ಹಾವೇರಿ: `ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ. ಪಡಿತ ಚೀಟಿ ಇತ್ಯಾದಿ ಸೌಲಭ್ಯಗಳಿಂದ ನಿಜವಾದ ಫಲಾನುಭವಿಗಳು ವಂಚಿತರಾಗಿದ್ದಾರೆ~ ಎಂದು ಪ.ಜಾ.ಪ.ಪಂ. ಮತ್ತು ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು.

ನಗರದ ಮುರಘರಾಜೇಂದ್ರ ಮಠದ ಆವರಣದಲ್ಲಿ ಗುರುವಾರ ನಡೆದ ಪ.ಜಾ.ಪ.ಪಂ. ಮತ್ತು ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಜಿಲ್ಲಾ ಘಟಕದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪಡಿತರ ಚೀಟಿ ವಿತರಣೆಗೆ ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು. ಅಲ್ಲದೇ, ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಮೂಲಕ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದರು.

ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಾತ್ಕಾಲಿಕ ಗಣಕಯಂತ್ರದ ಸಿಬ್ಬಂದಿ ನೌಕರಿಯನ್ನು ಖಾಯಂಗೊಳಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಆಧುನಿಕರಿಬೇಕು ಎಂದ ಅವರು, ಈ ಎಲ್ಲ ಸಮಸ್ಯಗಳನ್ನು ಬಗೆಹರಿಸುವಂತೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಪ.ಜಾ.ಪ.ಪಂ. ಮತ್ತು ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಮುಖಂಡರಾದ ಐ.ಎ.ಹವಾಲ್ದಾರ, ವೆಂಕಟೇಶ ಬಿಜಾಪುರ, ಮಾರುತಿ ಕಿಳ್ಳಿಕ್ಯಾತರ, ಸಿ.ಡಿ.ಸಂಜೀವಣ್ಣನವರ, ಅಲ್ಲಾಭಕ್ಷ ನಾಗನೂರ, ಎಸ್.ಎಚ್.ಕಳ್ಳಿಮನಿ, ರಿಯಾಜ್ಅಹ್ಮದ್ ಶಿಡಗನಾಳ, ವಿಜಯಕುಮಾರ ಹೂಲಿಕಂತಿಮಠ, ಹನುಮಂತಪ್ಪ ಬಿದರಗಡ್ಡಿ, ಮರಿಯಪ್ಪ ದಾವಣಗೇರಿ, ಸುರೇಶ ಹಳ್ಳಳ್ಳಿ. ಸಂಜೀವಗಾಂಧಿ, ಅಬ್ದುಲ್ವಾಹಾಬ್ ಮಾಣಿಕ, ಅಮಾನುಲ್ಲಾ ದಾವಣಗೇರಿ, ಬಸವರಾಜ ಬಾಲಣ್ಣನವರ, ಈರಣ್ಣ ಚಕ್ರಸಾಲಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.