ಶುಕ್ರವಾರ, ಮೇ 14, 2021
29 °C

ಪ್ರವಾಸಿ ಮಾರ್ಗದರ್ಶಕರಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿರುವ ಛತ್ತೀಸ್‌ಗಡದ ಪ್ರವಾಸೋದ್ಯಮ ಮಂಡಳಿಯು ಬೆಂಗಳೂರು ಸೇರಿದಂತೆ ಒಂಬತ್ತು ಪಟ್ಟಣಗಳಲ್ಲಿ ಟ್ರಾವೆಲ್ ಏಜೆಂಟ್‌ಗಳಿಗೆ ತರಬೇತಿ ನೀಡಲು ಕೌನಿ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಂಡಿದೆ.ಛತ್ತೀಸ್‌ಗಡದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿದುಕೊಂಡು ಅಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೌನಿ ಅಕಾಡೆಮಿ ಆಯ್ದ ಪಟ್ಟಣಗಳ ಪ್ರವಾಸಿ ಏಜೆಂಟರಿಗೆ ಸೂಕ್ತ ತರಬೇತಿ ನೀಡಲಿದೆ. ಮೊದಲ ಹಂತದಲ್ಲಿ ಬೆಂಗಳೂರು, ದೆಹಲಿ, ರಾಯಪುರ, ಕೋಲ್ಕತ್ತಾ, ಮುಂಬೈ, ವಿಶಾಖಪಟ್ಟಣ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ ಎಂದು ಛತ್ತೀಸ್‌ಗಡ ಪ್ರವಾಸೋದ್ಯಮ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.ಸುಂದರ ಜಲಪಾತಗಳು, ಮನ ಸೆಳೆಯುವ ವನ್ಯಜೀವಿ ತಾಣಗಳು, ಬೃಹತ್ ದೇವಾಲಯಗಳು, ಗುಹೆಗಳು ಸೇರಿದಂತೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಖ್ಯಾತಿ ಛತ್ತೀಸ್‌ಗಡ ರಾಜ್ಯದ್ದು. ಆ ರಾಜ್ಯದ ಪ್ರವಾಸಿ ಸ್ಥಳಗಳ ಕುರಿತು ಪ್ರವಾಸಿ ಏಜೆಂಟರಿಗೆ ಅರಿವು ಮೂಡಿಸಿ ಪ್ರವಾಸೋದ್ಯಮವನ್ನು ಬೆಳೆಸುವುದು ಮಂಡಳಿಯ ಉದ್ದೇಶ.ಕೌನಿ ಅಕಾಡೆಮಿ ಕೇಂದ್ರಗಳಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.