ಯಾಂಗಮ್, ದಕ್ಷಿಣ ಕೊರಿಯ (ಎಎಫ್ಪಿ): ಸೆಬಾಸ್ಟಿಯನ್ ವೆಟೆಲ್ ಭಾನುವಾರ ನಡೆದ ಕೊರಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ನಲ್ಲಿ ಅಗ್ರಸ್ಥಾನ ಪಡೆದರು. ಅವರ ಪ್ರಯತ್ನದ ಫಲವಾಗಿ ರೆಡ್ ಬುಲ್ ತಂಡ ಪ್ರಸಕ್ತ ಋತುವಿನ ತಂಡ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇನ್ನೂ ಮೂರು ರೇಸ್ಗಳು ಉಳಿದಿರುವಂತೆಯೇ ರೆಡ್ ಬುಲ್ ಈ ಸಾಧನೆ ಮಾಡಿದೆ.

ಜಪಾನ್ನಲ್ಲಿ ಕಳೆದ ವಾರ ನಡೆದ ರೇಸ್ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ವೆಟೆಲ್ ಪ್ರಸಕ್ತ ಋತುವಿನ ಚಾಲಕರ ವಿಭಾಗದ ಚಾಂಪಿಯನ್ ಎನಿಸಿಕೊಂಡಿದ್ದರು. ಇದೀಗ ತಂಡ ವಿಭಾಗದ ಪ್ರಶಸ್ತಿ ಕೂಡಾ ರೆಡ್ಬುಲ್ ಪಾಲಾಗಿದೆ.

ಜರ್ಮನಿಯ ವೆಟೆಲ್ಗೆ ಈ ವರ್ಷದಲ್ಲಿ ದೊರೆತ 10ನೇ ಗೆಲುವು ಇದು. ಎರಡನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ವೆಟೆಲ್ ಅದ್ಭುತಾ ಚಾಲನಾ ಕೌಶಲ ಮೆರೆದು ಅಗ್ರಸ್ಥಾನ ಗಿಟ್ಟಿಸಿದರು. `ಇಂದು ವಿಶೇಷ ದಿನ. ಮೊದಲು ಚಾಲಕ ವಿಭಾಗದ ಪ್ರಶಸ್ತಿ ಗೆದ್ದುಕೊಂಡೆವು. ಇದೀಗ ತಂಡ ವಿಭಾಗದ ಪ್ರಶಸ್ತಿಯೂ ನಮ್ಮ ಪಾಲಾಗಿದೆ~ ಎಂದು ರೇಸ್ನ ಬಳಿಕ ವೆಟೆಲ್ ಪ್ರತಿಕ್ರಿಯಿಸಿದರು.

ಮೆಕ್ಲಾರೆನ್ ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಎರಡನೇ ಸ್ಥಾನಕ್ಕೆ ಪಡೆದರೆ, ಬುಲ್ ತಂಡದ ಇನ್ನೊಬ್ಬ ಚಾಲಕ ಮಾರ್ಕ್ ವೆಬರ್ ಮೂರನೇ ಸ್ಥಾನ ಗಳಿಸಿದರು.

ರೆಡ್ಬುಲ್ ತಂಡ ಒಟ್ಟು 558 ಪಾಯಿಂಟ್ಗಳನ್ನು ಹೊಂದಿದೆ. ಮೆಕ್ಲಾರೆನ್ (418 ಪಾಯಿಂಟ್) ಮತ್ತು ಫೆರಾರಿ (310) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ.

ರೆಸ್ಟಾಗೆ ಒಂದು ಪಾಯಿಂಟ್: ಸಹಾರಾ ಫೋರ್ಸ್ ಇಂಡಿಯಾ ತಂಡದ ಪೌಲ್ ಡೆ ರೆಸ್ಟಾ 10ನೇ ಸ್ಥಾನ ಪಡೆಯುವ ಮೂಲಕ ಒಂದು ಪಾಯಿಂಟ್ ಗಿಟ್ಟಿಸಿಕೊಂಡರು.

ಇದೇ ತಂಡದ ಅಡ್ರಿಯಾನ್ ಸುಟಿಲ್ 10ನೇ ಸ್ಥಾನ ಪಡೆದರು. ಒಂಬತ್ತನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ರೆಸ್ಟಾ ಒಂದು ಸ್ಥಾನ ಕಳೆದುಕೊಂಡು ಸ್ಪರ್ಧೆ ಮುಕ್ತಾಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.