ಸೋಮವಾರ, ಏಪ್ರಿಲ್ 19, 2021
25 °C

ಫಿಟ್ ಆಗಿದ್ದರೆ ನೆಹ್ರಾಗೆ ಸ್ಥಾನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪೂರ್ಣ ಫಿಟ್ ಆಗಿದ್ದರೆ ವೇಗಿ ಆಶೀಶ್ ನೆಹ್ರಾ ಅವರನ್ನು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡಿಸಬೇಕು ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.‘ನೆಹ್ರಾ ಫಿಟ್ ಆಗಿದ್ದರೆ ನಾನು ಅವರಿಗೆ ಖಂಡಿತ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೆ. ಏಕೆಂದರೆ ಅವರು ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರಲ್ಲಿ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯವಿದೆ. ಸ್ಲಾಗ್ ಓವರ್‌ಗಳಲ್ಲಿ ಕೂಡ ಚೆನ್ನಾಗಿ ಬೌಲ್ ಮಾಡುತ್ತಾರೆ’ ಎಂದಿದ್ದಾರೆ.ಫಿಟ್‌ನೆಸ್ ಸಮಸ್ಯೆ ಕಾರಣ ನೆಹ್ರಾ ಅವರನ್ನು ಈ ವಿಶ್ವಕಪ್‌ನ ಯಾವುದೇ ಪಂದ್ಯಗಳಲ್ಲಿ ಇದುವರೆಗೆ ಕಣಕ್ಕಿಳಿಸಿಲ್ಲ.

ಭಾರತ ಇದುವರೆಗೆ ಹತ್ತನೇ ವಿಶ್ವಕಪ್‌ನಲ್ಲಿ ಮೂರು ಪಂದ್ಯ ಆಡಿದೆ. ಇದರಲ್ಲಿ ಎರಡು ಗೆಲುವು ಹಾಗೂ ಒಂದರಲ್ಲಿ ಟೈ ಫಲಿತಾಂಶ ಕಂಡಿದೆ. ಆದರೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತುಂಬಾ ಸಮಸ್ಯೆ ಎದುರಿಸುತ್ತಿದೆ.ಆದರೆ ಚಾಂಪಿಯನ್‌ಷಿಪ್ ಇನ್ನೂ ಆರಂಭದ ಹಂತದಲ್ಲಿದೆ. ಮುಂದಿನ ಪಂದ್ಯಗಳಲ್ಲಿ ಭಾರತ ಸುಧಾರಿಸಿಕೊಳ್ಳಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.‘ಭಾರತ ಹೆಚ್ಚು ಚಿಂತಿಸಬೇಕಾದ ಅಗತ್ಯ ಇಲ್ಲ. ಉಪಖಂಡದ ಪಿಚ್‌ನಲ್ಲಿ ಸಾಂದರ್ಭಿಕ ಬೌಲರ್‌ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಉಳಿದವರು ಕೂಡ ಉತ್ತಮ ಪ್ರದರ್ಶನ ತೋರಬಹುದು, ಎಂದು ಅವರು ವಿವರಿಸಿದ್ದಾರೆ.‘ಬೌಲರ್‌ಗಳನ್ನು ಪರಿಗಣಿಸಿದರೆ ಸದ್ಯ 11 ಮಂದಿ ಆಟಗಾರರಲ್ಲಿ ಜಹೀರ್ ಸ್ಥಾನ ಖಚಿತ. ಆದರೆ ಮೂರು ಮಂದಿ ವೇಗಿಗಳನ್ನು ಕಣಕ್ಕಿಳಿಸಬೇಕೇ ಅಥವಾ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಬೇಕೇ ಎಂಬುದು ಪಿಚ್‌ನ ಪರಿಸ್ಥಿತಿಗೆ ಅನುಗುಣವಾಗಿ ಅವಲಂಬಿ ಸಿದೆ ಎಂದು ಹೇಳಿದ್ದಾರೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.