ಪ್ರಧಾನಿ ಭೇಟಿ: ಜಿಯಾಗೆ ಆಹ್ವಾನ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಪ್ರಧಾನಿ ಭೇಟಿ: ಜಿಯಾಗೆ ಆಹ್ವಾನ

Published:
Updated:

ಢಾಕಾ (ಐಎಎನ್‌ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ, ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕಿ ಹಾಗೂ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷ (ಬಿಎನ್‌ಪಿ)ದ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಪ್ರಧಾನಿ ಭೇಟಿಗೆ ಇಲ್ಲಿಯ  ಭಾರತೀಯ ಹೈ ಕಮಿಶನರ್ ರಜೀತ್ ಮಿತ್ತರ್ ಅವರು ಆಹ್ವಾನಿಸಿದ್ದಾರೆ.  ಮಂಗಳವಾರ ಹಾಗೂ ಬುಧವಾರ ಯೋಜಿತವಾಗಿರುವ ಪ್ರಧಾನಿಯ ಬಾಂಗ್ಲಾದೇಶ್ ಭೇಟಿಯನ್ನು ಖಲೀದಾ ಸ್ವಾಗತಿಸಿದ್ದಾರೆ. ಇದೇ ಮೊದಲ ಸಲ ಬಾಂಗ್ಲಾ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಭಾರತ ಆಸಕ್ತಿ ವಹಿಸಿದೆ. ಈ ಭೇಟಿಯು ಎರಡೂ ದೇಶಗಳ ಜನತೆಗೆ ಒಳಿತಾಗುವಂತಹ ಫಲಿತಾಂಶಗಳನ್ನೇ ತರಲಿ ಎಂದು ಬಿಎನ್‌ಪಿಯ ಉಪಾಧ್ಯಕ್ಷ ಶಮಶೇರ್ ಮೊಬಿನ್‌ಚೌಧರಿ ತಿಳಿಸಿದ್ದಾರೆ. ಬುಧವಾರ ಈ ಭೇಟಿಯನ್ನು ಆಯೋಜಿಸಲಾಗಿದ್ದು, ಪಕ್ಷದ ಪ್ರಮುಖ ಮುಖಂಡರು ಸಹ ಈ ಸಂದರ್ಭದಲ್ಲಿ ಹಾಜರಿರುವರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry