ಶುಕ್ರವಾರ, ಮೇ 29, 2020
27 °C

ಫೀನಿಕ್ಸ್: ವಿಭಿನ್ನ ವಿನ್ಯಾಸದ ಮಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೀನಿಕ್ಸ್: ವಿಭಿನ್ನ ವಿನ್ಯಾಸದ ಮಾಲ್

ಮುಂಬೈಯ ಫಿನಿಕ್ಸ್ ಜವಳಿ ಮಿಲ್ ಸಮೂಹ ಈಗ ವೈಟ್‌ಫೀಲ್ಡ್‌ನ ಮಹದೇವಪುರ- ಹೂಡಿ ರಸ್ತೆಯಲ್ಲಿ ಸುಮಾರು 550 ಕೋಟಿ ರೂಪಾಯಿ ಬಂಡವಾಳ ತೊಡಗಿಸಿ `ಫೀನಿಕ್ಸ್ ಮಾರ್ಕೆಟ್ ಸಿಟಿ~ ಮಾಲ್ ಆರಂಭಿಸಿದೆ.14 ಲಕ್ಷ ಚದರ ಅಡಿ ವಿಸ್ತಿರ್ಣ, 240ಕ್ಕೂ ಹೆಚ್ಚು ಮಳಿಗೆಗಳು, ಹೊರಗೆ ವಿಶಾಲವಾದ ಸ್ಥಳಾವಕಾಶ ಹೊಂದಿದ ಈ ಮಾಲ್‌ಗೆ ಪಾಶ್ಚಿಮಾತ್ಯ ದೇಶಗಳ ಮಾಲ್ ವಿನ್ಯಾಸವೇ ಪ್ರೇರಣೆ. ಹೀಗಾಗಿ ಇದರ ಒಳ ಮತ್ತು ಹೊರ ನೋಟ ಇತರ ಮಾಲ್‌ಗಳಿಗಿಂತ ವಿಭಿನ್ನ.ವಿದೇಶಿ ಮತ್ತು  ಖ್ಯಾತ ಹಾಗೂ ಸ್ವದೇಶಿ ಬ್ರಾಂಡ್‌ಗಳಿಗೆ ಅವಕಾಶ, ರಿಟೇಲ್, ಮನರಂಜನೆ ಜತೆಗೆ ವಸತಿ ಸೌಕರ್ಯಕ್ಕೂ ಅವಕಾಶವಿರುವಂತೆ ಮಾರ್ಕೆಟ್ ಸಿಟಿ ನಿರ್ಮಾಣವಾಗಿದೆ. ಗ್ರಾಹಕರಿಗೆ ಸುಖಕರ ಶಾಪಿಂಗ್ ಅನುಭವ ನೀಡಲಿದೆ ಎನ್ನುತ್ತಾರೆ ಫೀನಿಕ್ಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅತುಲ್ ರಾವ್ಖ್ಯಾತ ವಾಸ್ತುಶಿಲ್ಪಿ ಬಿನೋಯ್ ಅವರು ಈ ಮಾರ್ಕೆಟ್ ಸಿಟಿಯನ್ನು ವಿನ್ಯಾಸಗೊಳಿಸ್ದ್ದಿದಾರೆ. ಒಟ್ಟು 11 ಎಕರೆಯಲ್ಲಿ ಇದು ರಡಿಕೊಂಡಿದೆ. ಮಾಲ್‌ನಲ್ಲಿ ಹಲವು ತೆರೆದ ಜಾಗಗಳನ್ನು ಸೃಷ್ಟಿಸಲಾಗಿದೆ. ಸಾಮಾನ್ಯವಾಗಿ ದೊಡ್ಡ ಮಾಲ್‌ಗಳಲ್ಲಿ ಅಂಗಡಿ ಹುಡುಕಾಡಲು ಗ್ರಾಹಕರು ಅನುಭವಿಸುವ ಗೊಂದಲ ಇಲ್ಲಿಲ್ಲ.ಹೈಪರ್‌ಮಾರ್ಕೆಟ್, ಡಿಪಾರ್ಟ್‌ಮೆಂಟಲ್ ಸ್ಟೋರ್, ಆಂಕರ್ ಮತ್ತು ಸಣ್ಣ ಆಂಕರ್ ಮಳಿಗೆಗಳಿವೆ. 9 ಸ್ಕ್ರೀನ್ ಮಲ್ಟಿಪ್ಲೆಕ್ಸ್, ಮಕ್ಕಳ ಆಟದ ವಲಯ, ಉಪಹಾರ ಗೃಹಗಳೂ ತಲೆಯೆತ್ತಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.