ಶನಿವಾರ, ಮೇ 28, 2022
26 °C

ಫಿಟ್‌ಜಿ ರಾಷ್ಟ್ರೀಯ ವಿಜ್ಞಾನ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಟಿ- ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಪ್ರತಿಷ್ಠಿತ ಸಂಸ್ಥೆ ಎಫ್‌ಐಐಟಿ ಜೆಇಇ ಭಾನುವಾರ ಬೆಂಗಳೂರು ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಶೋಧ ಪರೀಕ್ಷೆ ನಡೆಸಲಿದೆ.ಭವಿಷ್ಯದ ವಿಜ್ಞಾನ ಪ್ರತಿಭೆಗಳನ್ನು ಶೋಧಿಸುವ ಈ ಪರೀಕ್ಷೆಗೆ 8 ನೇ ತರಗತಿಯಿಂದ ಪ್ರಥಮ ಪಿಯು ವರೆಗಿನ ವಿದ್ಯಾರ್ಥಿಗಳು ಹಾಜರಾಗಬಹುದು. ಮುಂದಿನ ಕಲಿಕೆ, ವಿಷಯಗಳ ಬಗ್ಗೆ ತಿಳಿದುಕೊಂಡು ಕೋಚಿಂಗ್ ಪಡೆಯಲು ಇದರಿಂದ ಸಹಾಯ ಪಡೆಯಬಹುದು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಕಲಿಕಾ ಶಿಷ್ಯವೇತನ ದೊರೆಯಲಿದೆ.ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಗಳಿಸುವ ವಿದ್ಯಾರ್ಥಿಗೆ ಪದವಿ ಅಧ್ಯಯನ ಅವಧಿಯುದ್ದಕ್ಕೂ (4 ರಿಂದ 5 ವರ್ಷ) ವಾರ್ಷಿಕ 2 ಲಕ್ಷ ರೂ ನೀಡಲಾಗುತ್ತದೆ. ಇದಲ್ಲದೆ ಇತರ ರ‌್ಯಾಂಕ್ ವಿಜೇತರಿಗೂ ಆಕರ್ಷಕ ಬಹುಮಾನ ದೊರೆಯಲಿದೆ.ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಈ ಪರೀಕ್ಷೆ ನಡೆಸುತ್ತಿದ್ದೇವೆ. ಸ್ಪರ್ಧಾ ಪರಿಕ್ಷೆಗಳ ವಿಧಾನ ಮತ್ತು ತಮ್ಮ ಸಾಮರ್ಥ್ಯದ ಬಗ್ಗೆ ಅವರು ಈ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಾರೆ ಫಿಟ್‌ಜಿ ಬೆಂಗಳೂರು ಕೇಂದ್ರದ ಮುಖ್ಯಸ್ಥ ಗೌರವ್ ಗೋಯೆಲ್.

ಮಾಹಿತಿಗೆ: http://nstse.fiitjee.com.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.