ಭಾನುವಾರ, ಜೂನ್ 13, 2021
26 °C

ಪ್ರಭಾಕರನ್ ಹತ್ಯೆ ಸ್ಥಳ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್ ಹತ್ಯೆಯಾದ ಮತ್ತು ಆ ಸಂಘಟನೆಯ ಎಲ್ಲಾ ಚಟುವಟಿಕೆಗಳು ಅಂತ್ಯ ಕಂಡ ಸ್ಥಳವಾದ ನಂತಿಕಂಡಲ್ ಮರಳುದಿಬ್ಬ ಇರುವ ಪ್ರದೇಶವನ್ನು ಸಾರ್ವಜನಿಕರ ಪ್ರವೇಶಕ್ಕೆ ಶ್ರೀಲಂಕಾ ಸರ್ಕಾರ ಮುಕ್ತಗೊಳಿಸಿದೆ.ಶ್ರೀಲಂಕಾದ ಮುಲ್ಲೈತಿವು ಜಿಲ್ಲೆಯಲ್ಲಿರುವ ಮರಳು ದಿಬ್ಬದಲ್ಲಿ 2009ರ ಮೇ 18ರಂದು ಎಲ್‌ಟಿಟಿಇ ಮುಖ್ಯಸ್ಥ ವಿ. ಪ್ರಭಾಕರ್‌ನ ಶವ ಪತ್ತೆಯಾಗಿತ್ತು.ಈ ಪ್ರದೇಶದಲ್ಲಿ ಹುದುಗಿಸಲಾಗಿದ್ದ ಸ್ಫೋಟಕಗಳು ಹಾಗೂ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ವಿಳಂಬವಾಯಿತು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.