ಭಾನುವಾರ, ಜೂನ್ 13, 2021
22 °C

ಫಾದರ್ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಾದರ್ ನಾಟಕ ಪ್ರದರ್ಶನ

ಕಲಾ ರಂಗಲೋಕ ತಂಡವು ಮಂಗಳವಾರ ರಂಗಕಲಾವಿದ ರಾಜು ಸಖರಾಯಪಟ್ಟಣ ಅವರ ಸಹಾಯಾರ್ಥ `ಫಾದರ್~ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಮೂಲ: ಆಗಸ್ಟ್ ಸ್ಟ್ರಿಂಡ್‌ಬರ್ಗ್. ಎನ್.ಎಸ್. ವೆಂಕಟರಾಮ್ ಕನ್ನಡಕ್ಕೆ ತಂದಿದ್ದಾರೆ. ಭರಣಿ ನಿರ್ದೇಶನ ಮಾಡಿದ್ದಾರೆ.ಮಾಸ್ಟರ್ ಹಿರಣ್ಣಯ್ಯ ಅವರ ಜತೆ ತಮ್ಮ ಕಲಾ ಬದುಕನ್ನು ಆರಂಭಿಸಿದ ರಾಜು `ನಗೆ ಹಬ್ಬ~ ತಂಡ ನೀಡುವ ಕಾರ್ಯಕ್ರಮದಲ್ಲಿ ಜನಪ್ರಿಯತೆ ಗಳಿಸಿದ ಕಲಾವಿದ. ಸಖರಾಯಪಟ್ಟಣದಲ್ಲಿ ಹುಟ್ಟಿದ ಅವರು15 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿದ್ದಾರೆ. ತಮ್ಮ ಕುಟುಂಬಕ್ಕೆ ಅವರೇ ಆಧಾರ. ವಿಪರ್ಯಾಸವೆಂದರೆ ರಾಜು ಸದ್ಯ `ಬ್ರೇನ್ ಟ್ಯೂಮರ್~ನಿಂದ ಬಳಲುತ್ತಿದ್ದಾರೆ. ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿದ್ದು, ಏಳೆಂಟು ತಿಂಗಳು ಹಾಸಿಗೆ ಹಿಡಿಯಬೇಕಾದ ದುಃಸ್ಥಿತಿ ಇದೆ.

 

ಈ ಕಲಾವಿದನಿಗೆ ಆರ್ಥಿಕ ಸಹಾಯ ನೀಡಲು ನಗರದ ಕಲಾ ರಂಗಲೋಕ `ಫಾದರ್~ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಸಂಜೆ 6.30ಕ್ಕೆ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಅತಿಥಿಗಳು: ಟಿ.ಜಿ. ನರಸಿಂಹಮೂರ್ತಿ, ಡಿ.ಎನ್. ಗೌಡ, ಗಣೇಶ ಯಾಜಿ. ಅಧ್ಯಕ್ಷತೆ: ಮಾಸ್ಟರ್ ಹಿರಣ್ಣಯ್ಯ. ಪಾಸ್ ಹಾಗೂ ಮಾಹಿತಿಗೆ: 96862 21989, 96323 85927 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.