ಸೋಮವಾರ, ಮೇ 10, 2021
28 °C

ಪ್ರವಾಹ: ಹೆಚ್ಚಿನ ನೆರವು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ನೊ(ಪಿಟಿಐ): ಮಹಾಮಳೆಯ ಅಬ್ಬರಕ್ಕೆ ಉತ್ತರಖಂಡ, ಡೆಹ್ರಾಡೂನ್‌ನ ಜನರ ಬದುಕು ನಾಶವಾಗಿದೆ. ಇದನ್ನು  ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ, ಕೇಂದ್ರ ಸರ್ಕಾರ ಅಲ್ಲಿನ ಜನ ಜೀವನ ಪುನರ್ ನಿರ್ಮಿಸಲು ಹೆಚ್ಚಿನ ನೆರವು ಒದಗಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಗುರುವಾರ ಒತ್ತಾಯಿಸಿದ್ದಾರೆ.

ಇಲ್ಲಿ ಉಂಟಾಗಿರುವ ಹಾನಿ ಕೇವಲ ಆಸ್ತಿ, ಸಂಪತ್ತಿಗೆ ಸಂಬಂಧಿಸಿದ್ದಲ್ಲ. ಬದಲಿಗೆ, ರಾಷ್ಟ್ರದ ಒಂದು ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವೇ ನಾಶವಾದಂತಾಗಿದೆ. ಹಾಗಾಗಿ, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಡಿ ಎಲ್ಲ ಬಗೆಯ ನೆರವು ಒದಗಿಸಬೇಕು ಎಂದು ಮಾಯಾವತಿ ಆಗ್ರಹಿಸಿದ್ದಾರೆ.

ಸಂತ್ರಸ್ತರಿಗೆ 50 ಲಕ್ಷ ನೆರವು ನೀಡಿದ ಶತ್ರುಘ್ನ ಸಿನ್ಹಾ

ಪಟ್ನಾ(ಪಿಟಿಐ):
ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಂತ್ರಸ್ತರಾದ ಉತ್ತರಾಖಂಡ ಹಾಗೂ ಇತರ ಪ್ರದೇಶದ ಜನರಿಗೆ ನಟ ಹಾಗೂ ರಾಜಕೀಯ ಮುಖಂಡ ಶತ್ರುಘ್ನ ಸಿನ್ಹಾ ರೂ 50 ಲಕ್ಷ ನೆರವು ನೀಡಿದ್ದಾರೆ.

ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ರೂ 1,000 ಕೋಟಿ ನೆರವು ಘೋಷಿಸಿರುವುದನ್ನು ಸ್ವಾಗತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.