ಶ್ರೀರಂಗಪಟ್ಟಣ: ನೀರಿನ ಅಭಾವ, ರಸಗೊಬ್ಬರ ಬೆಲೆ ಏರಿಕೆ, ಕೂಲಿ ಆಳುಗಳ ಕೊರತೆ ಕಾರಣ ಮುಂದಿಟ್ಟು ರೈತರು ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ. ಆದರೆ, ಯುವ ರೈತರೊಬ್ಬರು ಕಬ್ಬು ಬೆಳೆಯಲ್ಲಿ ಅಂತರ ಬೆಳೆಯಾಗಿ 3 ಬಗೆಯ ತರಕಾರಿಗಳನ್ನು ಬೆಳೆಯುವುದರ ಜತೆಗೆ ಕಬ್ಬಿನಲ್ಲಿ 19ನೇ ಕೂಳೆ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

ಆ ಯಶಸ್ವಿ ರೈತನ ಹೆಸರು ಕಿರಣ್. ನೆಲೆಮನೆ ಗ್ರಾಮದವರು. ಕಬ್ಬು ಬೆಳೆ ನಡುವೆ ಟೊಮೆಟೊ, ಬೆಂಡೆ ಹಾಗೂ ಅವರೆ ಬೆಳೆದು ಫಲ ಉಣ್ಣುತ್ತಿದ್ದಾರೆ. ಎರಡನೇ ಕೂಳೆ ಕಬ್ಬಿನ ಜತೆ ಈ ಕಾಯಿಪಲ್ಯೆಗಳನ್ನು ಬೆಳೆದಿದ್ದಾರೆ.

ಬೆಂಡೆ ಬೆಳೆ ಎದೆ ಎತ್ತರ ಬೆಳೆದಿದ್ದು, ಕೊಯ್ಲಿಗೆ ಬಂದಿದೆ. `1389~ ತಳಿಯ ಟೊಮೆಟೊ ಹಣ್ಣು ಕೊಡಲು ಶುರುಮಾಡಿದೆ. ಬೆಂಗಳೂರಿನ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಅಭಿವೃದ್ಧಿಪಡಿಸಿರುವ `ಹೆಬ್ಬಾಳ್-4~ ತಳಿಯ ಅವರೆ ಜೊಂಪೆ ಜೊಂಪೆಯಾಗಿ ಗೊನೆ ಬಿಟ್ಟಿದೆ.

ಒಂದು ಎಕರೆ ಜಮೀನಿನಲ್ಲಿ ಬೆಳೆದಿರುವ ಕಬ್ಬು ಪೈರಿನ ನಡುವೆ 4 ಸಾವಿರ ಟೊಮೆಟೊ ಸಸಿ, ಐದೂವರೆ ಕೆ.ಜಿ ಬೆಂಡೆ ಹಾಗೂ ಒಂದು ಕೆ.ಜಿ. ಅವರೆ ಬೀಜ ನಾಟಿ ಮಾಡಿದ್ದಾರೆ. ಕಬ್ಬು ಬೆಳೆಯ ಜತೆ ಇಷ್ಟೆಲ್ಲ ಬೆಳೆ ಬೆಳೆಯಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.

ತರಕಾರಿ ಬೆಳೆಗೆ ಕೊಟ್ಟಿಗೆ ಗೊಬ್ಬರ, ಅಲ್ಪ ಪ್ರಮಾಣದಲ್ಲಿ ರಸಗೊಬ್ಬರ ಹಾಕಿರುವುದು ಬಿಟ್ಟರೆ ಕಬ್ಬು ಬೆಳೆಗೆ ಪ್ರತ್ಯೇಕವಾಗಿ ಯಾವುದೇ ಗೊಬ್ಬರ ಕೊಟ್ಟಿಲ್ಲ. ಆದರೂ ಕಬ್ಬು ಹುಲುಸಾಗಿ ಬೆಳೆಯುತ್ತಿದೆ. ಈಗಾಗಲೇ ಬೆಂಡೆ ಬೆಳೆ ಹಣ ತರುತ್ತಿದ್ದರೆ, ಟೊಮೆಟೊ ಹಾಗೂ ಅವರೆ ಬೆಳೆ ವಾರ ಒಪ್ಪತ್ತಿನಲ್ಲಿ ಫಲ ಕೊಡುವ ಹಂತದಲ್ಲಿವೆ. ಟೊಮೆಟೊದಿಂದ ರೂ.35 ಸಾವಿರ, ಬೆಂಡೆಯಿಂದ ರೂ.30 ಸಾವಿರ ಹಾಗೂ ಅವರೆ ಫಸಲಿನಿಂದ ರೂ.10 ಸಾವಿರ ಅದಾಯ ನಿರೀಕ್ಷಿಸಿದ್ದಾರೆ.

19ನೇ ಕೂಳೆ ಕಬ್ಬು: ಕಬ್ಬು ಕೂಳೆಯನ್ನು ಮೇಲಿಂದ ಮೇಲೆ ಕಿತ್ತು ಹೊಸದಾಗಿ ನಾಟಿ ಮಾಡುವುದರಿಂದ ಖರ್ಚು ಮತ್ತು ಶ್ರಮ ಹೆಚ್ಚು ವ್ಯಯವಾಗುತ್ತದೆ. ಇದನ್ನು ಅರಿತ ಕಿರಣ್, 1993ರಲ್ಲಿ ನಾಟಿ ಮಾಡಿದ ಕಬ್ಬು ಬೆಳೆ ಕೀಳದೆ ಉಳಿಸಿಕೊಂಡಿದ್ದಾರೆ.

18ನೇ ಕೂಳೆಯಲ್ಲಿ ಎಕರೆಗೆ 61ಟನ್ ಕಬ್ಬು ಬೆಳೆದು ತೋರಿಸಿದ್ದಾರೆ. ಈಗ ಭೂಮಿಯ 19ನೇ ಕೂಳೆ ಕಬ್ಬು ಕೂಡ ಚೆನ್ನಾಗಿದೆ. ಕಳೆದ ವರ್ಷದಷ್ಟೇ ಇಳುವರಿ ಪಡೆಯುವ ವಿಶ್ವಾಸ ಅವರದು.

`ಬೇಸಾಯ ನಷ್ಟದ ಕಸುಬಲ್ಲ; ಲಾಭದ ಕಸುಬು ಎಂಬುದು ನಿಜ ಆಗಬೇಕಾದರೆ ರೈತರು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು. ಅಧಿಕ ಇಳುವರಿ ಕೊಡುವ ಬೆಳೆ ಬೆಳೆಯಬೇಕು. ಸಕಾಲಕ್ಕೆ ನೀರು, ಗೊಬ್ಬರ ಕೊಡುವುದರ ಜತೆಗೆ ಅಗತೆ, ಮುರಿ ಇತರ ಚಟುವಟಿಕೆಗಳನ್ನು ನಿಗದಿತ ಕಾಲದಲ್ಲಿ ಮಾಡಿ ಮುಗಿಸಬೇಕು. ಹಾಗಾದರೆ ಎಲ್ಲ ಬೆಳೆಗಳೂ ಚೆನ್ನಾಗಿ ಬೆಳೆಯುತ್ತವೆ; ಹಣ ತರುತ್ತವೆ~ ಎನ್ನುತ್ತಾರೆ ಕಿರಣ್. ಕಿರಣ್ ಅವರ ಮೊಬೈಲ್ ಸಂಖ್ಯೆ 92425-04358.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.