ಪ್ರಮುಖ ವಾಯು ನೆಲೆಯಾಗಿ ಕಾರ್ಗಿಲ್
ನವದೆಹಲಿ(ಐಎಎನ್ಎಸ್): ದಶಕದ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಲ್ಲಿನ ವಾಯುನೆಲೆಯಿಂದ ನಡೆಸಿದ ಕಾರ್ಯಾಚರಣೆಯ ನೆನಪಿಗೆ ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭಾರತೀಯ ವಾಯು ಪಡೆ ಹೇಳಿದೆ.
ಕಾರ್ಗಿಲ್ ವಾಯುನೆಲೆಯನ್ನು ಮಧ್ಯಮ ಮತ್ತು ಭಾರಿ ಪ್ರಮಾಣದ ಸಾಗಾಣೆಯ ವಿಮಾನಗಳನ್ನು ನಿರ್ವಹಿಸುವಂತಹ ವಾಯುನೆಲೆಯಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಭಾರತೀಯ ವಾಯು ಪಡೆಯ ಮುಖ್ಯಸ್ಥ ಅನಿಲ್ ಕುಮಾರ್ ಬ್ರೌನ್ ಹೇಳಿದ್ದಾರೆ.
ಈ ವಾಯು ನೆಲೆಯ ರನ್ವೇಯನ್ನು ಆರು ಸಾವಿರ ಅಡಿ ವಿಸ್ತರಿಸುವ ಯೋಜನೆಯೂ ಇದೆ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.