ಫುಟ್ಬಾಲ್: ಎಡಿಇ ತಂಡಕ್ಕೆ ಗೆಲುವು

ಬೆಂಗಳೂರು: ಎಡಿಇ ತಂಡದವರು ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ಲಬ್ (ಬಿಡಿಎಫ್ಎ) ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿದ್ದಾರೆ.
ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಡಿಇ 1–0 ಗೋಲಿನಿಂದ ಎಚ್ಎಎಲ್ ತಂಡವನ್ನು ಮಣಿಸಿತು.ಎಡಿಇ ತಂಡದ ಕವಿ ಅರಸನ್ ಪಂದ್ಯದ 83ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಗೆದ್ದ ಬಿಯುಎಫ್ಸಿ: ಟೂರ್ನಿಯ ‘ಎ’ ಡಿವಿಷನ್ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಕ್ಲಬ್ (ಬಿಯುಎಫ್ಸಿ) 4–1 ಗೋಲುಗಳಿಂದ ಎಲ್ಆರ್ಡಿಇ ತಂಡವನ್ನು ಸೋಲಿಸಿತು.
ಬಿಯುಎಫ್ಸಿ ಪರ ನರೇಶ್ (28 ಮತ್ತು 38 ನೇ ನಿಮಿಷ) ಹಾಗೂ ಮಧು (73 ಮತ್ತು 80 ನೇ ನಿ) ತಲಾ ಎರಡು ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಎಲ್ಆರ್ಡಿಇ ತಂಡದ ಸುರೇಂದ್ರ (33ನೇ ನಿ) ಸೋಲಿನ ನಡುವೆಯೂ ಗಮನ ಸೆಳೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.