗೆ ಅಭಿನಂದನೆಗಳು.

12 ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿ ಮಾಡಿದ ಮಹಾಪುರುಷ ಜಗಜ್ಯೋತಿ ಬಸವೇಶ್ವರರ ಜಯಂತಿ ಸಂದರ್ಭದಲ್ಲಿ (24.4.2012) ಇದೇ ರೀತಿಯ ಸಂಚಿಕೆ ಬರಬಹುದೆಂದು ನಾವು ನಿರೀಕ್ಷಿಸಬಹುದೇ?

-ಎಸ್.ಎಂ.ಜಂಬುಕೇಶ್ವರ ಛಾಯಾಚಿತ್ರ ಕಲಾವಿದ. ಮೈಸೂರುವಿಚಾರ ಪ್ರಚೋದಕ

ಅಂಬೇಡ್ಕರ್ ಜಯಂತಿ ದಿನ`ಪ್ರಜಾವಾಣಿ~ ಸಾಹಿತಿ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರತಂದ ವಿಶೇಷ ಸಂಚಿಕೆ ತುಂಬಾ ವಿಚಾರಪ್ರಚೋದಕವೂ, ಸಮಯೋಚಿತವೂ ಆಗಿದೆ.

ಇದೊಂದು ಚಿರನೂತನ ಪ್ರಯೋಗ.  ಎಲ್ಲ ಲೇಖನಗಳನ್ನು ಸೇರಿಸಿ ಒಂದು ಪುಸ್ತಕವನ್ನೇ `ಪ್ರಜಾವಾಣಿ~ ಮುದ್ರಿಸಬಹುದು.

ಅಂದ ಹಾಗೆ ಡಾ.ಅಂಬೇಡ್ಕರ್ ಮತ್ತು ಡಾ.ಲೋಹಿಯಾ ಅವರ ಪತ್ರ ವ್ಯವಹಾರಗಳ ಪುಸ್ತಕ ಪ್ರಕಟವಾಗಿದೆ. ಅದರಲ್ಲಿ ಇಬ್ಬರು ಸೇರಿ ಭಾರತದ ನವಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವ ಪ್ರಸ್ತಾಪವಿದೆ. ಈ ಬಗ್ಗೆ ಲೇಖನಗಳಲ್ಲಿ ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು.

ಹಿರಿಯ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಶಿವಮೊಗ್ಗ 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.