ಬುಧವಾರ, ಜನವರಿ 29, 2020
24 °C

ಪ್ರಯಾಣಕ್ಕೆ ರೂ 5.83 ಕೋಟಿ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ದೇಶದ ಒಳಗಡೆ ಮತ್ತು ವಿದೇಶಕ್ಕೆ ಮಾಡಿದ ಪ್ರಯಾಣಕ್ಕಾಗಿ ಚುನಾವಣಾ ಆಯೋಗ­ವು ₨5.83 ಕೋಟಿ  ವೆಚ್ಚಮಾಡಿದೆ. ಮಾಜಿ ಚುನಾವಣಾ ಆಯುಕ್ತ ಎಸ್‌.­ವೈ. ಖುರೇಷಿ ಅವರು ಅತಿ ಹೆಚ್ಚು ಅಂದರೆ 23 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ.ಆರ್‌ಟಿಐ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸುಭಾಷ್‌ ಅಗರ್‌ವಾಲ್‌ ಕೇಳಿದ ಪ್ರಶ್ನೆಗೆ ಪ್ರತಿ­ಕ್ರಿಯಿ­ಸಿರುವ  ಚುನಾವಣಾ ಆಯೋಗ ಈ ಮಾಹಿತಿಗಳನ್ನು ನೀಡಿದೆ.

ಪ್ರತಿಕ್ರಿಯಿಸಿ (+)