ಪಟ್ನಾ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ಸ್ಥಾನದ ಅಭ್ಯರ್ಥಿಯ ಹೆಸರು ಘೋಷಿಸಲು ಪಕ್ಷಕ್ಕೆ ಆತುರವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಹೇಳಿದ್ದಾರೆ.

ಪ್ರಧಾನಿ ಅಭ್ಯರ್ಥಿಯನ್ನು ಬಿಜೆಪಿ ಮುಂಚಿತವಾಗಿಯೇ ಘೋಷಿಸಬೇಕು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೇಡಿಕೆಯನ್ನು ಅದೊಂದು `ಸಲಹೆ~ ಎಂದು ಬಣ್ಣಿಸಿದ್ದಾರೆ.

`ನಿತೀಶ್ ಕುಮಾರ್ ಅವರು ಈ ಸಲಹೆ ನೀಡಿರುವುದು ಒಳ್ಳೆಯದೇ. ಬಿಜಪಿಯು ಸೂಕ್ತ ಸಮಯದಲ್ಲಿ ತನ್ನ ಪ್ರಧಾನಿ ಅಭ್ಯರ್ಥಿ ಹೆಸರನ್ನು ಘೋಷಿಸಲಿದೆ~ ಎಂದು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ಸಂಜೆ ಪಟ್ನಾಕ್ಕೆ ಆಗಮಿಸಿದ ಜೋಶಿ ಹೇಳಿದ್ದಾರೆ.

2014 ಲೋಕಸಭಾ ಚುನಾವಣೆಗಿಂತಲೂ ಮೊದಲೇ ಬಿಜೆಪಿ, ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿದ್ದರು.

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಲ್ಲಿ ಪ್ರಧಾನಿ ಹುದ್ದೆಗೆ ಯಾರು ಸೂಕ್ತ ವ್ಯಕ್ತಿ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಮೋದಿ ಅವರು ಗುಜರಾತ್ನಲ್ಲಿ ಅಳವಡಿಸಿರುವ ಅಭಿವೃದ್ಧಿ ಮಾದರಿಗಿಂತ ನಿತೀಶ್ ಕುಮಾರ್ ಅವರ ಅಭಿವೃದ್ಧಿ ಮಾದರಿ ಉತ್ತಮವಾಗಿದೆ ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಲೂ ಜೋಶಿ ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.