ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ಎಐಇಇಇ) ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಸೋರಿಕೆ ಆಗುವ ಮೂಲಕ ಈ ಪರೀಕ್ಷೆಯ ಪಾವಿತ್ರ್ಯವೇ ಹಾಳಾದಂತಾಗಿದೆ. ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಈ ಪ್ರವೇಶ ಪರೀಕ್ಷೆ ಇದುವರೆಗೆ ಕಟ್ಟುನ್ಟಿಗಿಯೇ ನಡೆದುಕೊಂಡು ಬಂದಿತ್ತು. ಪ್ರಶ್ನೆ ಪತ್ರಿಕೆ ಬಹಿರಂಗಗೊಳ್ಳುವ ಮತ್ತು ಇತರೆ ಯಾವುದೇ ಗೊಂದಲಕ್ಕೆ ಅವಕಾಶ ಇರಲಿಲ್ಲ. ಅದಕ್ಕಾಗಿ ಈ ಪರೀಕ್ಷೆಯು ವಿದ್ಯಾರ್ಥಿಗಳಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿತ್ತು. ಆದರೆ ಆ ವಿಶ್ವಾಸಕ್ಕೆ ಈಗ ಧಕ್ಕೆ ಬಂದಿದೆ.

ಲಖನೌ ಮತ್ತು ಕಾನ್ಪುರದಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ. ಸೋರಿಕೆ ಆಗಿರುವ ಪ್ರಶ್ನೆ ಪತ್ರಿಕೆ ಆರು ಲಕ್ಷ ರೂಪಾಯಿಗೆ ಮಾರಾಟವಾಗಿದೆ ಎನ್ನುವುದು ಅಚ್ಚರಿ.

ಬಹಿರಂಗಗೊಂಡ ಪ್ರಶ್ನೆ ಪತ್ರಿಕೆ ಅಸಲಿಯದಾದ್ದರಿಂದ ಮೂರು ಗಂಟೆಗಳ ನಂತರ ಬೇರೊಂದು ಪ್ರಶ್ನೆ ಪತ್ರಿಕೆಯನ್ನು ನೀಡುವ ಮೂಲಕ ಕೊನೆಗೂ ಪರೀಕ್ಷೆ ನಡೆಸಿರುವುದು ಸಮಾಧಾನಕರ ಸಂಗತಿ.

ಆದರೆ ಇಡೀ ದೇಶದಾದ್ಯಂತ ಉಂಟಾದ ಈ ಗೊಂದಲದಿಂದ ಸಿಬಿಎಸ್ಸಿ ನಡೆಸುವ ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಇನ್ನು ಮುಂದೆ ಅನುಮಾನದಿಂದ ನೋಡುವಂತಾದ ಬೆಳವಣಿಗೆ ವಿಪರ್ಯಾಸ.

ಈಗಿನ ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆಯನ್ನು ಸಮರ್ಥವಾಗಿ ಬಳಸಿಕೊಂಡರೆ ಪರೀಕ್ಷೆ ಇನ್ನು ಅರ್ಧಗಂಟೆ ಇದೆ ಎನ್ನುವಾಗಲೇ ಆನ್ಲೈನ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ದೇಶದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲು ಸಾಧ್ಯ ಇದೆ. ಈ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಳ್ಳುವುದನ್ನು ತಡೆಯಲು ಯೋಚಿಸಬೇಕಾಗಿದೆ.

ಎಐಇಇಇ ಮೂಲಕ ದೇಶದ ಪ್ರತಿಷ್ಠಿತ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಐಐಐಟಿಗಳಿಗೆ ಪ್ರವೇಶ ಪಡೆಯಲಾಗುತ್ತದೆ. ವೃತ್ತಿ ಶಿಕ್ಷಣದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ.

ವ್ಯಾಸಂಗದಲ್ಲಿ ಶ್ರದ್ಧೆ ಮತ್ತು ಶಿಸ್ತು ಬೆಳೆಸಿಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯ. ಅಷ್ಟರಮಟ್ಟಿಗೆ ಈ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಕ್ಕಿನ ಕಡಲೆ. ಇಷ್ಟು ಕಷ್ಟದ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿ ತಯಾರಾಗಿರುತ್ತಾರೆ.

ಹಾಗಿರುವಾಗ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡರೆ ವಿದ್ಯಾರ್ಥಿಗಳ ಭವಿಷ್ಯದ ಕನಸಿನ ಗೋಪುರ ಕುಸಿದು ಹೋಗುತ್ತದೆ. ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡ ಸಂಬಂಧ ನಾಲ್ವರನ್ನು ಬಂಧಿಸಿರುವುದು ಸರಿಯಷ್ಟೆ.

ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿರುವ ಮೂಲವನ್ನು ಹುಡುಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗದಿರುವ ಕಾರಣ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಳ್ಳುವುದು ನಿರಂತರವಾಗಿ ನಡೆಯಲು ಅವಕಾಶ ನೀಡಿದಂತಾಗುತ್ತದೆ. ಇನ್ನು ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಸಿಬಿಎಸ್ಇ ಕ್ರಮಕೈಗೊಳ್ಳುವ ಮೂಲಕ ಪರೀಕ್ಷಾ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.