ಸೋಮವಾರ, ಜೂನ್ 14, 2021
27 °C

ಪ್ರತ್ಯೇಕ ಪ್ರಕರಣ: ಚಿನ್ನದ ಸರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಟೊದಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.ಶಾಂತವೇರಿ ಗೋಪಾಲಗೌಡ ನಗರದ ಮೂರನೇ ಅಡ್ಡರಸ್ತೆ ನಿವಾಸಿ ಜ್ಯೋತಿ (37) ಸರ ಕಳೆದುಕೊಂಡವರು. ಅವರು, ಬೆಳಿಗ್ಗೆ 6.30ರ ಸುಮಾರಿಗೆ ಸಮೀಪದ ಅಂಗಡಿಯಲ್ಲಿ ಹಾಲು ತರಲು ಹೋಗುತ್ತಿದ್ದಾಗ ಆಟೊದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 55 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಸರದ ಮೌಲ್ಯ ಸುಮಾರು ಒಂದು ಲಕ್ಷ ಇರಬಹುದು ಎಂದು ಪೊಲೀಸರು ತಿಳಿಸಿದರು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ :ಬೈಕ್‌ನ ಹಿಂಬದಿ ಕುಳಿತಿದ್ದ ಮಹಿಳೆಯಿಂದ ದುಷ್ಕರ್ಮಿಯೊಬ್ಬ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.ಕಾಟನ್‌ಪೇಟೆ ನಿವಾಸಿ ಮಂಜುನಾಥ್ ಅವರ ಪತ್ನಿ ಗಾಯಿತ್ರಿ ಸರ ಕಳೆದುಕೊಂಡವರು. ಸಂಜೆ ಚಿಕ್ಕಪೇಟೆಗೆ ಹೋಗಿದ್ದ ದಂಪತಿ ರಾತ್ರಿ 8.45ಕ್ಕೆ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು.ಖೋಡೆ ವೃತ್ತದ ಬಳಿ ಇರುವ ಮೇಲ್ಸೇತುವೆಯಲ್ಲಿ ರೈಲು ಹೋಗುತ್ತಿದ್ದರಿಂದ ಮೇಲಿನಿಂದ ಕಸ ಬೀಳಬಹುದೆಂದು ಮಂಜುನಾಥ್ ವಾಹನವನ್ನು ನಿಲ್ಲಿಸಿದ್ದಾರೆ.ಈ ವೇಳೆ ವ್ಯಕ್ತಿಯೊಬ್ಬ ಗಾಯಿತ್ರಿ ಅವರ ಕೊರಳಲಿದ್ದ 70 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಟನ್‌ಪೇಟೆ ಠಾಣೆಯ್ಲ್ಲಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.