ಶನಿವಾರ, ಜೂನ್ 19, 2021
27 °C

ಫುಕುಶಿಮಾ ನೆನಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವರ್ಷ ಸಂಭವಿಸಿದ ಶಕ್ತಿಶಾಲಿ ಭೂಕಂಪ ಮತ್ತು ಅದರಿಂದ ಉಂಟಾದ ಸುನಾಮಿ ಅಲೆಗಳಿಂದ ಜಪಾನ್ ದೇಶದ ಫುಕುಶಿಮಾದ ಮೂರು ಅಣುಸ್ಥಾವರಗಳಿಂದ ಅಣು ವಿಕಿರಣ ಸೋರಿಕೆಯಾಗಿತ್ತು. ಈ ಘಟನೆ ನಡೆದು ಮಾರ್ಚ್ 11ಕ್ಕೆ ಒಂದು ವರ್ಷ ತುಂಬುತ್ತದೆ.ಈ ದುರ್ಘಟನೆಯಿಂದಾಗಿ ಸೋರಿಕೆಯಾದ ಅಣುವಿಕಿರಣವು ಅಲ್ಲಿನ ಗಾಳಿ, ನೀರು, ಆಹಾರ ಪದಾರ್ಥ ಎಲ್ಲದರಲ್ಲೂ ಸೇರಿಕೊಂಡಿತು. ಹೊರ ಸೂಸಲ್ಪಟ್ಟ ಹೈಡ್ರೋಜನ್ ಎಷ್ಟಿತ್ತೆಂದರೆ ಹಿರೋಶಿಮಾ ನಾಗಸಾಕಿಯಲ್ಲಿ ಅಣು ಬಾಂಬ್ ದಾಳಿಯ ಸಂದರ್ಭಕ್ಕಿಂತ ಇಪ್ಪತ್ತು ಪಟ್ಟು ಅಧಿಕವಾಗಿತ್ತು.ಮನುಕುಲಕ್ಕೆ ಮಾರಕವಾಗಿರುವ ಅಣುಶಕ್ತಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಸಜ್ಜಾಗಿದೆ. ಇದರ ಅಂಗವಾಗಿ `ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್~ ಬೆಂಗಳೂರು ಶಾಖೆ ಗುರುವಾರದಿಂದ ಮಾ.11ರ ವರೆಗೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಗುರುವಾರ `ಎಟ್ ವಿ ಶೋ~ ಸಾಕ್ಷ್ಯಚಿತ್ರಪ್ರದರ್ಶನ ಏರ್ಪಡಿಸಿದೆ. ಸ್ಥಳ: ಯುಟಿಸಿ ಕ್ಯಾಂಪಸ್, 63, ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್. ಸಂಜೆ 6.ಶುಕ್ರವಾರ ಒಂದು ದಿನದ ಸಾರ್ವಜನಿಕ ವಿಚಾರಗೋಷ್ಠಿ. ವಿಷಯ: ಫುಕುಶಿಮಾ ಅಣು ದುರಂತ: ಭಾರತಕ್ಕೆ ಒಂದು ಪಾಠ. ಸ್ಥಳ: ಯುಟಿಸಿ ಕ್ಯಾಂಪಸ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ. ಬೆಳಿಗ್ಗೆ 10.ಶನಿವಾರ `ಫುಕುಶಿಮಾ ನೆನಕೆ~ ಅಣುಶಕ್ತಿ ಮುಕ್ತ ಜಗತ್ತಿಗಾಗಿ ಸಾರ್ವಜನಿಕ ರ‌್ಯಾಲಿ. ಸ್ಥಳ: ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ. ಸಂಜೆ 4.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.