ಸೋಮವಾರ, ಮೇ 17, 2021
28 °C

ಪ್ರವಾಹ: ನೆರವಿಗೆ ಅಮೆರಿಕ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಉತ್ತರಾಖಂಡ ಮತ್ತಿತರ ಕಡೆ ಪ್ರವಾಹದಿಂದ ಉಂಟಾಗಿರುವ ಸಂಕಷ್ಟಮಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡಲು ಸಿದ್ಧವಿರುವುದಾಗಿ ಅಮೆರಿಕ ತಿಳಿಸಿದೆ.ಹೆಲಿಪ್ಯಾಡ್‌ಗಳ ನಿರ್ಮಾಣ

ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ನಡೆಸಲಾಗುತ್ತಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಇನ್ನಷ್ಟು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಗಮನ ನೀಡಲಾಗುತ್ತಿದೆ ಎಂದು ಐಟಿಬಿಪಿ ಮುಖ್ಯಸ್ಥ ಅಜಯ್ ಛಡ್ಡಾ ಹೇಳಿದ್ದಾರೆ.ಹೆಲಿಕಾಪ್ಟರ್ ಪತನ: ಪೈಲಟ್‌ಗೆ ಗಾಯ

ಡೆಹ್ರಾಡೂನ್ (ಪಿಟಿಐ): ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಗೌರಿಕುಂಡ್ ಜಿಲ್ಲೆಯಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಪೈಲಟ್ ಗಾಯಗೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.ತಿಹಾರ್ ಕೈದಿಗಳಿಂದ ನೆರವು

ನವದೆಹಲಿ (ಪಿಟಿಐ): ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ತಿಹಾರ್ ಜೈಲಿನ ಕೈದಿಗಳು ನೆರವಿನ ಹಸ್ತ  ಚಾಚಲಿದ್ದಾರೆ.

ಜೈಲಿನ ಸಿಬ್ಬಂದಿಯ ಜೊತೆಗೆ ಕೆಲವು ಕೈದಿಗಳು ಕೂಡ ಸೇರಿ ್ಙ 13 ಲಕ್ಷವನ್ನು ಪರಿಹಾರ ಕಾರ್ಯಕ್ಕಾಗಿ ನೀಡಲಿದ್ದಾರೆ.3 ದಿನದಲ್ಲಿ ಟವರ್-ಬಿಎಸ್‌ಎನ್‌ಎಲ್

ನವದೆಹಲಿ (ಪಿಟಿಐ): ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಸಂತ್ರಸ್ತರು ಸಿಲುಕಿಕೊಂಡಿದ್ದ ಪ್ರಮುಖ ಸ್ಥಳಗಳಲ್ಲಿ ಮೂರು ದಿನಗಳ ಒಳಗಾಗಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದಾಗಿ ಬಿಎಸ್‌ಎನ್‌ಎಲ್ ಹೇಳಿದೆ.`ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'

ನವದೆಹಲಿ (ಪಿಟಿಐ): ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಲ್ಲಿ ಮಳೆ ಸೃಷ್ಟಿಸಿರುವ ಅನಾಹುತವನ್ನು `ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಸರ್ವಾನುಮತದಿಂದ ಶಿಫಾರಸು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.