ಮಂಗಳವಾರ, ಜೂನ್ 15, 2021
21 °C

ಪ್ರಧಾನಿ ಸಿಂಗ್‌ಗೆ ಸಮನ್ಸ್‌ ಜಾರಿಗೆ ಕೋರ್ಟ್‌ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಐಎಎನ್‌ಎಸ್‌): ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅವರಿಗೆ ಸಮನ್ಸ್‌ ನೀಡಲು ಅಮೆರಿಕದಲ್ಲಿನ ‘ಸಿಖ್‌ರ ಹಕ್ಕುಗಳ ತಂಡ’ಕ್ಕೆ ವಾಷಿಂಗ್ಟನ್‌ನ

ಫೆಡರಲ್‌ ನ್ಯಾಯಾಲಯ ಅನುಮತಿ ನೀಡಿದೆ.ಯಾವುದೇ ಒಂದು ದೇಶದ ಮುಖ್ಯಸ್ಥರಿಗೆ ಕಾನೂನು ರೀತಿಯಲ್ಲಿ ಸಮನ್ಸ್‌ ನೀಡಲು ರಾಜತಾಂತ್ರಿಕ ಮಾರ್ಗಗಳಿಗೆ ಹೊರತಾಗಿ ‘೧೯೬೫ರ ಹೇಗ್‌ ಒಪ್ಪಂದ’ ಅವಕಾಶ ಕಲ್ಪಿಸಿದೆ ಎಂದು ಕೋರ್ಟ್‌ ಹೇಳಿದೆ.೨೦೧೩ರ ಸೆಪ್ಟೆಂಬರ್‌ನಲ್ಲಿ ಮನಮೋಹನ್‌ ಸಿಂಗ್‌ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫೆಡರಲ್‌ ಕೋರ್ಟ್‌ ಸಮನ್ಸ್‌ ಜಾರಿಗೆ ಸೂಚಿಸಿತ್ತು.ಆದರೆ ಈ ಸಮನ್ಸ್‌ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನ್ಯಾಯಾಲಯ ಏ.೧೪ರ ಒಳಗೆ ಸಮನ್ಸ್‌ ಜಾರಿ ಮಾಡಬೇಕು ಇಲ್ಲವೇ ಈ ಬಗ್ಗೆ ಆಗಿರುವ ಪ್ರಗತಿ ಕುರಿತು ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.