ಕೋಲ್ಕತ್ತ (ಪಿಟಿಐ):  ರಣಜಿ ಟ್ರೋಫಿ ಗೆದ್ದುಕೊಂಡಿರುವ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾನುವಾರ ರೈಲ್ವೇಸ್ ಎದುರು ಪೈಪೋಟಿ ನಡೆಸಲಿದ್ದು, ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟಿದೆ.

ಈ ಸಲದ ದೇಶಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ರಣಜಿ ಮತ್ತು ಇರಾನಿ ಕಪ್ನಲ್ಲಿ ಚಾಂಪಿಯನ್ ಆಗಿದೆ. ಆದರೆ, ಇದುವರೆಗೂ ಒಮ್ಮೆಯೂ ವಿಜಯ ಹಜಾರೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಕೊರತೆ ನೀಗಿಸಲು ಈಗ ಅತ್ಯುತ್ತಮ ಅವಕಾಶ ಲಭಿಸಿದೆ. ಜೊತೆಗೆ ದೇಶಿಯ ಋತುವಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲೂ ವೇದಿಕೆ ಸಿಕ್ಕಿದೆ.

ಕ್ವಾರ್ಟರ್ ಫೈನಲ್ನಲ್ಲಿ ಗುಜರಾತ್ ಮೇಲೂ ಮತ್ತು ಸೆಮಿಫೈನಲ್ನಲ್ಲಿ ಜಾರ್ಖಂಡ್ ವಿರುದ್ಧ ಗೆಲುವು ಪಡೆದಿರುವ ಕರ್ನಾಟಕ ಅದಮ್ಯ ವಿಶ್ವಾಸದಲ್ಲಿದೆ. ಅದರಲ್ಲೂ ಅನುಭವಿ ರಾಬಿನ್ ಉತ್ತಪ್ಪ ಹರಿಸುತ್ತಿರುವ ರನ್ ಹೊಳೆ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಉತ್ತಪ್ಪ 88.00 ಸರಾಸರಿಯಲ್ಲಿ ಮೂರು ಶತಕ ಸೇರಿದಂತೆ ಒಟ್ಟು 528 ರನ್ ಕಲೆ ಹಾಕಿದ್ದಾರೆ. ಮಯಂಕ್ ಅಗರವಾಲ್ ಹಾಗೂ ಕರುಣ್ ನಾಯರ್ ಅವರಿಂದಲೂ ಉತ್ತಮ ಪ್ರದರ್ಶನ ಮೂಡಿಬಂದಿದೆ.

ವಿನಯ್ ಪ್ರಮುಖ ಅಸ್ತ್ರ: ವೇಗಿ ವಿನಯ್ ಕುಮಾರ್ ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿದ್ದಾರೆ. ಹಿಂದಿನ ಏಳು ಪಂದ್ಯಗಳಿಂದ 27 ವಿಕೆಟ್ ಉರುಳಿಸಿದ್ದೇ ಇದಕ್ಕೆ ಸಾಕ್ಷಿ. ಮೂರು ಸಲ ಐದು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಜೊತೆಗೆ ಹಿಂದಿನ 11 ಪಂದ್ಯಗಳಿಂದ ವಿನಯ್ ಪಡೆದಿರುವುದು ಒಟ್ಟು 54 ವಿಕೆಟ್!
ಫೈನಲ್ ಪಂದ್ಯ ನಡೆಯಲಿರುವ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬೌಲರ್ ಸ್ನೇಹಿ ಆಗಿರುವ ಕಾರಣ ವಿನಯ್ ಪಾತ್ರ ಬಹುಮುಖ್ಯವಾಗಿದೆ. ಜೊತೆಗೆ ಅಭಿಮನ್ಯು ಮಿಥುನ್, ಎಚ್.ಎಸ್. ಶರತ್ ಕೂಡಾ ಪ್ರಮುಖ ಶಕ್ತಿ ಎನಿಸಿದ್ದಾರೆ

ಎರಡನೇ ಪ್ರಶಸ್ತಿಯತ್ತ ರೈಲ್ವೇಸ್ ಚಿತ್ತ: ಏಳು ವರ್ಷಗಳ ಹಿಂದೆ ವಿಜಯ ಹಜಾರೆ ಟ್ರೋಫಿ ಗೆದ್ದಿರುವ ರೈಲ್ವೇಸ್ ತಂಡ ಎರಡನೇ ಪ್ರಶಸ್ತಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ರೈಲ್ವೇಸ್ ತಂಡ ಸೆಮಿಫೈನಲ್ನಲ್ಲಿ ಬಂಗಾಳವನ್ನು 5 ವಿಕೆಟ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ರೈಲ್ವೇಸ್ ಪ್ರೀ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳನ್ನು ಈಡನ್ ಗಾರ್ಡನ್ಸ್್ ಕ್ರೀಡಾಂಗಣದಲ್ಲಿ ಆಡಿದೆ. ಕರ್ನಾಟಕ ಹಿಂದಿನ ಎರಡೂ ಪಂದ್ಯಗಳನ್ನು ಜಾಧವಪುರಿ ವಿಶ್ವವಿದ್ಯಾಲಯದ ಅಂಗಳದಲ್ಲಿ ಆಡಿತ್ತು. ಆದ್ದರಿಂದ ವಿನಯ್ ಬಳಗಕ್ಕೆ ಇದು ಹೊಸ ಅಂಗಳ ಎನಿಸಿದೆ. ಜೊತೆಗೆ ಬ್ಯಾಟ್ಸ್ಮನ್ಗಳು ಇಲ್ಲಿನ ಪಿಚ್ಗೆ ಹೊಂದಿಕೊಳ್ಳಬೇಕಾದ ಸವಾಲಿದೆ.

ಬೌಲಿಂಗ್ ವಿಭಾಗದಲ್ಲಿ ರೈಲ್ವೇಸ್ ಬಲಿಷ್ಠವಾಗಿದೆ. ಅನುರೀತ್ ಸಿಂಗ್, ಕೃಷ್ಣಕಾಂತ್ ಉಪಾಧ್ಯಾಯ ಮತ್ತು ಚಂದ್ರಪಾಲ್ ಸೈನಿ ಅಪಾಯಕಾರಿ ಬೌಲರ್ಗಳು.
ಪಂದ್ಯ ಆರಂಭ: ಬೆಳಿಗ್ಗೆ 8.45
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.