ಸೋಮವಾರ, ಜೂನ್ 21, 2021
27 °C
28 ಮಂದಿ ನಾಮಪತ್ರ

ಪ್ರಮುಖರಲ್ಲಿ ಬಿಎಸ್‌ವೈ, ಖರ್ಗೆ, ಮೊಯಿಲಿ, ಧರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಗುರುವಾರ ಕೇಂದ್ರ ಸಚಿವರಾದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ 28 ಮಂದಿ ಒಟ್ಟು 51 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಖರ್ಗೆ ಗುಲ್ಬರ್ಗದಿಂದ, ಮೊಯಿಲಿ  ಚಿಕ್ಕಬಳ್ಳಾಪುರದಿಂದ ಹಾಗೂ ಧರ್ಮಸಿಂಗ್‌ ಬೀದರ್‌ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ (ಶಿವಮೊಗ್ಗ), ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ), ಅನಂತಕುಮಾರ್‌ ಹೆಗಡೆ (ಕಾರವಾರ), ಜಿ.ಎಂ.ಸಿದ್ದೇಶ್ವರ (ದಾವಣಗೆರೆ), ನಳಿನ್‌ಕುಮಾರ್ ಕಟೀಲು (ಮಂಗಳೂರು), ಪ್ರತಾಪ್ ಸಿಂಹ (ಮೈಸೂರು), ಇ.ಎಂ.ನಾರಾಯಣಸ್ವಾಮಿ (ಕೋಲಾರ), ಪಿ.ಮುನಿರಾಜು (ಬೆಂಗಳೂರು ಗ್ರಾಮಾಂತರ), ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ (ಬೆಂಗಳೂರು ಗ್ರಾಮಾಂತರ), ರಿಜ್ವಾನ್‌ ಅರ್ಷದ್‌ (ಬೆಂಗಳೂರು ಸೆಂಟ್ರಲ್‌) ಅವರು ನಾಮಪತ್ರ ಸಲ್ಲಿಸಿದರು.ಬುಧವಾರ 22 ಮಂದಿ ಸಲ್ಲಿಸಿರುವ 32 ನಾಮಪತ್ರಗಳು ಸೇರಿ ಇದುವರೆಗೆ 50 ಮಂದಿ ಒಟ್ಟು 83 ನಾಮಪತ್ರಗಳನ್ನು  ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.