ಬುಧವಾರ, ಜೂನ್ 23, 2021
29 °C

ಫುಟ್‌ಬಾಲ್‌: ಫೈನಲ್‌ಗೆ ಮಿಜೋರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲಿಗುರಿ (ಐಎಎನ್‌ಎಸ್‌): ಮಿಜೋರಾಂ ತಂಡದವರು ಇಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ  ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದಾರೆ.



ಕಾಂಚನಜುಂಗಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಮಿಜೋರಾಂ 3–1 ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿತು.



ತಮಿಳುನಾಡು ಪರ ಎ.ರಯೇಗನ್‌ ಪಂದ್ಯದ ಮೊದಲಾರ್ಧದ 45ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.

ನಂತರದ ಅವಧಿಯಲ್ಲಿ  ಮಿಂಚಿನ ಆಟ ಪ್ರದರ್ಶಿಸಿದ ಮಿಜೋರಾಂನ ಡೇವಿಡ್‌ ಲಾಲ್ರಿನ್‌ಮೌನಾ (62ನೇ ನಿಮಿಷ), ಜಿಕೊ ಜೋರೆಮ್‌ಸಂಗಾ (94) ಹಾಗೂ ಎಫ್‌.ಲಾಲ್ರಿನ್‌ಪುಯಿಯಾ (119) ತಲಾ ಒಂದು  ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.