ಭಾನುವಾರ, ಮೇ 9, 2021
24 °C
ಪಂಚರಂಗಿ

`ಪ್ಲೇಬಾಯ್'ನಲ್ಲಿ ಗರ್ಭಿಣಿ ಕಿಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ ಹಾಲಿವುಡ್‌ನ ನಟೀಮಣಿಯಲ್ಲ. ಆದರೂ ಈಕೆಯ ಹೆಸರನ್ನು ಗೂಗಲಿಕರಿಸಿದರೆ ಬಗೆಬಗೆಯ ಚಿತ್ರಗಳ ತುಣುಕುಗಳು ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತವೆ. ಅದರಲ್ಲೂ `ಕಿಮ್ ಕರ್ದಷಿಯಾನ್ ಪ್ರೆಗ್ನೆಂಟ್' ಎಂಬ ಕೀವರ್ಡ್‌ಗಳನ್ನು ಗೂಗಲ್ ಹುಡುಕುತಾಣ ನೀಡುತ್ತದೆ.

ಇದಕ್ಕೆ ಕಾರಣ ಪಾಶ್ಚಾತ್ಯ ಜಗತ್ತು ಕಿಮ್ ಅವರನ್ನು ಗರ್ಭಿಣಿಯಾಗಿ ನೋಡುವ ತವಕದಲ್ಲಿದೆ. ಇದಕ್ಕಾಗಿಯೇ ತುಂಬಿದ ಹೊಟ್ಟೆ ಹೊತ್ತು ನಗ್ನವಾಗಿ ಆಕೆಯ ಪ್ಲೇಬಾಯ್ ನಿಯತಕಾಲಿಕೆಗೆ ಪೋಸು ನೀಡುವುದಾಗಿ ಘೋಷಿಸಿಕೊಂಡಿರುವುದು ಈಗ ಮನರಂಜನಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.ರ‌್ಯಾಪ್ ಗಾಯಕ ಕ್ಯಾನೆ ವೆಸ್ಟ್ ಅವರೊಂದಿಗೆ ಕೆಲವು ವರ್ಷಗಳಿಂದ ಕಿಮ್ ಗೆಳೆತನ ಹೊಂದಿದ್ದರು. ಅದರ ಫಲಶ್ರುತಿಯೇ ಕಿಮ್ ಗರ್ಭಿಣಿ ಆದದ್ದು. ಆದರೆ ಈ ನಡುವೆ ಕಿಮ್ ತಮ್ಮ ಗರ್ಭಾವಸ್ಥೆಯ ಸೌಂದರ್ಯವನ್ನು ಪ್ಲೇಬಾಯ್ ನಿಯತಕಾಲಿಕೆಗೆ ನೀಡಿ ಆ ಮೂಲಕ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವುದರ ಜತೆಗೆ ನಿಯತಕಾಲಿಕೆಯೂ ಪಿಟ್ಜಾದಂತೆ ಖರ್ಚಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಎಲ್ಲವೂ ಕೆಲವೇ ಕ್ಷಣಗಳಲ್ಲಿ ಮುಗಿದುಹೋಯಿತು. ಪ್ಲೇಬಾಯ್‌ಗಾಗಿ ನಾವೇನೂ ಹಣದ ಬೇಡಿಕೆ ಇಟ್ಟಿರಲಿಲ್ಲ. ಒಂದೊಮ್ಮೆ ಇದೇ ರೀತಿಯ ಪೋಸ್‌ಗಾಗಿ ಲಿಂಡ್ಸೆ ಲೊಹಾನ್ ಅವರನ್ನು ಕೇಳಿದ್ದರೆ ಅವರು ಕೋಟಿಗಟ್ಟಲೆ ಹಣ ಪಡೆಯುತ್ತಿದ್ದರು' ಎಂದು ಕಿಮ್ ಗೆಳೆಯ ಕ್ಯಾನೆ ಹೇಳಿದ್ದಾರೆ.ತಮ್ಮ ಈ ಸ್ಥಿತಿಯನ್ನು ಮುದ್ರಿಸಿದ ಪ್ಲೇಬಾಯ್ ನಿಯತಕಾಲಿಕೆಗಾಗಿ ಮಾಡಿದ ಸ್ಥಿರ ಚಿತ್ರೀಕರಣದ ಕುರಿತು ಸ್ವತಃ ಕಿಮ್ ಅವರಿಗೆ ಬೇಸರವಿದೆಯಂತೆ. ಆಕೆಗೆ ಈಗಲೂ ಇದು ಇಷ್ಟವಿಲ್ಲವಂತೆ. ಮ್ಯಾನೇಜರ್ ಕ್ರಿಷ್ ಹಾಗೂ ತಾಯಿಯ ಒತ್ತಾಯದ ಮೇರೆಗೆ ತಮ್ಮ ಗರ್ಭಾವಸ್ಥೆಯ ಬೆತ್ತಲೆ ಚಿತ್ರವನ್ನು ತೆಗೆಯಲು ಅವರು ಸಮ್ಮತಿಸಿದ್ದು. ಕಲಿಗಾಲ ಎಂದರೆ ಇದೇ ಅಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.