ಶನಿವಾರ, ಜೂನ್ 19, 2021
26 °C

ಪ್ರಯಾಣಿಕರ ಪ್ರತಿಕ್ರಿಯೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರದ ಮಿತಿ ಹೆಚ್ಚಿಸಿ

‘ಈ ಭಾಗದಲ್ಲಿ ಮೆಟ್ರೊ ಸೇವೆ ಆರಂಭವಾಗಿರುವುದು ಸಾರ್ವ­­ಜನಿಕರಿಗೆ ಹೆಚ್ಚು ಅನು­ಕೂಲ­­ವಾಗಿದೆ. ರೈಲಿನಲ್ಲಿ 15 ಕೆ.ಜಿ.­ವರೆಗೆ ಮಾತ್ರ ವಸ್ತುಗಳನ್ನು ತೆಗೆದು­ಕೊಂಡು ಹೋಗಲು ಮಿತಿ ನಿಗದಿ­ಪಡಿಸಲಾಗಿದೆ. ಪ್ರಯಾಣಿಕರು ಇತರ ಸ್ಥಳಗಳಿಗೆ ತೆರಳು­­ವಾಗ, ಮಾರುಕಟ್ಟೆಗೆ ಹೋಗುವಾಗ ಹೆಚ್ಚು ಭಾರ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗ­ಬೇಕಾ­ಗುತ್ತದೆ. ಆದ್ದರಿಂದ ಮಿತಿಯನ್ನು ಹೆಚ್ಚಿಸಬೇಕು.

–ಶ್ರೀಕಾಂತ್‌ ಎಂಜಿನಿಯರ್‌, ಬಸವೇಶ್ವರನಗರಟ್ರಾಫಿಕ್‌ ಕಿರಿಕಿರಿ ಇರುವುದಿಲ್ಲ

ಮೆಟ್ರೊ ಸೇವೆ ಆರಂಭ ಆಗಿ­ರು­­ವುದು ವಾಹನ ದಟ್ಟಣೆ ಇಲ್ಲದೆ ಬೇಗ ತಲುಪ­ಬಹುದು. ಕಾಲೇ­ಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನು­­ಕೂಲ­­ವಾಗು­­ತ್ತದೆ.  ಮಾಲಿನ್ಯವೂ ಇರು­ವುದಿಲ್ಲ.

–ಐಶ್ವರ್ಯ ಎಂಜಿನಿಯರಿಂಗ್‌ ವಿದ್ಯಾರ್ಥಿನಿ, ಮಹಾಲಕ್ಷ್ಮಿ ಲೇಔಟ್‌ಸಮಯ ಉಳಿತಾಯ

ಪೀಣ್ಯದಿಂದ ಸಂಪಿಗೆ ರಸ್ತೆಗೆ 19 ನಿಮಿಷದಲ್ಲಿ ಬಂದಿ­ದ್ದೇವೆ. ಮಹಾಲಕ್ಷ್ಮಿ ಲೇ­ಔಟ್‌, ರಾಜಾಜಿ­ನಗರದಲ್ಲಿ ಸಂಬಂ­ಧಿಕ­ರಿದ್ದಾರೆ. ಈ ಎಲ್ಲ ಕಡೆಗೂ ಸುಲಭವಾಗಿ ಸಂಚ­ರಿಸ­­ಬಹುದಾಗಿದೆ.

–ಆರತಿ ಸಂತೋಷ್‌ ಗೃಹಿಣಿ, ಲಗ್ಗೆರೆಕಾಮಗಾರಿ ಪೂರ್ಣಗೊಳ್ಳಬೇಕು

ನಗರದ ಇನ್ನೂ ಹಲವು ಭಾಗ­ಗಳಲ್ಲಿ ಮೆಟ್ರೊ ಕಾಮ­ಗಾರಿ ಪ್ರಗತಿಯಲ್ಲಿದೆ. ಎಲ್ಲ ಕಡೆಗೂ ಕಾಮಗಾರಿ ಪೂರ್ಣ­ಗೊಂಡರೆ ಜನರಿಗೆ ಹೆಚ್ಚು ಅನು­ಕೂಲ­ವಾಗುತ್ತದೆ. ಈ ಸೇವೆ­ಯಿಂದಾಗಿ ಹೆಚ್ಚು ಸಮಯ ಉಳಿ­ತಾಯವಾಗುತ್ತದೆ.

–ನಂದಿನಿ ಸಾಫ್ಟ್‌ವೇರ್‌ ಎಂಜಿನಿಯರ್‌, ಯಲಹಂಕಹುಬ್ಬಳ್ಳಿಯಿಂದ ಬಂದೆ

ಎಂ.ಜಿ.ರಸ್ತೆಯಲ್ಲಿ ಮೆಟ್ರೊ ಸೇವೆ ಆರಂಭವಾದಾಗ ಬರಲು ಸಾಧ್ಯವಾಗಿರಲಿಲ್ಲ. ವಿದೇಶ­ದಲ್ಲಿ ಇಂತಹ ಸೇವೆ ಇರು­ವು­ದನ್ನು ನೋಡಿದ್ದೇವೆ. ಈ ಸೇವೆ ಸಿಗು­­ತ್ತಿರುವುದು ಖುಷಿ ತಂದಿದೆ. ಹುಬ್ಬಳ್ಳಿಯಿಂದ ಮೆಟ್ರೊ ನೋಡಲು ಬಂದಿದ್ದೇನೆ.

–ಕೃಷ್ಣ ಖಾಸಗಿ ಉದ್ಯೋಗಿ.ಸುಲಭವಾಗಿ ತಲುಪಬಹುದು

ನಗರದಲ್ಲಿ ಮೊದಲು ಮೆಟ್ರೊ ಸೇವೆ ಆರಂಭವಾದಾಗ ಪ್ರಯಾಣಿಸಿದ್ದೆ. ಈ ಸೇವೆಯಿಂದಾಗಿ ನಗರದ ವಿವಿಧ ಸ್ಥಳಗಳಿಗೆ ಬೇಗ ತಲುಪಬಹುದಾಗಿದೆ. ಮೆಟ್ರೊ ಪ್ರಯಾಣ ದರವನ್ನು ಇನ್ನಷ್ಟು ಕಡಿಮೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ

–ಶ್ರೀನಿವಾಸ್‌ ಉಪನ್ಯಾಸಕ, ಬಸವೇಶ್ವರನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.