ಬುಧವಾರ, ಮೇ 25, 2022
29 °C

ಪ್ರತಿಯೊಬ್ಬರಿಗೂ ಇತಿಹಾಸದ ಅರಿವು ಆವಶ್ಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟವೇ ಇತಿಹಾಸ ಎಂದು ತಹಶೀಲ್ದಾರ್ ಎಂ.ಪಿ. ಮಾರುತಿ ಅಭಿಪ್ರಾಯಪಟ್ಟರು.ಇಲ್ಲನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಸಹಯೋಗದಲ್ಲಿ ಆರಂಭಿಸಿರುವ ಹೆರಿಟೇಜ್ ಕ್ಲಬ್ (ಪರಂಪರೆ ಕೂಟ) ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಗತ ಇತಿಹಾಸವನ್ನು ನೋಡಿದರೆ ಬಲಾಢ್ಯರು ಮತ್ತು ನಿಸ್ಸಹಾಯಕರ ವಿರುದ್ಧ ನಡೆದ ಹೋರಾಟದ ಬಗ್ಗೆ ಅನೇಕ ದಾಖಲೆಗಳು ಸಾಕ್ಷಿಯಾಗುತ್ತವೆ. ಇಂದೂ ಕೂಡ ಪದವಿಯಲ್ಲಿ ಕಲಾವಿಭಾಗದಲ್ಲಿ ಪ್ರಮುಖವಾಗಿ  ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಕಡಿಮೆಯೇ.ಆದರೂ, ಇತಿಹಾಸ ಅಧ್ಯಯನ ನಡೆಸಿದ ಉತ್ತಮ ಸಾಧನೆ ಮಾಡಿದ ಅನೇಕ ಮಂದಿ ನಮ್ಮ ಮುಂದಿದ್ದಾರೆ ಎಂದರು.ವಿದ್ಯಾರ್ಥಿಗಳು ಕೇವಲ ಕಾಲೇಜು, ಪಠ್ಯ ವಿಷಯಗಳಿಗಷ್ಟೇ ಸೀಮಿತವಾಗಬಾರದು. ನಮ್ಮ ಸುತ್ತಲಿನ ಪರಿಸರದ್ಲ್ಲಲಾಗುವ ಏರುಪೇರುಗಳ ಬಗ್ಗೆಯೂ ಗಮನಕೊಡಬೇಕು. ಜನತೆ ಕಷ್ಟದಲ್ಲಿರುವಾಗ ಅವರಿಗೆ ನೆರವಾಗಬೇಕು ಎಂದು ಸಲಹೆ ಮಾಡಿದರು.ಹೆರಿಟೇಜ್ ಕ್ಲಬ್ ಸಂಚಾಲಕ ಡಾ.ಆರ್. ವೇಣುಗೋಪಾಲ್ ಮಾತನಾಡಿದರು. ತುಮಕೂರು ಸಿದ್ದಗಂಗಾ ಮಹಿಳಾ ಕಾಲೇಜು ಇತಿಹಾಸ ಪ್ರಾಧ್ಯಾಪಕ ಡಾ.ಡಿ.ಎನ್. ಯೋಗೀಶ್ವರಪ್ಪ, ಪ್ರಾಂಶುಪಾಲ ಪ್ರೊ.ಡಿ.ಆರ್.  ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಭೈರಪ್ಪ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಪರಮೇಶ್ವರಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.