ಮೂಡುಬಿದಿರೆ:  ವ್ಯಾಪಾರ ನಡೆಸುತ್ತಿರುವ ತನ್ನ ಅಂಗಡಿಗೆ `ನ್ಯೂ ಅಮ್ಮೋ ಆರ್ಟ್ಸ್' ಎಂದು ಹೆಸರಿಟ್ಟು ಕೊಂಡಿದ್ದರೂ ಆತನ ಅಂತಃಕರಣ ಮಾತ್ರ ಹೆಸರಿಗೆ ವಿರುದ್ಧ ಎಂಬಂತೆ ಕ್ರೂರವಾಗಿತ್ತು. ಮದುವೆಯಾಗಲು ಮುಂದೆ ಬಂದ ಹೆಣ್ಣನ್ನು ಹಸಮನೆಯೇರಿಸಿ ಬಾಳ ಸಂಗಾತಿಯನ್ನಾಗಿ ಮಾಡುವ ಬದಲು ಆತ ಮಸಣ ಸೇರುವಂತೆ ಮಾಡಿದ.

ಕಾರ್ಕಳ ರೆಂಜಾಳದ ಬಡಕುಟುಂಬದ ಪೂರ್ಣಿಮಾ (23) ಅವರ ಶವ ಭಾನುವಾರ ಹೊಸಬೆಟ್ಟು ಶೇಡಿಗುರಿ ಎಂಬಲ್ಲಿ ಮಣ್ಣಿನಡಿಯಲ್ಲಿ ಪತ್ತೆಯಾದಾಗ ಈ ಕೊಲೆಯ ಪ್ರಧಾನ ಆರೋಪಿ ಮೇಕಪ್ ಕಲಾವಿದ ಮೂಡುಬಿದಿರೆಯ ಪ್ರಭಾಕರ ಶೆಟ್ಟಿ (32) ಎಂಬಾತನ ಕರಾಳ ಮುಖವೂ ಬಯಲಾಯಿತು.

ನಾಟಕ, ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸು ವವರಿಗೆ ಮುಖಕ್ಕೆ ಬಣ್ಣ ಹಚ್ಚಿ, ಅವರ ಪಾತ್ರಕ್ಕೆ ತಕ್ಕ ಬಟ್ಟೆ ಬರೆಗಳನ್ನು ತೊಡಿಸಿ ಒಳ್ಳೆಯ ಮೇಕಪ್ ಕಲಾವಿದನಾಗಿ ಪ್ರಸಿದ್ಧಿ ಪಡೆದಿದ್ದ. ರೆಂಜಾಳದಲ್ಲಿ ನಾಟಕಕ್ಕೆ ಮೇಕಪ್ಗೆಂದು ಹೋಗಿದ್ದ ಪ್ರಭಾಕರನಿಗೆ ಪೂರ್ಣಿಮಾಳ ಪರಿಚಯವಾಗಿ ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಒಂದು ವರ್ಷದಿಂದ ಆಕೆ ಜತೆ ಪ್ರೀತಿಯ ನಾಟಕವಾಡಿದ ಪ್ರಭಾಕರನಿಗೆ ಆಕೆಯನ್ನು ಬಾಳಸಂಗಾತಿಯನ್ನಾಗಿಸಲು ಇಷ್ಟವಿರಲಿಲ್ಲ. ಆದರೆ ನನ್ನನ್ನು ಮದುವೆಯಾಗಬೇಕು ಎಂದು ಪೂರ್ಣಿಮಾ ಮಾತ್ರ ಹಠಕ್ಕೆ ಬಿದ್ದಾಗ ಪ್ರಭಾಕರನಿಗೆ ತೋಚಿದ್ದು ಆಕೆಯನ್ನು ಈ ಲೋಕದಿಂದ ದೂರ ಮಾಡುವ ಕೆಟ್ಟ ಆಲೋಚನೆ. ಅದಕ್ಕೆ ಆತ ಇದೇ 3ರ ದಿನ ನಿಗದಿಪಡಿಸಿದ.

ಎಲ್ಲಾದರೂ ದೇವಸ್ಥಾನದಲ್ಲಿ ಮದುವೆ ಯಾಗೋಣ ಮನೆ ಬಿಟ್ಟು ಬಾ ಎಂದು ಪ್ರಿಯಕರನ ಮಾತು ನಂಬಿ ಪೂರ್ಣಿಮಾ ರೆಂಜಾಳದ ಮನೆ ಬಿಟ್ಟು ನೇರವಾಗಿ ಮೂಡು ಬಿದಿರೆಯ ಪ್ರಿಯಕರನ ಅಂಗಡಿಗೆ ಬಂದಳು. ಬರುವಾಗ ತನ್ನ ಗೆಳತಿಯಿಂದ ಸ್ವಲ್ಪ ಬಂಗಾರವನ್ನು ತಂದಿದ್ದಳು. ಮಧ್ಯಾಹ್ನ ಇವರಿಬ್ಬರು ಹೊಟೇಲೊಂದರಲ್ಲಿ ಊಟ ಮಾಡಿ ಹೋಗಿದ್ದಾರೆಂದು ಹೇಳಲಾಗಿದೆ. ಮಧ್ಯಾಹ್ನ ನಂತರ ಮತ್ತೆ ಈ ಜೋಡಿ ಕಚೇರಿಗೆ ಬಂದಿದ್ದಾರೆ.

ಮಾತುಕತೆ ವೇಳೆ ಪ್ರಭಾಕರ ಪೂರ್ಣಿಮಾಳ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಪೂರ್ಣಿಮಾ ಪೊಲೀಸರಿಗೆ ದೂರು ಕೊಡುವ ಬೆದರಿಕೆ ಹಾಕಿದ್ದರಿಂದ ಈಕೆ ಬದುಕುಳಿದರೆ ನನಗೆ ಅಪಾಯವಿದೆ ಎಂಬ ಆಲೋಚನೆಗೆ ಬಂದ ಪ್ರಭಾಕರ ತನ್ನ ಸ್ನೇಹಿತನ ಜತೆ ಸೇರಿ ಆಕೆಯ ಹೊಟ್ಟೆಯನ್ನು ಚೂರಿಯಿಂದ ಇರಿದು ತನಗೆ ಬಾಳು ಕೊಡಲು ಬಂದವಳನ್ನೆ ಮಸಣಕ್ಕೆ ಕಳಿಸಿದ ಎನ್ನಲಾಗಿದೆ. ಶವವನ್ನು ಇಂಗುಗುಂಡಿಗೆ ಹಾಕಿ ಮಣ್ಣಿನಡಿ ಹೂತು ಹಾಕಿ ಸಭ್ಯನಂತೆ ತಿರುಗಾಡುತ್ತಿದ್ದ.

ಸತ್ಯ ಹೊರಬೀಳಲು ಹೆಚ್ಚು ದಿನ ಬೇಕಾಗಲಿಲ್ಲ. ಪೂರ್ಣಿಮಾ ಮತ್ತು ಪ್ರಭಾಕರ್ ಪ್ರೀತಿ ವ್ಯವಹಾರ ಹುಡುಗಿ ಮನೆಯವರಿಗೆ ಮೊದಲೇ ಗೊತ್ತಿದ್ದು ದರಿಂದ ಮಗಳು ನಾಪತ್ತೆಯಾದಾಗ ಮನೆಯ ವರು ಪ್ರಭಾಕರನ ಮೇಲೆ ಅನುಮಾನದಿಂದ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು.
ಅಲ್ಲಿನ ಎಸ್ಐ ಅಸ್ಮತ್ ಆಲಿ ಯುವತಿಯ ಮೊಬೈಲ್ ಕರೆಯನ್ನು ಪರಿಶೀಲಿಸಿ ದಾಗ ಆಕೆಯ ಕೊನೆಯ ಕರೆ ಪ್ರಭಾಕರ್ ಮೊಬೈಲ್ಗೆ ಬಂದದ್ದು ಬೆಳಕಿಗೆ ಬಂತು.

ಈ ಹಿನ್ನೆಲೆಯಲ್ಲಿ ಪ್ರಭಾಕರ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಈತನ ಪ್ರೇಯಸಿ ಪೂರ್ಣಿಮಾಳ ನಿಗೂಢ ಸಾವಿನ ರಹಸ್ಯ ಬೆಳಕಿಗೆ ಬಂತು. ಆರೋಪಿ ಪ್ರಭಾಕರ್ ಜೈಲು ಸೇರಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.