ಶನಿವಾರ, ಮೇ 21, 2022
20 °C

ಪ್ರತ್ಯೇಕ ಸಿಗ್ನಲ್ ಅಳವಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯನಗರ 5ನೇ ಬ್ಲಾಕ್‌ನ ರಾಘವೇಂದ್ರ ಮಠ ವೃತ್ತದಲ್ಲಿ ಜೆ. ಪಿ. ನಗರ ಕಡೆಯಿಂದ ಬರುವ ವಾಹನಗಳಿಗೆ ಬಲ ತಿರುವು ನಿಷೇಧ ಜಾರಿಯಲ್ಲಿದೆ. ಈ ಮುಂಚೆ ಮಠದ ಎದುರುಗಡೆ ಬಲ ತಿರುವು ನೀಡಲಾಗಿತ್ತು.ಕೆಲವು ದಿನಗಳಿಂದ ಅಲ್ಲಿಯೂ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ಹಾಗಾಗಿ ಈಗಿರುವ ಬಲ ತಿರುವು ನಿಷೇಧವನ್ನು ತೆಗೆದುಹಾಕಿ ನಾಲ್ಕೂ ಕಡೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕ ಸಿಗ್ನಲ್ ಅಳವಡಿಸಿ ಜಯನಗರ 9ನೇ ಹಂತದ ಕಡೆ ಹೋಗುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.