ಬುಧವಾರ, ಜನವರಿ 29, 2020
28 °C
ಚಿಕ್ಕಬಳ್ಳಾಪುರದಲ್ಲಿ ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ

ಪ್ರತಿಭಟನೆ ನಡುವೆ ಮಡೆ ಮಡೆಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮಡೆ ಮಡೆಸ್ನಾನ ರದ್ದುಪಡಿಸ­ಲಾಗಿದ್ದು, ಅದರ ಆಚ ರಣೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ, ತಹಶೀಲ್ದಾರ್‌ ಹೇಳಿದ ನಂತರವೂ ನಗರದ ಸುಬ್ರಮಣ್ಯ ದೇವಾಲಯದಲ್ಲಿ ಭಾನುವಾರ ನಿರಾತಂಕವಾಗಿ ಈ ಆಚರಣೆ ನೆರವೇರಿತು.ಮಡೆ ಮಡೆಸ್ನಾನ ವಿರೋಧಿಸಿದ ಸಿಪಿಎಂ ಕಾರ್ಯಕರ್ತರು ರದ್ಧತಿಯ ಭರವಸೆ ನಂಬಿ ಪ್ರತಿಭಟನೆ ಹಿಂಪಡೆದ ಒಂದು ಗಂಟೆ ಅವಧಿಯೊಳಗೆ ದೇವಾ­ಲಯ­ದಲ್ಲಿ ನಡೆದ ಮಡೆ ಮಡೆಸ್ನಾನ ದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಪಾಲ್ಗೊಂಡರು.‘ಸುಬ್ರಮಣ್ಯ ಗೋವಿಂದಾ’ ಎಂದು ಘೋಷಣೆ ಹಾಕಿ, ಚಪ್ಪಾಳೆ ತಟ್ಟುತ್ತ ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡಿದರು. ನಂತರ ಎಲೆಗಳನ್ನು ತಲೆ ಮೇಲೆ ಹೊತ್ತು ದೇವಾಲಯ ದಿಂದ ಹೊರನಡೆದರು. ದಾರಿಯುದ್ದ ‘ಸುಬ್ರಮಣ್ಯ ಗೋವಿಂದಾ’ ಎಂದು ಘೋಷಣೆ ಹಾಕಿದರು.ನಗರದ ಸುಬ್ರಮಣ್ಯೇಶ್ವರ ದೇವಾ ಲಯದಲ್ಲಿ ನಡೆಯುವ ಮಡೆ ಮಡೆ ಸ್ನಾನ ಪದ್ಧತಿ ನಿಷೇಧಿಸಬೇಕು ಎಂದು ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿ ಕಾರಿ ಡಾ.ಆರ್‌.ವಿಶಾಲ್ ಅವರಿಗೆ ನಾಲ್ಕು ದಿನಗಳ ಹಿಂದೆಯಷ್ಟೇ ಮನವಿ ಪತ್ರ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಸೂಚನಾ ಪತ್ರವೊಂದನ್ನು ರವಾನಿಸಿದ ತಹ ಶೀಲ್ದಾರ್‌ ಡಿ.ಬಿ.ನಟೇಶ್‌, ‘ಮಡೆ ಮಡೆಸ್ನಾನ ಅಮಾನವೀಯ ಪದ್ಧತಿ ಯಾಗಿದ್ದು, ಅದನ್ನು ನಡೆಸದಂತೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸು ತ್ತಿರುವ ಆಯೋಜಕರಿಗೆ ತಿಳಿವಳಿಕೆ ನೀಡಲಾಗಿದೆ. ಇದಕ್ಕೆ ಆಯೋಜಕರು ಒಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರಿಗೆ ಸೂಚಿಸಿದ್ದರು. ಆದರೆ ಇದರ ಹೊರತಾಗಿಯೂ ಮಡೆ ಮಡೆಸ್ನಾನ ನಡೆಯಿತು. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಸೂಚನೆ ಪಾಲನೆಯಾಗಲಿಲ್ಲ.ವಿವರ: ಮಡೆ ಮಡೆಸ್ನಾನ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬೆಳಿಗ್ಗೆಯೇ ಸಿಪಿಎಂ ಕಾರ್ಯಕರ್ತರು ಕೈಗೊಂಡ ಪ್ರತಿಭಟನಾ ಮೆರವಣಿಗೆ ಯನ್ನು ಪೊಲೀಸರು ದೇವಾಲಯ ದಿಂದ ಸ್ವಲ್ಪ ದೂರದಲ್ಲೇ ತಡೆದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಮಡೆ ಮಡೆಸ್ನಾನ ಆಯೋಜನಾ ಸಮಿತಿಯ ಪದಾಧಿಕಾರಿ ಬಾಲಸುಬ್ರಮಣ್ಯ, ‘ಸರ್ಕಾರಿ ಸೂಚನೆ ಮೇರೆಗೆ ಮಡೆಸ್ನಾನ ಪದ್ಧತಿ ಆಚರಿಸುವುದಿಲ್ಲ. ಆಚರಣೆಗೆ ಅವಕಾಶ ಕೊಡುವುದಿಲ್ಲ’ ಎಂದು ಭರವಸೆ ನೀಡಿದ ಕೆಲ ಹೊತ್ತಿನಲ್ಲೇ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.ಮಧ್ಯಾಹ್ನ 1.45ರ ಪ್ರತಿಭಟನೆ ಸ್ಥಗಿತಗೊಂಡರೆ, ಸರಿಯಾಗಿ 3 ಗಂಟೆಗೆ ಊಟದ ಮೊದಲನೇ ಪಂಕ್ತಿ ಕೊನೆ ಗೊಂಡ ಕೂಡಲೇ ಭಕ್ತಾದಿಗಳು ಉರುಳುಸೇವೆ ಆರಂಭಿಸಿದರು. ಪೋಷ ಕರು ತಮ್ಮ ಮಕ್ಕಳನ್ನು ಎಂಜಲು ಎಲೆ ಗಳ ಮೇಲೆ ಉರುಳಾಡಿಸುವುದರ ಜತೆಯಲ್ಲೇ ಮಹಿಳೆಯರು ಸಹ ಉರು ಳುಸೇವೆ ಮಾಡಿದರು.ಮಾಧ್ಯಮದವರ ಮೇಲೆ ಹಲ್ಲೆ: ಮಡೆ ಮಡೆಸ್ನಾನ ನಡೆಯುತ್ತಿರುವ ದೃಶ್ಯ ಗಳನ್ನು ಸೆರೆ ಹಿಡಿಯಲು ಯತ್ನಿಸಿದ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಛಾಯಾಗ್ರಾಹಕರ ಮೇಲೆ ಮಡೆ ಮಡೆಸ್ನಾನ ಆಯೋಜನಾ ಸಮಿತಿ ಸದಸ್ಯರು ಹಲ್ಲೆ ಮಾಡಿದರು.ಕೈಯಲ್ಲಿದ್ದ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ನೂಕು ನುಗ್ಗಾಟ,ಮಾತಿನ ಚಕಮಕಿಯೂ ನಡೆಯಿತು. ‘ನಮ್ಮ ಪಾಡಿಗೆ ನಾವು ಮಡೆ ಮಡೆಸ್ನಾನ ಮಾಡಿದರೆ, ನೀವು ಯಾಕೆ ದೃಶ್ಯಗಳನ್ನು ಸೆರೆ ಹಿಡಿಯುತ್ತೀರಿ? ಸುಮ್ಮಸುಮ್ಮನೆ ಫೋಟೋಗಳನ್ನು ತೆಗೆ ಯಬೇಡಿ’ ಎಂದು ಸಿಟ್ಟಿಗೆದ್ದ ಆಯೋಜನಾ ಸಮಿತಿ ಸದಸ್ಯರು ಮಾಧ್ಯಮದವರನ್ನು  ಎಳೆದಾಡಿದರು.ಬಂಧನಕ್ಕೆ ಆಗ್ರಹ: ಮಡೆ ಮಡೆ ಸ್ನಾನದ ಆಯೋಜಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಅನಿರ್ದಿಷ್ಟ ಅವಧಿ ಧರಣಿಯನ್ನು ಭಾನುವಾರ ಸಂಜೆ ಆರಂಭಿಸಿದ್ದಾರೆ.ನಾಗಲಮಡಿಕೆಯಲ್ಲೂ ಆಚರಣೆ:  ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ಸ್ಕಂದ ಷಷ್ಠಿ ಪ್ರಯುಕ್ತ ಮಡೆ ಮಡೆ ಸ್ನಾನ ನಡೆಯಿತು.ಮಂಗಳೂರು ವರದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ ಚಂಪಾಷಷ್ಠಿ ಪ್ರಮುಕ್ತ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸತತ ಮೂರನೇ ದಿನವೂ ಇಲ್ಲಿ ಮಡೆ ಮಡೆ ಸ್ನಾನ ಆಚರಣೆ ನಡೆಯಿತು.‘ನಂಬಿಕೆ ದ್ರೋಹ’

ಮಡೆ ಮಡೆಸ್ನಾನ ಆಯೋಜನಾ ಸಮಿತಿ ಪದಾಧಿಕಾರಿಗಳು ಮಡೆಸ್ನಾನ ರದ್ದುಪಡಿಸಲಾಗಿದೆ ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದವು. ಆದರೆ ಮಡೆಸ್ನಾನ ನಡೆದಿರುವುದು ನಮಗೆ ನಂಬಿಕೆ ದ್ರೋಹ ವಾಗಿದೆ. ಮಡೆಸ್ನಾನ ರದ್ದುಪಡಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ, ತಹಶೀಲ್ದಾರರು ಕೂಡ ಕ್ರಮ ಕೈಗೊಳ್ಳಲಿಲ್ಲ. ಇದು ಖಂಡನೀಯ.

–ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)