ಶನಿವಾರ, ಏಪ್ರಿಲ್ 17, 2021
31 °C

ಪ್ರಧಾನಿ ಹೆಸರಲ್ಲಿರುವ ಆರು ನಕಲಿ ಟ್ವಿಟರ್ ಖಾತೆ ಸ್ಥಗಿತಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರಲ್ಲಿರುವ ಆರು ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲು ಟ್ವಿಟರ್ ಸಂಸ್ಥೆ ಒಪ್ಪಿಕೊಂಡಿದೆ.



ಪ್ರಧಾನಿ ಹೆಸರಲ್ಲಿ ತೆರೆಯಲಾಗಿದ್ದ ಆರು ನಕಲಿ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಪ್ರಧಾನಿ ಕಾರ್ಯಾಲಯ ಇ-ಮೇಲ್ ಮೂಲಕ ಸಲ್ಲಿಸಿದ್ದ ಮನವಿಗೆ ಟ್ವಿಟರ್ ಪೂರಕವಾಗಿ ಸ್ಪಂದಿಸಿದೆ.



ಕೆಲವರು ಪ್ರಧಾನಿ ಹೆಸರಲ್ಲಿಯ ನಕಲಿ ಖಾತೆಗಳನ್ನು ಕಿಡಿಗೇಡಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆ. ಈಗಾಗಲೇ ಒಬ್ಬ ವ್ಯಕ್ತಿ ತನ್ನ ಖಾತೆಯನ್ನು `ಪಿಎಂಒ ಇಂಡಿಯಾ~ದಿಂದ `ಹಿಂದು ಎಕ್ಸ್‌ಪ್ರೆಸ್~ ಎಂದು ಬದಲಾಯಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.



ಭಾರತದಲ್ಲಿ 1.60 ಕೋಟಿ ಖಾತೆಗಳನ್ನು ಹೊಂದಿರುವ ಟ್ವಿಟರ್ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿಯ ಪ್ರಧಾನಿ ಹೆಸರಲ್ಲಿರುವ ಆರು ನಕಲಿ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸಲು ಮನವಿ ಮಾಡಲಾಗಿದೆಯೇ ಹೊರತು ಟ್ವಿಟರ್ ಸಂಪೂರ್ಣ ನಿರ್ಬಂಧಿಸುವ ಚಿಂತನೆ ಇಲ್ಲ ಎಂದು ಪಚೌರಿ ಹೇಳಿದ್ದಾರೆ. 



 ಈ ವರ್ಷದ ಆರಂಭದಲ್ಲಿ ಪ್ರಧಾನಿ ಕಚೇರಿ ಸೇರಿದ್ದ ಪಚೌರಿ, ಜನಸಾಮಾನ್ಯರನ್ನು ತಲುಪುವ ಉದ್ದೇಶದಿಂದ ಪ್ರಧಾನಿ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆಯುವ ಸಲಹೆ ನೀಡಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಸರ್ಕಾರ ವದಂತಿಗಳನ್ನು ಹರಡುತ್ತಿದ್ದ ಸುಮಾರು 300 ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.