ಪ್ರತಿ ಮಗುವಿಗೂ ರಕ್ಷಣೆ ಅಗತ್ಯ

ಸೋಮವಾರ, ಮೇ 20, 2019
29 °C

ಪ್ರತಿ ಮಗುವಿಗೂ ರಕ್ಷಣೆ ಅಗತ್ಯ

Published:
Updated:

ಬೆಂಗಳೂರು: `ಸಮಾಜದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ರಕ್ಷಣೆ ಹಾಗೂ ಪೋಷಣೆ ಸಿಗಬೇಕು~ ಎಂದು ರಾಜ್ಯ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸುಧಾರಣಾ ವಿಭಾಗದ ನಿರ್ದೇಶಕಿ ನರ್ಮದಾ ಆನಂದ್ ಇಲ್ಲಿ ಅಭಿಪ್ರಾಯಪಟ್ಟರು.ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶುಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ದತ್ತು ಪೋಷಕರ ಸಭೆಯಲ್ಲಿ ಅವರು ಮಾತನಾಡಿ, ಮಕ್ಕಳು ಪೋಷಕರ ಪೋಷಣೆಯಿಂದ ವಂಚಿತರಾಗಬಾರದು ಎಂದರು.ದತ್ತು ಸಹಕಾರ ಸಮಿತಿ (ಎಸಿಎ) ಅಧ್ಯಕ್ಷೆ ಡಾ.ಅಲಮಾ ಲೊಬೊ ಮಾತನಾಡಿ, `ದತ್ತು ಪಡೆದ ಮಕ್ಕಳು ಹಾಗೂ ಹೆತ್ತ ಮಕ್ಕಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡಬೇಕು. ಪೋಷಣೆಯ ಅವಧಿಯಲ್ಲಿ ಸಂಪೂರ್ಣವಾಗಿ ಪ್ರೀತಿಯಿಂದ ವರ್ತಿಸಬೇಕು. ಆಗ ಮಾತ್ರ ಮಕ್ಕಳಿಂದ ನಿರೀಕ್ಷಿಸಿದ ಫಲ ಪೋಷಕರಿಗೆ ಸಿಗಲು ಸಾಧ~್ಯ ಎಂದು ಹೇಳಿದರು.ದತ್ತು ಸ್ವೀಕಾರ: ಇಂದು ನಡೆದ ಸಭೆಯಲ್ಲಿ ಮಂಗಳೂರಿನ ದಂಪತಿಗಳಾದ ಅನಿಲ್‌ಕುಮಾರ್ ವೆಗಾಸ್ ಹಾಗೂ ಮೀನಾ 4 ತಿಂಗಳ `ವಿಜಯಲಕ್ಷ್ಮೀ~ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡರು. ಇದೇ ವೇಳೆ ಶಿಶು ಮಂದಿರದಿಂದ ದತ್ತು ಪಡೆದ ಮಕ್ಕಳ ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಶಿಶು ಮಂದಿರದ ಮಕ್ಕಳು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇಲಾಖೆಯ ಉಪ ನಿರ್ದೇಶಕ ರಮೇಶ್ ಹಾಲಬಾವಿ, ಮಕ್ಕಳ ಕಲ್ಯಾಣ ಸಮಿತಿ ನಗರ ಅಧ್ಯಕ್ಷೆ ರಾಧಾ ಶ್ರೀನಿವಾಸಮೂರ್ತಿ, ಸಮಿತಿಯ ಗ್ರಾಮೀಣ ವಿಭಾಗದ ಅಧ್ಯಕ್ಷೆ ಅಲಾಸ್ ಅಲೋಸೆಯಸ್, ಜನೋದಯ ಸಮಿತಿಯ ನಿರ್ದೇಶಕಿ ಸಂತೋಷ್ ವಾಜ್ ಇತರರು ಉಪಸ್ಥಿತರಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry