ಬುಧವಾರ, ಮಾರ್ಚ್ 3, 2021
23 °C

ಪ್ರೀತಿ ವಿಶ್ವಾಸದಿಂದ ಜೀವನ ನಡೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿ ವಿಶ್ವಾಸದಿಂದ ಜೀವನ ನಡೆಸಲು ಸಲಹೆ

ಅಕ್ಕಿಆಲೂರ: ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸತಿ–ಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ನಡೆಸಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ ದೇಶದ ನಾಗರಿಕತೆಯ ಮೌಲ್ಯವನ್ನು ಹೆಚ್ಚಿಸುವ ಮನೋಭಾವನೆಯನ್ನು ಅವರಲ್ಲಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ್‌ ಹಾದಿಮನಿ ಕಿವಿಮಾತು ಹೇಳಿದರು.ಇಲ್ಲಿಗೆ ಸಮೀಪವಿರುವ ಸುಕ್ಷೇತ್ರ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಮಠದಲ್ಲಿ ಇತ್ತೀಚೆಗೆ ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ  ಮಾತನಾಡಿದರು. ಅನವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚು ಸಹಕಾರಿ ಎನಿಸಿವೆ. ಸಾಮರಸ್ಯದ ಜೀವನಕ್ಕೂ ಇವು ಉತ್ತಮ ಮಾರ್ಗಗಳೆನಿಸಿವೆ ಎಂದರು.ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಉಮೇಶ ತಳವಾರ ಮಾತನಾಡಿ, ಒಣ ಪ್ರತಿಷ್ಠೆಗೆ ಅದ್ದೂರಿ ವಿವಾಹ ಕಾರ್ಯಕ್ರಮ ನಡೆಸುವ ಖಯಾಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಪ್ರತಿಷ್ಠೆಯನ್ನು ಬದಿಗಿಟ್ಟು ಸಾಮಾಜಿಕ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ವಿವಾಹ ನಡೆಸುವಂತಹ ಮನೋಭಾವ ಸಂಘಟಕರಲ್ಲಿ ಮೂಡುವ ಅಗತ್ಯವಿದೆ ಎಂದು ನುಡಿದರು.ಸಾಮೂಹಿಕ ವಿವಾಹದಲ್ಲಿ 12 ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಮುಖಂಡರಾದ ಶಿವಲಿಂಗಪ್ಪ ತಲ್ಲೂರ, ಚಿದಾನಂದ ಬಾರ್ಕಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಭಾಷ್‌ ಗಡ್ಡದವರ, ಪಿಡಿಒ ಪರಶುರಾಮ್‌ ಅಂಬಿಗೇರ, ಜಯಣ್ಣ ದ್ಯಾವಣ್ಣನವರ, ಜಯಣ್ಣ ಹೊನಗೊಂಡ್ರ, ಸುಭಾಷ್‌ ಸಮ್ಮಸಗಿ, ನಾಗಪ್ಪ ಅಂಬಿಗೇರ, ಪರಶುರಾಮ್‌ ಹಿರೇಬಾಸೂರ, ನಿಂಬಣ್ಣ ನಿಂಬಣ್ಣನವರ, ಶಂಕರಗೌಡ ದಳವಾಯಿ, ದೇವೀಂದ್ರಪ್ಪ ಕುಮ್ಮೂರ, ಬಸವಂತಪ್ಪ ವಾಸನ, ಚಂದ್ರು ಈಳಗೇರ, ಚಂದ್ರು ಮಲ್ಲಿಗಾರ, ಶೇಖನಗೌಡ ದಳವಾಯಿ, ಗುತ್ತೆಪ್ಪ ಅಂಬಿಗೇರ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.